Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಯಾವ ಶಕ್ತಿಯೂ ನನ್ನನ್ನು ತಡೆಯಲಾರದು; ಪ್ರಾಣ ಹೋದರೂ ಜನರಿಗಾಗಿ ಕೆಲಸ ಮಾಡುವೆ”: ರಾಜ್ಯಪಾಲ ಸಿ.ವಿ. ಆನಂದ ಬೋಸ್ ಪ್ರತಿಪಾದನೆ

Spread the love

ಕೋಲ್ಕತ್ತಾ: ಯಾವುದೇ ಶಕ್ತಿಯು ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು, ರಾಜ್ಯದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಶುಕ್ರವಾರ ಹೇಳಿದ್ದಾರೆ.

ಗುರುವಾರ ರಾತ್ರಿ ಇಮೇಲ್ ಮೂಲಕ ತಮಗೆ ಬಂದ ಜೀವ ಬೆದರಿಕೆಯನ್ನು ಉಲ್ಲೇಖಿಸಿದ ಬೋಸ್, ಇದು “ಬಂಗಾಳದ ಸಾಮಾನ್ಯ ಜನರಿಗಾಗಿ ನಾನು ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವ ಪ್ರಯತ್ನ” ಎಂದರು.

ನನಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಬಂಗಾಳದ ಜನ ನನ್ನನ್ನು ರಕ್ಷಿಸುತ್ತಾರೆ. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆಯೂ ಕೋಲ್ಕತ್ತಾದ ಬೀದಿಗಿಳಿಯುವುದಾಗಿ ಬೋಸ್ ಹೇಳಿದರು.

“ಇಂತಹ ಬೆದರಿಕೆಗಳ ಮೂಲಕ ಬಂಗಾಳದ ಜನರಿಗಾಗಿ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಬಂಗಾಳ ನನ್ನ ಮನೆ, ನಾನು ಬಂಗಾಳದ ಮಗ. ಈ ಭೂಮಿಗಾಗಿ ನನ್ನ ಪ್ರಾಣವನ್ನು ತ್ಯಜಿಸಲು ನಾನು ಹೆದರುವುದಿಲ್ಲ” ಎಂದು ಬೋಸ್ ಪಿಟಿಐಗೆ ತಿಳಿಸಿದ್ದಾರೆ.

“ನನಗೆ ಜೀವ ಬೆದರಿಕೆ ಎದುರಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಮುರ್ಷಿದಾಬಾದ್ ಪ್ರವಾಸದಲ್ಲಿ ಯಾರೋ ಜೀವಂತ ದೇಶಿ ನಿರ್ಮಿತ ಬಾಂಬ್ ಹಸ್ತಾಂತರಿಸಿದ್ದರು. ನನ್ನ ಎಡಿಸಿ ತಕ್ಷಣ ಅದನ್ನು ತೆಗೆದುಕೊಂಡು ಹೋಗಿ ನೀರಿನ ಟಬ್‌ನಲ್ಲಿ ಇಟ್ಟರು” ಎಂದು ಅವರು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *