Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಮನೆಯಲ್ಲಿ ಯಾರು ಸುರಕ್ಷಿತವಾಗಿಲ್ಲ”-ಖ್ಯಾತ ಪಾಕಿಸ್ತಾನಿ ನಿರೂಪಕಿಗೆ ಪತಿಯಿಂದ ಹ*ಲ್ಲೆ

Spread the love

ಪಾಕಿಸ್ತಾನ:ಪಾಕಿಸ್ತಾನದಲ್ಲಿ (Pakistan) ಮಹಿಳೆಯರನ್ನು ದಿನನಿತ್ಯವೂ ಹಿಂಸೆ ಮಾಡುವ ಪ್ರವೃತ್ತಿಗಳು ನಡೆಯುತ್ತಲೇ ಇದೆ. ಇದೀಗ ಅಂತಹದ್ದೇ ಘಟನೆಗೆ ಸಂಬಂಧಿಸಿದ ಪೋಸ್ಟ್​​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತೆ (Pakistani journalist) ಮತ್ತು ದೂರದರ್ಶನ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಆಕೆಯ ಪತಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದ ವಿಚಾರವಾಗಿ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಈ ಹಲ್ಲೆ ನಡೆಸಿದ್ದು, ತನ್ನ ಪತಿ ಹಲ್ಲೆ ಮಾಡಿರುವ ಬಗ್ಗೆ ಫೋಟೋವೊಂದು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ಆ ಫೋಟೋದಲ್ಲಿ ನಿರೂಪಕಿಯ ಕಣ್ಣು ಊದಿಕೊಂಡಿರುವುದನ್ನು ಕಾಣಬಹುದು.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಸುರಕ್ಷಿತವಾಗಿರುವ ಮನೆಯಲ್ಲಿಯೂ ಯಾರೂ ಸುರಕ್ಷಿತವಾಗಿಲ್ಲ. ನೀವು ಕುರುಡಾಗಿ ನಂಬುವವರೇ ಅತ್ಯಂತ ಅಪಾಯಕಾರಿ ಜನರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡು, ಈ ಕುರಿತ ಪೋಸ್ಟನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮತ್ತೊಂದು ಪೋಸ್ಟ್​​ನ್ನು ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ನಿಮಗೆ ಒಬ್ಬ ಮಹಿಳೆ ಸಿಕ್ಕಾಗ, ನೀವು ನಿಮ್ಮ ನಿಜವಾದ ಬಣ್ಣಗಳನ್ನು ತೋರಿಸುತ್ತೀರಿ, ಈ ರೀತಿ ದಬ್ಬಾಳಿಕೆ ಮಾಡುವುದು ಹೇಡಿತನ, ದ್ವೇಷಿಗಳು ಯಾವಾಗಲೂ ಇರುತ್ತಾರೆ ಅವರನ್ನು ದೂಷಿಸಬೇಡಿ. ಜೀವನದಲ್ಲಿ ಅವರ ವೈಫಲ್ಯವೇ ಅವರನ್ನು ಈ ಸ್ಥಾನದಲ್ಲಿ ಇರಿಸಿದೆ, ನನ್ನ ಬಳಿ ಇನ್ನೂ 50 ಚಿತ್ರಗಳಿವೆ ಎಂದು ಬರೆದುಕೊಂಡಿದ್ದಾರೆ.

ನಿರೂಪಕಿ ಜಾಸ್ಮೀನ್ ತನ್ನ ಜೀವನದ ಕಷ್ಟಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದು ನಾನು. ಹೌದು, ಇದು ನನ್ನ ಕಥೆ – ನನ್ನ ಜೀವನವು ಹಿಂಸಾತ್ಮಕ ವ್ಯಕ್ತಿಯಿಂದ ನಾಶವಾಯಿತು. ನನ್ನ ನ್ಯಾಯವನ್ನು ನನ್ನ ಅಲ್ಲಾಹನಿಗೆ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಸ್ಥಿತಿ ನನ್ನ ಮಾಜಿ ಪತಿಯಿಂದ ಉಡುಗೊರೆಯಾಗಿ ಬಂದಿದ್ದು, ಈ ಬಗ್ಗೆ ಸಾವರ್ಜನಿಕವಾಗಿ ಮಾತನಾಡಬೇಕು ಬೇಡವೇ ಎಂಬ ಗೊಂದಲದಲ್ಲಿ ಈ ಪೋಸ್ಟ್​​ ಮಾಡಿದ್ದೇನೆ. ಆದರೆ ಈ ರೀತಿಯ ನಡವಳಿಕೆಯ ವಿರುದ್ಧ ನಾವೆಲ್ಲರೂ ಒಂದಾಗಬೇಕು. ಜೊತೆಗೆ ಇದರ ವಿರುದ್ಧ ಧೈರ್ಯವಾಗಿ ಪ್ರತಿಭಟಿಸಲು ಸಿದ್ಧ ಎಂದು ಹೇಳಿದ್ದಾರೆ.

ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್​​​​ 17 ಸಾವಿರಕ್ಕೂ ಹೆಚ್ಚು ಲೈಕ್​​ ಹಾಗೂ ಕಾಮೆಂಟ್​​ ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಕೌಟುಂಬಿಕ ಹಿಂಸೆ ನಮ್ಮ ಸಮಾಜದ ಮೇಲೆ ಒಂದು ಕಳಂಕ ಎಂದು ಕಮೆಂಟ್​​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಪಾಕಿಸ್ತಾನದಲ್ಲಿರುವ ತನಕ , ನೀವು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *