Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನ,ಬಂಗಾರ ಅಲ್ಲ! ಬ್ರ್ಯಾಂಡೆಡ್ ಶೂ ಟಾರ್ಗೆಟ್ ಮಾಡಿ ಕಳ್ಳತನ

Spread the love

ಬೆಂಗಳೂರು :ನಗರದಲ್ಲಿ ದಿನೇ ದಿನೇ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದೆ.ಮನೆಗೆ ಕನ್ನ ಹಾಕುವ ಗ್ಯಾಂಗ್ ಅಥವಾ ಸರಗಳ್ಳತನದ (Chain snatch) ಪ್ರಕರಣಗಳು ಮಾತ್ರವಲ್ಲ..ಮನೆಯ ಹೊರಗೆ ಬಿಟ್ಟ ಬ್ರ್ಯಾಂಡೆಡ್ ಶೂಗಳನ್ನು (Branded shoes) ಕೂಡ ಖದೀಮರು ಬಿಡುತ್ತಿಲ್ಲ.ಬೆಂಗಳೂರಿನ (Bangalore) ಉಲ್ಲಾಳ ಮುಖ್ಯರಸ್ತೆಯಲ್ಲಿರುವ ರೈಲ್ವೇ ಲೇಔಟ್ ನಲ್ಲಿ ದುಬಾರಿ ಶೂಗಳ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.ಈ ಕಳ್ಳತನದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ರಾತ್ರಿ ವೇಳೆ ಮೆಲ್ಲಗೆ ಬರುವ ಖದೀಮನೊಬ್ಬ ಹಲವಾರು ಮನೆಗಳ ಮುಂದೆ ಇರುವ,ಗೇಟ್ ಗಳ ಒಳಗೆ ಬಿಟ್ಟಿರುವ ಶೂಗಳನ್ನು ಹುಡುಕಾಡುತ್ತಾ, ಬ್ರ್ಯಾಂಡೆಡ್ ಶೂಗಳನ್ನು ಕದ್ದು ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೇವಲ ಬ್ರ್ಯಾಂಡೆಡ್ ಶೂಗಳನ್ನೇ ಟಾರ್ಗೆಟ್ ಮಾಡುವ ಈತ ಜನವಸ್ತಿ ಬಡಾವಣೆಗಳಲ್ಲಿ ಸಾಲಾಗಿ ಮನೆಗಳಿರುವ ರಸ್ತೆಗಳಿಗೆ ನುಗ್ಗಿ ದುಬಾರಿ ಶೂ ಗಳನ್ನು ಹುಡುಕಾಡಿ ಹೊತ್ತೊಯ್ದಿದ್ದಾನೆ.ಈತ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಾರಣ ವಿಡಿಯೋ ಲಭ್ಯವಾಗಿದ್ದರೂ ಕಳ್ಳನ ಗುರುತು ಮಾತ್ರ ಪತ್ತೆಯಾಗಿಲ್ಲ.ಈತ ಪ್ರೊಫೆಷನಲ್ ಕ್ರಿಮಿನಲ್ ಆಗಿದ್ದು ತನ್ನ ಗುರುತು ಪತ್ತೆ ಸಿಗದಂತೆ ಎಚ್ಚರ ವಹಿಸಿದ್ದಾನೆ ಎನ್ನಲಾಗಿದೆ.ಇನ್ನು ಯಾವುದೋ ಒಂದು ಮನೆಯಲ್ಲಿ ಹೀಗೆ ಕಳ್ಳತನ ಎಸಗಿ ಈತ ಪ್ರಾರಿಯಾಗಿಲ್ಲ.ಒಂದರ ನಂತರ ಒಂದರಂತೆ ಸುಮಾರು 8-10 ಮನೆಗಳಲ್ಲಿ ಈ ರೀತಿ ಕಳ್ಳತನ ಮಾಡಿದ್ದಾನೆ.ಬೆಳಗಾಗೆದ್ದು ಜನ ತಮ್ಮ ಶೂಗಳು ಕಣ್ಮರೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ.ಈ ವೇಳೆ ಸಿಸಿಟಿವಿ ಪರಿಶೀಲಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಹೀಗೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಇದೇ ರೀತಿಯಲ್ಲಿ ವಾಹನಗಳಿಂದ ಪೆಟ್ರೋಲ್ ಕಳುವಾಗಿತ್ತು.ಈ ಬೆನ್ನಲೇ ಈಗ ಈ ಘಟನೆ ಆತಂಕ ಹುಟ್ಟಿಸಿದೆ.ಹೀಗೆ ಶೂ ಕಳ್ಳನ ಕೃತ್ಯ ಕಂಡು ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದು ರೈಲ್ವೇ ಲೇಔಟ್ ನ ನಾಗರಿಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಖತರ್ನಾಕ್ ಮೊಬೈಲ್‌ ಕಳ್ಳನ ಬಂಧನ, ರೂ.28.32 ಲಕ್ಷ ಮೌಲ್ಯದ ಬೆಲೆ ಬಾಳುವ ಮೊಬೈಲ್ಸ್ ಜಪ್ತಿ!

3 ಕೆ.ಜಿ ಚಿನ್ನ ಕದ್ದ ಮೂವರು ಖದೀಮರು ಅರೆಸ್ಟ್:

ಕಲಬುರಗಿ: ಹಾಡಹಗಲೇ ಚಿನ್ನದ ಅಂಗಡಿಯಲ್ಲಿ ಮೂರು ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿ ನಡೆಸಿ, ಜುಲೈ 11 ರಂದು ಹಾಡಹಗಲೇ ಕಲಬುರಗಿಯ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಮಹ್ಮದ್ ಸಬ್ಕಾತುಲ್ಲಾ ಮಲ್ಲಿಕ್ ತಂದೆ ಮಹ್ಮ ಕಿಬಾರಿಯಾ ಮುಲ್ಲಿಕ್ ಅವರ ಒಡೆತನಕ್ಕೆ ಸೇರಿದ ಚಿನ್ನದ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣ ಸಂಬಂಧ ಇದೀಗ ಮೂವರು ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಆರೋಪಿಗಳಿಂದ ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಹಾಗೂ ಸುಮಾರು 4.80 ಲಕ್ಷ ರೂ.ಗಳ ನಗದು ಸೇರಿ ಒಟ್ಟು 2,14,80,000ರೂ.ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಂಧಿತರನ್ನು ಪಶ್ಚಿಮಬಂಗಾಳದ ಪರಗಣ ಜಿಲ್ಲೆಯ ಕನಸೋನಾ ಗ್ರಾಮದ, ಹಾಲಿ ವಸ್ತಿ ಮುಂಬಯಿಯ ಮನಕುರ್ದ ವೆಸ್ಟ್ನ ಪಿಎಂಜಿ ಕಾಲೋನಿ ನಿವಾಸಿ ಹಾಗೂ ಬಟ್ಟೆ ವ್ಯಾಪಾರಿ ಅಯೋದ್ಯಾ ಪ್ರಸಾದ್ ಚವ್ಹಾಣ್ ತಂದೆ ಸೀತಾರಾಮ್ ಚವ್ಹಾಣ್ (48), ಪಶ್ವಿಮಬಂಗಾಳ್ ಜಿಲ್ಲೆಯ ಹೂಗ್ಲಿ ಜಿಲ್ಲೆಯ ಶಥಿತನ ಗ್ರಾಮದ ಚಿನ್ನದ ವ್ಯಾಪಾರಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ (40) ಮತ್ತು ಮಹಾರಾಷ್ಟçದ ಮುಂಬಯಿ ನಗರದ ಪತ್ರಾಚಾಳ ಮಾನ್ ಕೂರ್ದನ ಟೇಲರ್ ಸೋಹೆಲ್ ಶೇಕ್ ಅಲಿಯಾಸ್ ಬಾದಶಾ ತಂದೆ ಮೊಹ್ಮದ್ ಇಸ್ಮಾಯಿಲ್ ಶೇಕ್ (30) ಎಂದು ಗುರುತಿಸಲಾಗಿದೆ ಎಂದರು.

ಪ್ರಕರಣದಲ್ಲಿ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತರಿಂದ ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಜಾಗೂ ನಗದು 4.80 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆಕೋರರ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಹೀಗಾಗಿ ಆ ತಂಡಗಳು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿತು ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಅಂಶಗಳ ಮೂಲಕ ಮೂವರು ದರೋಡೆಕೋರರನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳು ದರೋಡೆ ಮಾಡಿದ ನಂತರ ನಗರದಿಂದ ಬಸ್ಸಲ್ಲಿ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ. ನಂತರ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಿದ್ದಾರೆ. ಪೋಲಿಸ್ ವಿಶೇಷ ತಂಡವು ಆರೋಪಿಗಳ ಬೆನ್ನು ಬಿದ್ದಿದ್ದರಿಂದ ತಾವು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಎಲ್ಲಿಯೂ ಮಾರಾಟ ಮಾಡಲು ಆಗಿಲ್ಲ. ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದರು.

ಈ ಪ್ರಕರಣದಲ್ಲಿ ಫಾರೂಕ್ ಅಹಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ ಪ್ರಮುಖ ಆರೋಪಿಯಾಗಿದ್ದಾನೆ. ಈತ ನಗರದ ಮೋಮಿನಪುರದಲ್ಲಿ ಕಳೆದ ಮೂರು ವರ್ಷಗಳಿಂದ ಚಿನ್ನದಂಗಡಿ ಹಾಕಿಕೊಂಡಿದ್ದ. ವ್ಯಾಪಾರ ಸರಿಯಾಗಿ ಆಗದೇ ಇದ್ದುದರಿಂದ ನಷ್ಟದಲ್ಲಿದ್ದ. ಸುಮಾರು 37 ರಿಂದ 40 ಲಕ್ಷ ರೂ.ಗಳಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಪರಿಚಿತ ಅಂಗಡಿಯ ಮಹ್ಮದ್ ಸಬ್ಕಾತುಲ್ಲಾ ಮುಲ್ಲಿಕ್ ಅಂಗಡಿಯ ದರೋಡೆ ಕುರಿತು ಸಂಚು ರೂಪಿಸಿದ. ಹಾಗಾಗಿ ಆತ ಪಶ್ಚಿಮಬಂಗಾಳದ ಪರಗಣ ಜಿಲ್ಲೆಯ ಕನಸೋನಾ ಗ್ರಾಮದ, ಹಾಲಿ ವಸ್ತಿ ಮುಂಬಯಿಯ ಮನಕುರ್ದ ವೆಸ್ಟ್ನ ಪಿಎಂಜಿ ಕಾಲೋನಿ ನಿವಾಸಿ ಹಾಗೂ ಬಟ್ಟೆ ವ್ಯಾಪಾರಿ ಅಯೋದ್ಯಾ ಪ್ರಸಾದ್ ಚವ್ಹಾಣ್ ತಂದೆ ಸೀತಾರಾಮ್ ಚವ್ಹಾಣ್‌ನಿಗೆ ಸಂಪರ್ಕಿಸಿದ. ಆತನ ಪತ್ನಿಗೆ ಹೃದಯ ಕಾಯಿಲೆ ಇದ್ದುದರಿಂದ ಆತನೊಂದಿಗೆ ಅತನ ಪತ್ನಿಯನ್ನು ನಗರಕ್ಕೆ ಕರೆತರಿಸಿದ್ದು, ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಆ ಕುರಿತು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ನಂತರ ಮೂರನೇ ಆರೋಪಿ ಪಶ್ವಿಮಬಂಗಾಳ್ ಜಿಲ್ಲೆಯ ಹೂಗ್ಲಿ ಜಿಲ್ಲೆಯ ಶಥಿತನ ಗ್ರಾಮದ ಚಿನ್ನದ ವ್ಯಾಪಾರಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ ಅಲ್ಲದೇ ಇನ್ನಿಬ್ಬರು ಆರೋಪಿಗಳು ಸೇರಿ ಒಟ್ಟು ಐವರು ದರೋಡೆ ಪ್ರಕರಣದಲ್ಲಿ ತೊಡಗಿಸಿಕೊಂಡರು ಎಂದು ಅವರು ವಿವರಿಸಿದರು.


Spread the love
Share:

administrator

Leave a Reply

Your email address will not be published. Required fields are marked *