Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್‌ಸ್ಟಾಗ್ರಾಂ ಪ್ರೇಮಕ್ಕಾಗಿ ಹೆತ್ತವರನ್ನೇ ಕೊಂ*ದ ನರ್ಸ್: ಇಂಜೆಕ್ಷನ್ ನೀಡಿ ತಂದೆ-ತಾಯಿ ಹ*ತ್ಯೆ ಮಾಡಿದ ಮಗಳು ಅರೆಸ್ಟ್!

Spread the love

ಹೈದರಾಬಾದ್: ತೆಲಂಗಾಣದ ವಿಕಾರಬಾದ್ ಜಿಲ್ಲೆಯಲ್ಲಿ ತನ್ನ ಪ್ರೇಮ ವಿವಾಹಕ್ಕೆ ಒಪ್ಪದ ತಂದೆ-ತಾಯಿಯನ್ನು, ಹೆತ್ತ ಮಗಳೇ ಮತ್ತು ಬರುವ ಇಂಜೆಕ್ಷನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕತೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಬುಧವಾರ(ಜ.28) ವರದಿಯಾಗಿದೆ.
ವಿಕಾರಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದ ನಕ್ಕಳಿ ದಶರಥಮ್(58) ಮತ್ತು ನಕ್ಕಳಿ ಲಕ್ಷ್ಮಿ(54) ಎರಡು ದಿನಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಮೃತ ಮಗ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ.


ಆದ್ಯಾಗ್ಯೂ ಪೊಲೀಸರ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಬಯಲಿಗೆ ಬಂದಿದ್ದು, ಮೃತ ದಂಪತಿಯ ಮಗಳು ಸುರೇಖಾ ವೃತ್ತಿಯಲ್ಲಿ ನರ್ಸ್ ಆಗಿದ್ದು, ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನೊಬ್ಬನನ್ನು ಪ್ರೀತಿಸಿದ್ದಳು. ಮಗಳ ಪ್ರೀತಿಯ ವಿಷಯ ತಂದೆ-ತಾಯಿಗೆ ತಿಳಿದಿದ್ದು, ಆ ಹುಡುಗನ ಜೊತೆಗಿನ ಪ್ರೇಮ ವಿವಾಹಕ್ಕೆ ಒಪ್ಪಲ್ಲ ಎಂದು ಹೇಳಿದ್ದಾರೆ.

ಪ್ರೀತಿಸಿದ ಹುಡಗನ ಜೊತೆಗೆ ಮದುವೆಗೆ ಒಪ್ಪದಿದ್ದಕ್ಕಾಗಿ ಸಿಟ್ಟಾದ ನರ್ಸ್ ಸುರೇಖಾ, ತನ್ನ ಉದ್ಯೋಗವನ್ನೇ ಆಯುಧವನ್ನಾಗಿ ಮಾಡಿಕೊಂಡು, ಕೀಲು ನೋವಿನ ಇಂಜೆಕ್ಷನ್ ನೀಡುತ್ತಿದ್ದೇನೆ ಎಂದು ಹೇಳಿ ತಂದೆ-ತಾಯಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಟಮೈನ್‌ನಂತಹ ಅತ್ಯಂತ ಶಕ್ತಿಶಾಲಿ ಅರಿವಳಿಕೆ ಇಂಜೆಕ್ಷನ್ ನೀಡಿದ್ದು, ಬಳಿಕ ಪೋಷಕರು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾರೆ.
ಬಳಿಕ ಸುರೇಖಾ ತನ್ನ ಸಹೋದರ ಅಶೋಕ್ಗೆ ಕಾಲ್ ಮಾಡಿ ತಂದೆ-ತಾಯಿ ಪ್ರಜ್ಞೆ ತಪ್ಪಿದ್ದಾರೆ. ಮಾತನಾಡುತ್ತಿಲ್ಲ ಎಂದು ಅಳುತ್ತಾ ಹೇಳಿದ್ದಾಳೆ. ಹಾಗೆಯೇ ಶವಗಳ ಮುಂದೆ ಪ್ರಜ್ಞೆ ತಪ್ಪಿದವಳಂತೆ ನಾಟಕ ಮಾಡಿದ್ದಾಳೆ. ಬಳಿಕ ವಿಕಾರಾಬಾದ್ ಇಬ್ಬರ ಸಾವಿನ ಬಗ್ಗೆ ವಿಚಾರಣೆ ನಡೆಸಿದ ವೇಳೆ ಮಗಳು ಸುರೇಖಾ ಅಸಮಂಜಸ ಉತ್ತರ ನೀಡಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ. ಆರೋಪಿ ಮಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ (ಏಜೆನ್ಸೀಸ್).


Spread the love
Share:

administrator

Leave a Reply

Your email address will not be published. Required fields are marked *