ಅಮೆರಿಕದಿಂದ ಅಕ್ರಮ ವಲಸಿಗರಿಗೆ ಆಫರ್ ಸ್ವದೇಶಕ್ಕೆ ಮರಳಿದರೆ 2,600 ಡಾಲರ್ ಬೋನಸ್ ಮತ್ತು ಉಚಿತ ವಿಮಾನ ಟಿಕೆಟ್

ವಾಷಿಂಗ್ಟನ್: ಅಮೆರಿಕದಲ್ಲಿನ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗರಿಗೆ ತಮ್ಮ ತವರಿಗೆ ಮರಳಲು ಅಮೆರಿಕ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು 2,600 ಡಾಲರ್ ನಿರ್ಗಮನ ಬೋನಸ್ ಸೇರಿದಂತೆ ಉಚಿತವಾಗಿ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗುವುದು ಎಂದು ಪ್ರಕಟಿಸಿದೆ.
ಅಕ್ರಮ ವಲಸಿಗರಲ್ಲಿ ಸ್ವಯಂ ಗಡೀಪಾರನ್ನು ಉತ್ತೇಜಿಸಲು ಅಮೆರಿಕ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ತಾಜ್ ಮಹಲ್ ಹಾಗೂ ಕೊಲೊಂಬಿಯಾ ಮತ್ತು ಚೀನಾದ ಪ್ರಖ್ಯಾತ ಸ್ಥಳಗಳ ಚಿತ್ರಗಳನ್ನು ಬಳಸಿದೆ.
“ನೀವು ಸ್ವಯಂ ಗಡೀಪಾರಾಗುವಾಗ ಉಚಿತ ವಿಮಾನ ಪ್ರಯಾಣ ಹಾಗೂ 2,600 ಡಾಲರ್ ಮೊತ್ತದ ನಿರ್ಗಮನ ಬೋನಸ್ ಪಡೆಯಿರಿ” ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಈ ಉಪಕ್ರಮಕ್ಕೆ ‘ಪ್ರಾಜೆಕ್ಟ್ ಹೋಮ್ ಕಮಿಂಗ್ ಎಂದು ಹೆಸರಿಸಲಾಗಿದ್ದು, ಕಳೆದ ವರ್ಷದ ಮೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೆ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.
