Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಂಡು ಮಗುವಿನ ಹಂಬಲಕ್ಕೆ ಪತ್ನಿ, ಇಬ್ಬರು ಪುತ್ರಿಯರನ್ನ ಈಜುಕೊಳಕ್ಕೆ ತಳ್ಳಿ ಕೊಂದ ಪಾಪಿ ಪತಿ

Spread the love

ವಾರಂಗಲ್: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಈಜುಕೊಳದಲ್ಲಿ ಮುಳುಗಿ ಗರ್ಭಿಣಿ ಮಹಿಳೆ ಮತ್ತು ಇಬ್ಬರು ಪುತ್ರಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಇದು ಆಕಸ್ಮಿಕ ಸಾವಲ್ಲ, ಗಂಡು ಮಗುವಿನ ಹಂಬಲದಲ್ಲಿದ್ದ ಪತಿಯೇ ಪತ್ನಿ ಮತ್ತು ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ ಕೊಲೆ ಮಾಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಮೃತರನ್ನು ಫರ್ಹತ್ (26) ಮತ್ತು ಆಕೆಯ ಪುತ್ರಿಯರಾದ ಉಮೇರಾ (8) ಹಾಗೂ ಆಯೇಷಾ (6) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಈಜುಕೊಳದಲ್ಲಿ ಇವರ ಶವಗಳು ಪತ್ತೆಯಾಗಿದ್ದವು. ಈ ವೇಳೆ ಪತಿ ಅಜರುದ್ದೀನ್, ಇವರು ಆಕಸ್ಮಿಕವಾಗಿ ಕೊಳಕ್ಕೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ

ಫರ್ಹತ್ ಪ್ರಸ್ತುತ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದರು. ಸ್ಕ್ಯಾನಿಂಗ್‌ನಲ್ಲಿ ಅದು ಹೆಣ್ಣು ಮಗು ಎಂದು ತಿಳಿದು ಬಂದಿದ್ದರಿಂದ, ಗಂಡು ಮಗುವಿನ ಆಸೆ ಹೊಂದಿದ್ದ ಅಜರುದ್ದೀನ್ ಪತ್ನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಫರ್ಹತ್ ನಿರಾಕರಿಸಿದ್ದರಿಂದ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಈಜುಕೊಳದ ಸಿಸಿಟಿವಿ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತು. ಅಜರುದ್ದೀನ್ ನೀಡಿದ ಹೇಳಿಕೆಗಳಲ್ಲಿ ಅಸಮಂಜಸತೆ ಕಂಡುಬಂದ ಕಾರಣ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಫರ್ಹತ್ ಅವರ ತಂದೆ ಅಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಜರುದ್ದೀನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *