ಒಪ್ಪಿಗೆಯ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅತ್ಯಾಚಾರವಲ್ಲ – ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಆರಂಭದಲ್ಲಿ ಪರಸ್ಪರ ಸಮ್ಮತಿ ಮೇರೆಗೆ ಇಬ್ಬರ ನಡುವೆ ಸಂಬಂಧ (Relationship) ಚೆನ್ನಾಗಿದ್ದು, ಕೊನೆಗೆ ಯಾವುದೇ ಕಾರಣಕ್ಕೆ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ನೀಡಿದೆ.

ಮಹಿಳೆಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ ಎಂಬಾತನ ಒಂದು ವರ್ಷಗಳ ಕಾಲ ಆತ್ಮಿಯವಾಗಿದ್ದರು. ಬಳಿಕ ಮಹಿಳೆ, ಸಾಂಪ್ರಸ್ ಆಂಥೋಣಿ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಕೇಸಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಾಟ್ಸಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಮಹಿಳೆ ಸಾಂಪ್ರಸ್ ಆಂಥೋಣಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.
ಇನ್‌ಸ್ಟಾಗ್ರಾಂನಲ್ಲಿ ಇಬ್ಬರು ಕೆಟ್ಟ ಅಭಿರುಚಿಯ ಚಾಟಿಂಗ್ ಮಾಡಿದ್ದರು. ಪರಸ್ಪರ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಆದ್ರೆ, ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್‌ಸ್ಟಾಗ್ರಾಂ ಚಾಟಿಂಗ್ ಪರಿಗಣಿಸಿರಲಿಲ್ಲ. ಇವುಗಳನ್ನು ಪರಿಶೀಲಿಸಿದರೆ ಮಹಿಳೆಯ ದೂರು ಸುಳ್ಳೆಂದು ಸಾಬೀತಾಗಿದೆ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.