ಮಂಗಳೂರು ಮೊಸರು ಕುಡಿಕೆ ಉತ್ಸವಕ್ಕೆ ಅಡ್ಡಿ:ಕೇಸರಿ ಒಕ್ಕೂಟ(The Saffron Front) ಆಕ್ರೋಶ

ಮಂಗಳೂರು:ಮಂಗಳೂರಿನ ಪ್ರಸಿದ್ದ ಹಬ್ಬಗಳ ಆಚರಣೆಗಳಲ್ಲಿ ಒಂದಾದ ಉರ್ವಸ್ಟೋರಿನ
ಮೊಸರು ಕುಡಿಕೆ ಉತ್ಸವಕ್ಕೆ ಸ್ಥಳೀಯ ಪೊಲೀಸರಿಂದ ಅಡ್ಡಿಪಡಿಸಿ ಕಾರ್ಯಕ್ರಮವನ್ನು ಸ್ಥಗಿತ ಗೊಳಿಸುವಂತೆ ಮಾಡಿದ ಜಿಲ್ಲಾಡಳಿತ ಕ್ರಮಕ್ಕೆ ಕೇಸರಿ ಒಕ್ಕೂಟದ (The Saffron Front)ಸಂಸ್ಥಾಪಕರಾದ ಶ್ರೀ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತ ಪಡಿಸಿದರು.

ಕಾರ್ಯಕ್ರಮವನ್ನು ಸ್ಥಗಿತ ಗೊಳಿಸುವಂತೆ ಮಾಡಿದ ಪಿತೂರಿಯ ಹಿಂದೆ
ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯೇ ಅಥವ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಸ್ಥಳೀಯ ಬಿಜೆಪಿ ಶಾಸಕರ ಹೆಸರನ್ನು ಕೈ ಬಿಟ್ಟರುವುದು ಕಾರಣವೇ?ಎಂದು ರಾಜೇಶ್ ಪವಿತ್ರನ್ ಪ್ರಶ್ನಿಸಿದರು..
ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ಜಾತ್ಯತೀತ ಪಕ್ಷಗಳು ತಮ್ಮ ತಮ್ಮ ಪ್ರತಿಷ್ಠೆಗೆ ಹಿಂದೂ ಸಮಾಜವನ್ನು ಬಲಿಪಶು ಮಾಡುವುದನ್ನು ಕೇಸರಿ ಒಕ್ಕೂಟ (The Saffron Front) ಸಹಿಸದು..
ಮುಂಬರುವ ಹಬ್ಬಗಳಲ್ಲಿಯೂ ಇಂತಹ ಪರಿಸ್ಥಿತಿ ಬರಬಹುದು ಆದ್ದರಿಂದ ಹಿಂದೂಗಳು ಇನ್ನಾದರೂ ಈ ಪಕ್ಷಗಳ
ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಹಾಗೂ ನಮ್ಮ ಕಾರ್ಯಕ್ರಮಗಳ ಬಗ್ಗೆ ಇನ್ನು ಹೆಚ್ಚಿನ ಪೂರ್ವ ತಯಾರಿ ಮಾಡಬೇಕಾಗಿದೆ ಎಂದು ತಿಳಿಸಿದರು.
