Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಐ ಕಾಲದಲ್ಲಿ ಉದ್ಯೋಗ ಭದ್ರತೆ ಇಲ್ಲ -ಗೂಗಲ್ ಮಾಜಿ ಸಿಇಒ ಎಚ್ಚರಿಕೆ

Spread the love

ನ್ಯೂಯಾರ್ಕ್ : ಉದ್ಯೋಗ ಕ್ಷೇತ್ರದಲ್ಲಿ ಅನ್ಚಿತತೆ ಹೊಸದೇನಲ್ಲ. ಆರ್ಥಿಕ ಹಿಂಜರಿತ, ಕೋವಿಡ್ ಪರಿಣಾಮ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಭದ್ರತೆ ಕುರಿತು ಸವಾಲುಗಳು ಇವೆ. ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಆರ್ಥಿಕತೆ, ವೆಚ್ಚ ಕಡಿತ ಸೇರಿದಂತೆ ಕೆಲ ಕಾರಣಗಳಿಂದ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ.

ಇದೀಗ ಗೂಗಲ್ ಮಾಜಿ ಚೀಫ್ ಬ್ಯೂಸಿನೆಸ್ ಆಫೀಸರ್ ಮೋ ಗವ್ದಾತ್ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಕೆಲವೇ ವರ್ಷದಲ್ಲಿ ಯಾವುದೇ ಉದ್ಯೋಗ ಸೇಫ್ ಅಲ್ಲ, ಇದೂ ಸಿಇಒಗೂ ಅನ್ವಯವಾಗಲಿದೆ ಎಂದಿದ್ದಾರೆ. ಉದ್ಯೋಗ ಕಡಿ ಕೆಲ ಹಂತದ, ಮ್ಯಾನೇಜರ್ ಲೆವಲ್ ಮಾತ್ರವಲ್ಲ ಸಿಇಒಗೂ ತಟ್ಟಲಿದೆ ಎಂದು ಗವ್ದಾತ್ ಹೇಳಿದ್ದಾರೆ.

ಎಜಿಐ ನಿಂದ ಮಾನವ ಸಂಪನ್ಮೂಲ ಉದ್ಯೋಗಕ್ಕೆ ಕುತ್ತು

ಆರ್ಟಿಫೀಶಿಯಲ್ ಜನರಲ್ ಇಂಟಲಿಜೆನ್ಸ್ (AGI) ಹಲವರ ಉದ್ಯೋಕಕ್ಕೆ ಕುತ್ತು ನೀಡಲಿದೆ ಎಂದು ಮೋ ಗವ್ದಾತ್ ಎಚ್ಚರಿಸಿದ್ದಾರೆ. AGI ಬಹುತೇಕ ಕ್ಷೇತ್ರದ ಉದ್ಯೋಗ ಕಸಿದುಕೊಳ್ಳಲಿದೆ. ಇದೀಗ ನಾವೆಲ್ಲರು ಪ್ರೋಗ್ರಾಮರ್ಸ್, ಚೀಫ್ ಎಕ್ಸಿಕ್ಯೂಟೀವ್ಸ್ ಕ್ರಿಯೇಟೀವ್ಸ್ ಸೇರಿದಂತೆ ಹಲವು ಉದ್ಯೋಗಳೂ ಸುರಕ್ಷತೆ ಪಟ್ಟಿಯಿಂದ ದೂರ ಸರಿಯಲಿದೆ. ಈ ಸ್ಥಾನವನ್ನು AGI ಆಕ್ರಮಿಸಿಕೊಳ್ಳಲಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ ಎಂದು ಗವ್ದಾತ್ ಹೇಳಿದ್ದಾರೆ. AGI ಎಲ್ಲಕ್ಕಿಂತ ಉತ್ತಮವಾಗಿ ಕೆಲಸ ಮಾಡಲಿದೆ. ಅಂದರೆ ಸಿಇಒಗಿಂತಲೂ ಚೆನ್ನಾಗಿ ನಿರ್ವಹಣೆ ಮಾಡಲಿದೆ ಎಂದು ಗವ್ದಾತ್ ಹೇಳಿದ್ದಾರೆ.

ಮುಂದಿನ 15 ವರ್ಷದಲ್ಲಿ ಉದ್ಯೋಗ ಚಿತ್ರಣ ಬದಲು

ಆರ್ಟಿಫೀಶಿಯಲ್ ಜನರಲ್ ಇಂಟಲಿಜೆನ್ಸ್ ತಂತ್ರಜ್ಞಾನ ಉದ್ಯೋಗ ಲೋಕದಲ್ಲಿ ಸಂಚಲನ ಸೃಷ್ಟಿಸಲಿದೆ. ಮುಂದಿನ 15 ವರ್ಷದಲ್ಲಿ ಉದ್ಯೋಗ ಚಿತ್ರಣ ಬದಲಾಗಲಿದೆ. AGI ತಂತ್ರಜ್ಞಾನದಿಂದ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಆದರೆ ಪ್ರಮಾಣ ಕಡಿಮೆ ಇರಲಿದೆ. ಆದರೆ AGI ಎಲ್ಲಾ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದು ಸತ್ಯ. 15 ವರ್ಷದೊಳಗೆ ಎಲ್ಲಾ ಬದಲಾವಣೆಗಳು ಹೊಸ ಉದ್ಯೋಗ ವಲಯದತ್ತ ಜಗತನ್ನು ಕೊಂಡೊಯ್ಯಲಿದೆ ಎಂದಿದ್ದಾರೆ.

300 ಜನ ಮಾಡಬೇಕಿದ್ದ ಕೆಲಸವನ್ನು ಮೂರೇ ಜನ ಮಾಡುತ್ತಿದ್ದಾರೆ.

ಗೂಗಲ್ ಬ್ಯೂಸಿನೆಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗವ್ದಾತ್, ಉದ್ಯೋಗ ತ್ಯಜಿಸಿ ಹೊಸ ಎಐ ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಇದೀಗ ಈ ಕಂಪನಿಯ ಇಮೋಶನ್ ಇಂಟಲಿಜೆನ್ಸ್ ಅಭಿವೃದ್ಧಿಯತ್ತ ಸಾಗುತ್ತಿದೆ. ಇದೀಗ ಮೂರೇ ಜನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಆಗಿದ್ದರೆ 300 ಜನ ಬೇಕಿತ್ತು ಎಂದು ಗವ್ದಾತ್ ಹೇಳಿದ್ದಾರೆ. ಫಾದರ್ ಆಫ್ ಎಐ ಎಂದು ಕರೆಯಿಸಿಕೊಳ್ಳುವ ಜಿಫೊರೆ ಹಿಂಟನ್ ಹೇಳಿಕೆ ಇಲ್ಲಿ ಮಹತ್ವ ಎಂದಿದ್ದಾರೆ. ಹಿಂಟನ್ ಪ್ರಕಾರ, ಸದ್ಯ ಅಭಿವೃದ್ಧಿ ಪಡಿಸಿರುವ ಎಐಯನ್ನು ಹಲವರು ಆಂತರಿಕವಾಗಿ, ಅವರಿಗೆ ಬೇಕಾದಂತೆ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಿ ಬಳಸಿಕೊಳ್ಳುತ್ತಾರೆ. ಇವುಗಳಿಗೆ ಯಾವ ನಿಯಂತ್ರಣವೂ ಇರುವುದಿಲ್ಲ. ಇದು ಅಪಾಯಕಾರಿ ಎಂದಿದ್ದರು. ಇದೀಗ ಎಐ ತಂತ್ರಜ್ಞಾನ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತಿದೆ. ಮಾನವ ಸಂಪನ್ಮೂಲ ಬದಲು ಎಜಿಐ ಕೆಲಸ ಮಾಡಲಿದೆ ಎಂದಿದ್ದಾರೆ.

ತೀವ್ರ ಸಂಕಷ್ಟದ ದಿನಗಳು ಆಗಮಿಸುತ್ತಿದೆ

ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳಿಂದ ತೀವ್ರ ಸಂಕಷ್ಟಗಳು ಆಗಮಿಸುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಕುಟುಂಬ ಸೇರಿದಂತೆ ಎಲ್ಲಾ ಸಮಸ್ಯೆಗಳು ಒಂದರ ಮೇಲೊಂದರಂತೆ ಎದುರಾಗಲಿದೆ. ಹೊಸ ಉದ್ಯೋಗ ಪ್ರಪಂಚ ಸೃಷ್ಟಿಯಾದರೂ ಸೀಮಿತವಾಗಿರುತ್ತದೆ. ಉದ್ಯೋಗ ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಪರಿಸ್ಥಿತಿಗಳು ಬದಲಾದಗ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಗವ್ದಾತ್ ಸಲಹೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *