Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಂಭೀರ್ ಅಲ್ಲ, ದ್ರಾವಿಡ್ ಕಾರಣ: ಚಾಂಪಿಯನ್ಸ್ ಟ್ರೋಫಿ ಗೆಲುವಿನ ಶ್ರೇಯಸ್ಸನ್ನು ಮಾಜಿ ಕೋಚ್‌ಗೆ ನೀಡಿದ ರೋಹಿತ್ ಶರ್ಮಾ!

Spread the love

2025 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು. ಈ ವೇಳೆ ಭಾರತ ತಂಡದ ಕೋಚ್ ಆಗಿದ್ದವರು ಗೌತಮ್ ಗಂಭೀರ್. ಆದರೀಗ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕೊಡುಗೆ ಇದೆ ಎಂದಿದ್ದಾರೆ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ.
ಗಂಭೀರ್ ಅಲ್ಲ, ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ದ್ರಾವಿಡ್ ಕಾರಣ: ರೋಹಿತ್ ಶರ್ಮಾ

2025ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾರಣ… ಹೀಗಂದಿರುವುದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲದೇ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದು ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಐಸಿಸಿ ಟ್ರೋಫಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಅತ್ತ ಗೌತಮ್ ಗಂಭೀರ್ ಅವರ ಕೋಚಿಂಗ್​​ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಟ್ರೋಫಿ ಗೆದ್ದರೂ, ಈ ಯಶಸ್ಸಿಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ಕಾರಣ ಎಂದಿದ್ದಾರೆ ರೋಹಿತ್ ಶರ್ಮಾ. ಮುಂಬೈನಲ್ಲಿ ನಡೆದ ಸಿಯೆಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಚಾಂಪಿಯನ್ಸ್ ಟ್ರೋಫಿ ತಂಡದ ಮೇಲೆ ನನಗೆ ಅಭಿಮಾನವಿತ್ತು. ಅವರೊಂದಿಗೆ ಆಡುವುದನ್ನು ಇಷ್ಟಪಡುತ್ತಿದ್ದೆ. ನಾವೆಲ್ಲರೂ ಹಲವು ವರ್ಷಗಳಿಂದ ಭಾಗವಹಿಸಿದ್ದ ಪ್ರಯಾಣವಿದು. ಇದು ಒಂದು ಅಥವಾ ಎರಡು ವರ್ಷಗಳ ಕೆಲಸವಾಗಿರಲಿಲ್ಲ. ಟ್ರೋಫಿ ಗೆಲ್ಲಲು ನಾವು ವರ್ಷಗಳ ಕಾಲ ಯೋಜನೆ ರೂಪಿಸಿದ್ದೆವು.

ಹಲವು ಬಾರಿ ಟ್ರೋಫಿ ಗೆಲ್ಲುವ ಹತ್ತಿರ ಬಂದೆವು, ಆದರೆ ಅಂತಿಮ ಹಂತವನ್ನು ದಾಟಲು ಸಾಧ್ಯವಾಗಲಿಲ್ಲ. ಆಗ ನಾವು ವಿಭಿನ್ನವಾದದ್ದನ್ನು ಪ್ರಯತ್ನಿಸಬೇಕು ಎಂದು ಅರಿತುಕೊಂಡೆವು. ಅದಕ್ಕೆ ಎರಡು ಹಾದಿಗಳಿವೆ ಎಂಬುದನ್ನು ಕಂಡುಕೊಂಡೆವು, ಮೊದಲನೆದು – ಏನನ್ನಾದರೂ ಮಾಡುವ ಆಲೋಚನೆ, ಎರಡನೇದು ನಿಜವಾಗಿಯೂ ಮಾಡುವುದು. ಇದು ಒಬ್ಬ ಅಥವಾ ಇಬ್ಬರು ಆಟಗಾರರಿಂದ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿತ್ತು. ಪ್ರತಿಯೊಬ್ಬರೂ ಆ ದೃಷ್ಟಿಕೋನವನ್ನು ಒಪ್ಪಿಕೊಳ್ಳಬೇಕಾಗಿತ್ತು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಎಲ್ಲಾ ಆಟಗಾರರು ಆ ಮನಸ್ಥಿತಿಯನ್ನು ಬೆಳೆಸಿಕೊಂಡರು. ಪಂದ್ಯಗಳನ್ನು ಹೇಗೆ ಗೆಲ್ಲುವುದು, ನಮ್ಮನ್ನು ನಾವು ಹೇಗೆ ಸವಾಲಿಗೆ ಒಡ್ಡುವುದು, ಯಾವುದನ್ನೂ ಹಗುರವಾಗಿ ಪರಿಗಣಿಸದಿರುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿದೆವು. ನಾವು ಪ್ರತಿ ಪಂದ್ಯದಲ್ಲೂ ಆ ಗುಣಗಳನ್ನು ತರುವತ್ತ ಗಮನಹರಿಸಿದೆವು.

ಫಲಿತಾಂಶ ಏನೇ ಇರಲಿ, ತಂಡವು ಪ್ರತಿ ಪಂದ್ಯವನ್ನು ಒಂದೇ ರೀತಿಯಲ್ಲಿ ಎದುರಿಸಿತು. ಮೊದಲ ಪಂದ್ಯವನ್ನು ಗೆದ್ದ ನಂತರ, ನಾವು ಆ ಗೆಲುವನ್ನು ಬದಿಗಿಟ್ಟು ಮುಂದಿನ ಪಂದ್ಯಕ್ಕೆ ತಯಾರಿ ಆರಂಭಿಸಿದೆವು. ಅದು ನಮಗೆ ಬಹಳಷ್ಟು ಸಹಾಯ ಮಾಡಿತು, ವಿಶೇಷವಾಗಿ ನಾವು ಟಿ20 ವಿಶ್ವಕಪ್ ಯೋಜನೆಗೆ ಮುಂದಾದಾಗ.

2024ರ ಟಿ20 ವಿಶ್ವಕಪ್​ನಲ್ಲಿ ರಾಹುಲ್ ದ್ರಾವಿಡ್ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದೆವು. ಅವರ ಚಿಂತನೆ ಹಾಗೂ ಪ್ಲ್ಯಾನ್​ಗಳು 2024 ರ ಟಿ 20 ವಿಶ್ವಕಪ್ ಸಮಯದಲ್ಲಿ ಯಶಸ್ವಿಯಾಗಿತ್ತು. ಇದೇ ಯೋಜನೆಗಳನ್ನು ನಾವು ಚಾಂಪಿಯನ್ಸ್ ಟ್ರೋಫಿಯಲ್ಲೂ ಅಳವಡಿಸಿದೆವು.

2023ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಸೋತಿದ್ದೆವು. ಆದರೆ ಬಳಿಕ ರಾಹುಲ್ ದ್ರಾವಿಡ್ ಹಾಗೂ ನಾವು ಹೊಸ ಕೆಲಸದ ವಿಧಾನಕ್ಕೆ ಬದ್ಧವಾಗಿದ್ದವು. ಎಲ್ಲಾ ಆಟಗಾರರು ಈ ವಿಧಾನಕ್ಕೆ ಒಗ್ಗಿಕೊಂಡರು. ಇದರಿಂದ ಭಾರತ ತಂಡವು ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಂತಾಯಿತು.

2024ರ ಟಿ20 ವಿಶ್ವಕಪ್ ನಂತರ ದ್ರಾವಿಡ್ ರಾಜೀನಾಮೆ ನೀಡಿದರು. ಆ ಬಳಿಕ ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಬಂದರು. ಆದರೆ ಚಾಂಪಿಯನ್ಸ್ ಟ್ರೋಫಿಗಾಗಿ ದ್ರಾವಿಡ್ ಅವರೇ ಅಡಿಪಾಯ ಹಾಕಿಕೊಟ್ಟಿದ್ದರು. ಹೀಗಾಗಿಯೇ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ದ್ರಾವಿಡ್ ಅವರ ಪಾತ್ರ ಕೂಡ ಇದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: 182 ರನ್​ಗಳಿಸಲು 175 ಡಾಟ್ ಬಾಲ್ ಆಡಿದ ಇಂಗ್ಲೆಂಡ್..!

ಇತ್ತ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟರೂ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ. ಇದಕ್ಕೆ ಮೂಲ ಕಾರಣ ಕೋಚ್ ಗೌತಮ್ ಗಂಭೀರ್ ಎನ್ನಲಾಗುತ್ತಿದೆ. ಇದೀಗ ಗಂಭೀರ್ ಸಾರಥ್ಯದಲ್ಲಿ ಗೆದ್ದಿರುವ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಶ್ರೇಯಸ್ಸನ್ನು ರೋಹಿತ್ ಶರ್ಮಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ನೀಡಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *