Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೆಟ್ರೋನಲ್ಲಿ ಸಿಗಲಿದೆ ಸ್ಪೀಡ್ ನೆಟ್ʼ – ಸುರಂಗ ಮಾರ್ಗಗಳಲ್ಲಿ 5G ಸಂಪರ್ಕದ ಹೊಸ ಯುಗಕ್ಕೆ ಮೆಟ್ರೋ ಸಿದ್ಧ

Spread the love


ಬೆಂಗಳೂರು: ನಮ್ಮ ಮೆಟ್ರೋದ ಸುರಂಗ ಮಾರ್ಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ವೈಫೈ ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಮೆಟ್ರೋ ಮಾರ್ಗಗಳಲ್ಲಿ ಉಂಟಾಗುವ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಬಿಎಂಆರ್‌ಸಿಎಲ್, ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್, ಬಿಟಿಎಸ್ ಸೆಲ್ಯುಲಾರ್ ಟವರ್ ಮತ್ತು ಪೋಲ್‌ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4G, 5G ಸೇವೆ ಒದಗಿಸಲು ಮುಂದಾಗಿದೆ.

ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಹಾಗೂ ಎತ್ತರಿಸಿದ ಮಾರ್ಗದಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕ ಒದಗಿಸಲು ಅಡ್ವಾನ್‌ಸ್ಡ್ ಕಮ್ಯೂನಿಕೇಶನ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಕಂಪನಿ ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಮೆಟ್ರೋ ಮಾರ್ಗದ ಅಲ್ಲಲ್ಲಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆ ತಪ್ಪಲಿದೆ. ವಿಶೇಷವಾಗಿ ಭೂಗತ ಮಾರ್ಗವಿರುವ ಡೈರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ಪ್ರಯಾಣ ದರದ ಹೊರತಾಗಿ ನಿಗಮಕ್ಕೆ ಆದಾಯ (ವೈ-ಫೈಗೆ ವಿಧಿಸುವ ಶುಲ್ಕದ ರೂಪದಲ್ಲಿ) ಕೂಡ ಬರಲಿದೆ. ಇದು 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದವಾಗಿದೆ. ಈ ವೇಳೆ ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್) ಎ.ಎಸ್. ಶಂಕರ್ ಎಸಿಇಎಸ್‌ಇ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿಹಾಕಿದರು. ಬಿಎಂಆರ್‌ಸಿಎಲ್ ನಿರ್ದೇಶಕ ಸುಮಿತ್ ಭಟ್ನಾಗರ್ ಹಾಗೂ ಎಸಿಇಎಸ್ ಸಿಇಒ ಡಾ.ಅಕ್ರಮ್ ಅಬುರಾಸ್ ಹಾಗೂ ಅಧಿಕಾರಿಗಳು ಇದ್ದರು.


Spread the love
Share:

administrator

Leave a Reply

Your email address will not be published. Required fields are marked *