Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಸರಾದಲ್ಲಿ ಬಾನು ಮುಷ್ತಾಕ್‌ ದೇವಿ ಪೂಜೆಗೆ ಫತ್ವಾ ಅನುಮತಿ ಅಗತ್ಯ

Spread the love

ಬೆಂಗಳೂರು: ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ದಸರಾದಲ್ಲಿ ಭಾಗವಹಿಸಲು ನಮ್ಮ ಅಡ್ಡಿಯಿಲ್ಲ. ಆದರೆ ದೇವಿಗೆ ಪೂಜೆ ಮಾಡಿದರೆ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ ಅನುಮತಿ ತೆಗೆದುಕೊಳ್ಳಬೇಕು ಎಂದು ಜಾಮೀಯಾ ಮಸೀದಿ ಮೌಲನಾ ಡಾ.ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಜಾಮೀಯಾ ಮಸೀದಿ ಮೌಲನಾ ಡಾ ಮಕ್ಸೂದ್ ಇಮ್ರಾನ್, ಪೂಜೆಯಲ್ಲಿ ನಿಂತರೆ ತಪ್ಪಿಲ್ಲ. ಅರ್ಚಕ ಅಥವಾ ಬೇರೆಯವರು ಪೂಜೆ ಮಾಡುತ್ತಿದ್ದರೆ ಇವರು ಭಾಗವಹಿಸಬಹುದು ಎಂದು ತಿಳಿಸಿದರು. 

ಚಾಮುಂಡಿಗೆ ಪೂಜಾ ವಿಧಿ ವಿಧಾನ ಅಥವಾ ಆರತಿ ಬೆಳಗೋದು, ಹೀಗೆ ಪೂಜಾ ಕೈಂಕರ್ಯದಲ್ಲಿ ತಾವೇ ಸ್ವಂತ ಭಾಗಿಯಾದರೆ ಭಾನು ಮುಷ್ತಾಕ್ ಫತ್ವಾ ಇನ್‌ಸ್ಟಿಟ್ಯೂಷನ್‌ನಿಂದ ಅನುಮತಿ ತೆಗೆದುಕೊಳ್ಳಬೇಕು. ಇದಕ್ಕೆ ಫತ್ವಾ ಇನ್‌ಸ್ಟಿಟ್ಯೂಷನ್‌ ಅವರು ಏನು ಹೇಳುತ್ತಾರೋ ನೋಡಬೇಕು. ಅದು ಅವರಿಗೆ ಬಿಟ್ಟ ವಿಚಾರ. ನಾನು ಬಾನು ಮುಷ್ತಾಕ್ ಅವರಿಗೆ ಸಲಹೆ ಮಾತ್ರ ಕೊಡಬಹುದು ಎಂದು ಹೇಳಿದರು

ಬಿಜೆಪಿ ಶಾಸಕ ಗರುಡಾಚಾರ್ ಇಲ್ಲಿ ಬರುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಅವರು ಮುಸ್ಲಿಮ್‌ ಆಗ್ತಾರಾ? ನನ್ನನ್ನು ದೇವಸ್ಥಾನಕ್ಕೆ ಕರೆಯುತ್ತಾರೆ. ನಾನು ಹಿಂದು ಆಗಿಬಿಡುತ್ತೀನಾ? ಪ್ರಧಾನಿಯವರು ದರ್ಗಾಗೆ ಚಾದರ ಕಳುಹಿಸುತ್ತಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಹೋದರೆ ವಿರೋಧ ಯಾಕೆ ಎಂದು ಪ್ರಶ್ನಿಸಿದರು


Spread the love
Share:

administrator

Leave a Reply

Your email address will not be published. Required fields are marked *