ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಅಪರಾಧಿಗಳಿಂದ ಕುಖ್ಯಾತ ಗ್ಯಾಂಗಸ್ಟರ್ ಹತ್ಯೆ

ಬಿಹಾರ: ಪಾಟ್ನಾ ಪ್ರದೇಶದಲ್ಲಿ ಅಪರಾಧಿಗಳ ಅಟ್ಟಹಾಸ ಮುಂದುವರೆದಿದ್ದು, ಬೆಳಗ್ಗೆ ನಗರದ ದೊಡ್ಡ ಪಾರಸ್ (Paras) ಎನ್ನುವ ಖಾಸಗಿ ಆಸ್ಪತ್ರೆ ನುಗ್ಗಿದ ಅಪರಾಧಿಗಳು ರೋಗಿಯೊಬ್ಬನ ಕೊಲೆ ಮಾಡಿದ್ದಾರೆ. ಈ ಕೊಲೆ ಪಾರಸ್ ಆಸ್ಪತ್ರೆಯ ಐಸಿಯು (ICU) ವಾರ್ಡ್ನಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಆಸ್ಪತ್ರೆಯ ಐಸಿಯು ವಾರ್ಡ್ಗೆ ಅಪರಾಧಿಗಳು ಹೋಗುತ್ತಿರುವ ಸಿಸಿಟಿವಿ ಕ್ಯಾಮೆರದ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಇದರಲ್ಲಿ 5 ಅಪರಾಧಿಗಳು ಕೈಯಲ್ಲಿ ಪಿಸ್ತೂಲುಗಳನ್ನ ಹಿಡಿದುಕೊಂಡು, ಯಾವುದೇ ಭಯ ಇಲ್ಲದೇ ಐಸಿಯು ಕಡೆ ಹೋಗುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಚಂದನ್ ಮಿಶ್ರಾ ಎನ್ನುವ ಬಕ್ಸಾರ್ನ ಕುಖ್ಯಾತ ಅಪರಾಧಿಯನ್ನ ಪರಾಸ್ ಆಸ್ಪತ್ರೆಯ ಐಸಿಯುನಲ್ಲಿ ಆಡ್ಮಿಟ್ ಮಾಡಲಾಗಿತ್ತು. ಈ ಸಮಯದಲ್ಲಿ ಆಸ್ಪತ್ರೆಗೆ ಬಂದ 5 ಜನ ಆಗಂತುಕರು ಐಸಿಯುನಲ್ಲಿದ್ದ ಚಂದನ್ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.

ಪರೋಲ್ ಮೇಲಿದ್ದ ಮೃತ ಆರೋಪಿ
ಮಾಹಿತಿಗಳ ಪ್ರಕಾರ ಚಂದನ್ ಮಿಶ್ರಾ ವಿರುದ್ಧ ಡಜನ್ಗಟ್ಟಲೆ ಕೊಲೆ ಆರೋಪಗಳಿದ್ದು, ವೈದ್ಯಕೀಯ ಕಾರಣಗಳಿಗಾಗಿ ಪೆರೋಲ್ ಮೇಲೆ ಹೊರಬಂದು ಪ್ಯಾರಾಸ್ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯಕೀಯ ಆರೈಕೆಯಲ್ಲಿರುವಾಗಲೇ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಪಾಟ್ನಾ ಎಸ್ಎಸ್ಪಿ ಕಾರ್ತಿಕಾಯ್ ಶರ್ಮಾ ಅವರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಈ ದಾಳಿಯನ್ನು ವಿರೋಧಿ ಗ್ಯಾಂಗ್ನ ಸದಸ್ಯರು ನಡೆಸಿದ್ದಾರೆ. ಚಂದನ್ ಶೇರು ಗ್ಯಾಂಗ್ ಅವರು ಮಾಡಿರಬಹುದು ಎನ್ನಲಾಗುತ್ತಿದೆ. ಚಂದನ್ನನ್ನು ಈ ಹಿಂದೆ ಬಕ್ಸಾರ್ನಿಂದ ಭಾಗಲ್ಪುರ ಜೈಲಿಗೆ ವರ್ಗಾಯಿಸಲಾಗಿತ್ತು ಮತ್ತು ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ದಾಳಿ ಮಾಡಿದವರನ್ನ ಪತ್ತೆ ಹಚ್ಚಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಸ್ಪರ್ಧಿ ಬಣಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ, ಆಸ್ಪತ್ರೆಗಳ ಸುತ್ತಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಅನುಮಾನ ಇರುವ ಆರೋಪಿಗಳ ಚಲನವಲನವನ್ನ ಸಹ ಗಮನಿಸಲಾಗುತ್ತಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಪತ್ನಿಯನ್ನ ಕೊಲೆ ಮಾಡಿದ್ದ ಪತಿರಾಯ
ಇತ್ತೀಚಿನ ದಿನಗಳಲ್ಲಿ ಕೊಲೆ ಸುಲಿಗೆ ಹೆಚ್ಚಾಗುತ್ತಲೇ ಇದೆ. ಗಂಡ ಹೆಂಡತಿಯನ್ನ ಸಾಯಿಸುವುದು, ಹೆಂಡತಿ ಗಂಡನನ್ನ ಸಾಯಿಸುವುದು. ಸ್ನೇಹಿತರ ನಡುವೆ ಜಗಳ ಇದು ನಡೆಯುತ್ತಲೇ ಇದೆ. ಕೆಲ ದಿನಗಳ ಹಿಂದೆ ಕೊಲೆ ಯತ್ನದ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಹೇಳುತ್ತಾಳೆ ಎಂದು ಪತಿಯೋರ್ವ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ದಾರುಣ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಸುಮಾರು 11 ವರ್ಷಗಳಿಂದ ಪತಿಯಿಂದ ದೂರವಾಗಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ಜಮುನಾ ಪತಿಯ ವಿರುದ್ಧ ಕೊಲೆಗೆ ಯತ್ನಿಸಿರುವ ಬಗ್ಗೆ ದೂರು ದಾಖಲಿಸಿದ್ದಳು. ಈ ಸಂಬಂಧ 11 ವರ್ಷದ ಕೇಸ್ ವಾಪಸ್ ಪಡೆಯುವಂತೆ ಪತಿ ಗುರುಮೂರ್ತಿ ಒತ್ತಾಯಿಸುತ್ತಿದ್ದ, ಪತಿಯ ಮಾತಿಗೆ ಬಗ್ಗದ ಪತ್ನಿ ಕೋರ್ಟ್ ಅಲ್ಲಿ ನಿನ್ನ ಬಗ್ಗೆ ಹೇಳಿ ನಿನಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಳು. ಇದರಿಂದ ಸಿಟ್ಟಾದ ಪತಿ ಗುರುಮೂರ್ತಿ ಕಳೆದ ಮೂರು ದಿನಗಳ ಹಿಂದೆ ಪತ್ನಿ ಜಮುನಾ ಕಾಲು ಚೈನು ಖರೀದಿಗೆ ಚಿನ್ನದ ಅಂಗಡಿಗೆ ಬಂದಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಚಲನವಲನ ಗಮನಿಸಿ ಪ್ಲಾನ್ ಮಾಡಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಪರಾರಿಯಾಗಿದ್ದಾನೆ.
