ಉತ್ತರ ಪರ್ಷಿಯನ್ ಗಲ್ಫ್ನಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ಪಡೆಯಿಂದ ದಾಳಿ

ಟೆಹ್ರಾನ್: ಉತ್ತರ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ತನ್ನ ನೌಕಾಪಡೆಯು ಅಮೆರಿಕದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಹೇಳಿಕೊಂಡಿದೆ ಎಂದು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿ aljazeera.com ವರದಿ ಮಾಡಿದೆ.
ಅಮೆರಿಕ, ಇಸ್ರೇಲ್ ಹಾಗೂ ಯುರೋಪಿಯನ್ ದೇಶಗಳನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಸೇರಿದ ಮಿಲಿಟರಿ ಮತ್ತು ವಾಣಿಜ್ಯ ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಅಂತಹ ಹಡಗುಗಳು ಗಮನಕ್ಕೆ ಬಂದರೆ ಅವುಗಳಿಗೆ ಖಂಡಿತವಾಗಿಯೂ ಹೊಡೆತ ಬೀಳುತ್ತದೆ ಎಂದು IRGC ಎಚ್ಚರಿಕೆ ನೀಡಿದೆ.
“ಯುದ್ಧದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳ ಆಧಾರದ ಮೇಲೆ, ಇಸ್ಲಾಮಿಕ್ ಗಣರಾಜ್ಯ ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳನ್ನು ನಿಯಂತ್ರಿಸುವ ಹಕ್ಕು ಇದೆ ಎಂದು ನಾವು ಈ ಹಿಂದೆಯೇ ತಿಳಿಸಿದ್ದೇವೆ,” ಎಂದು IRGC ಹೇಳಿದೆ.
ಈ ಕುರಿತು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
