Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್ನು ಹೊಸ ಗಾಡಿ ಜೊತೆ ದೊರೆಯಲಿದೆ 2 ಹೆಲ್ಮೆಟ್: ಹೊಸ ರೂಲ್ಸ್ ಎಂದಿನಿಂದ ಜಾರಿ

Spread the love

ದೇಶದಲ್ಲಿ ಅನೇಕ ಭಾರಿ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಕೊಡದ ಹಿನ್ನಲೆ ಅನೇಕ ಅಪಘಾತಗಳು ಉಂಟಾಗಿದ್ದು, ಅದನ್ನ ಸುಧಾರಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಹೆಜ್ಜೆ ಇಡುತ್ತಿದ್ದು, ಮುಂದಿನ ವರ್ಷದ ಜನವರಿಯಿಂದ ಎಂಜಿನ್ ಗಾತ್ರವನ್ನು ಲೆಕ್ಕಿಸದೆ, ಸ್ಕೂಟರ್‌ಗಳು, ಮೋಟಾರ್‌ಸೈಕಲ್‌ಗಳು ಮತ್ತು ಬೈಕ್‌ಗಳು ಸೇರಿದಂತೆ ಹೊಸದಾಗಿ ತಯಾರಿಸಲಾಗುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಕಡ್ಡಾಯವಾಗಿ ಇರಲೇಬೇಕು ಎನ್ನುವ ನಿಯಮ ಜಾರಿಗೆ ತರಲು ನಿರ್ಧಾರ ಮಾಡಿದೆ.

ಎರಡು ಹೆಲ್ಮೆಟ್‌ ಕೊಡಬೇಕು
ಎಲ್ಲಾ ದ್ವಿಚಕ್ರ ವಾಹನ ತಯಾರಕರು ಮತ್ತು ಡೀಲರ್‌ಶಿಪ್‌ಗಳು ಹೊಸ ವಾಹನದೊಂದಿಗೆ ಎರಡು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ನೀಡಬೇಕೆನ್ನುವ ನಿಯಮವನ್ನ ಸಹ ಜಾರಿಗೆ ತರಲಿದ್ದು, ಇದರಿಂದ ಅನೇಕ ಅಪಘಾತಗಳನ್ನ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಸಚಿವಾಲಯದ ಅನಿಸಿಕೆ. ಸಚಿವಾಲಯದ ಮಾಹಿತಿ ಪ್ರಕಾರ ಬಹುತೇಕ ರಸ್ತೆ ಅಪಘಾತಗಳ ಸಾವುಗಳ ಪೈಕಿ ಶೇಕಡಾ 44ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೇ ಅಥವಾ ಸರಿಯಾದ ಮಾದರಿಯ ಹೆಲ್ಮೆಟ್‌ ಇಲ್ಲದೇ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ಧಾರೆ.

ಶೇಕಡಾ 40ರಷ್ಟು ವಾಹನಗಳಲ್ಲಿ ಇಲ್ವಂತೆ ಜೀವ ಉಳಿಸುವ ವ್ಯವಸ್ಥೆ
ಸದ್ಯಕ್ಕೆ 125 ಸಿಸಿಗಿಂತ ಹೆಚ್ಚಿನ ಬೈಕ್‌ಗಳಲ್ಲಿ ಮಾತ್ರ ಎಬಿಎಸ್ ಕಡ್ಡಾಯ ಮಾಡಲಾಗಿದೆ. ಅಂದರೆ ರಸ್ತೆಯಲ್ಲಿರುವ ಸುಮಾರು ಶೇಕಡಾ 40ರಷ್ಟು ದ್ವಿಚಕ್ರ ವಾಹನಗಳಲ್ಲಿ ಈ ಜೀವ ಉಳಿಸುವ ವ್ಯವಸ್ಥೆ ಇಲ್ಲ. ಹಾಗಾಗಿ ಈಗ ಹೊಸ ನಿಯಮವನ್ನ ತರಲಾಗಿದೆ. ಹೊಸ ನಿಯಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ನಿರೀಕ್ಷೆಯಿದ್ದು, 2026 ರಿಂದ ಎಲ್ಲವೂ ಬದಲಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *