ಹಳೆಯ ದ್ವೇಷ ಹಿನ್ನೆಲೆ: ಕಲಬುರಗಿಯಲ್ಲಿ ವ್ಯಕ್ತಿ ನಡು ರಸ್ತೆಯಲ್ಲಿ ಕೊಲೆ

ಕಲಬುರಗಿ: ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ, ಕಲಬುರಗಿ ಹೊರವಲಯದ ಫಿರೋಜಾಬಾದ ಬಳಿ ನಡೆದಿದೆ.ಮೃತ ವ್ಯಕ್ತಿ ಕಲಬುರಗಿಯ ಕಿಂಗ್ ಪ್ಯಾಲೇಸ್ ಹಾಲ್ ಹತ್ತಿರದ ನಿವಾಸಿ ನಿಜಾಮುದ್ದೀನ್ ಬಾವರ್ಚಿ.
ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.