Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯ ಬಜೆಟ್ ನ ನಿರೀಕ್ಷೆ ಇಲ್ಲ – ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಟೀಕೆ

Spread the love

ರಾಯಚೂರು: ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸಕ್ತ ಸಾಲಿನ ಬಜೆಟ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯನ್ನಿಟ್ಟುಕೊಂಡಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿರುವ ರಾಘವೇಂದ್ರ ಗುರು ವೈಭವೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಹೀಗ ಹೋಗುತ್ತಿರುವ ಮಾರ್ಗ ನೋಡಿದರೇ ಅವರ ಬಜೆಟ್‌ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿಲ್ಲ, ಗ್ಯಾರಂಟಿ ಹೆಸರಿನಲ್ಲಿ ಜನರ ಮೇಲೆ ಮತ್ತೆ 1 ಇಲ್ಲವೇ ಒಂದೂವರೆ ಲಕ್ಷ ಕೋಟಿ ಸಾಲ ಆಗದೇ ಇರಲಿ ಎಂದು ಬಯಸುವುದಾಗಿ ತಿಳಿಸಿದರು.

ಲಘು ಮಾತು, ಬೇಜವಾಬ್ದಾರಿ ತನಕ್ಕೆ ಜನ ಸೂಕ್ತ ತೀರ್ಮಾನ : ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡಗಳ ಅನುದಾನ ಬಳಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್‌ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಇಂತವರು ಎಸ್ಸಿ-ಎಸ್ಟಿ ನಿಯಮಗಳನ್ನು ಮಾಡಿ ಕಾನೂನುಗಳನ್ನು ಯಾಕೆ ಜಾರಿಗೆ ತಂದರು ? ಈ ಸಮುದಾಯಗಳಿಗೆ ನಿಗದಿಯಾಗಿರುವ ಹಣ ಖರ್ಚು ಮಾಡದೇ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಜೈಲಿಗೆ ಕಳುಹಿಸಬೇಕು ಎಂಬ ಕಾನೂನುಗಳನ್ನು ತಂದವರು ಗ್ಯಾರಂಟಿಗಳಿಗೆ ಹಣ ಬಳಸಿದರೇ ಆ ಕಾನೂನುಗಳನ್ನು ಇಟ್ಟುಕೊಂಡಾದರು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ಯೋಜನೆಗಳೇ ಬೇರೆ, ಎಸ್ಸಿ-ಎಸ್ಟಿ ಸಮುದಾಯಗಳ ಆರ್ಥಿಕ ಶಕ್ತಿಯನ್ನು ವೃದ್ಧಿಗೊಳಿಸುವ ಉದ್ದೇಶದಡಿ ರೂಪಿಸಿರುವ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಸ್ಕೀಮ್‌ಗಳಿಗೆ ಬಳಸಿ ಅವುಗಳನ್ನು ಸ್ಥಗಿತಗೊಳಿಸಿದರೇ ಅಂತಿಮವಾಗಿ ಉಪಯೋಗ ಏನು ಆಗುತ್ತದೆ. ಸರ್ಕಾರದ ಈ ರೀತಿಯ ಬೇಜವಾಬ್ದಾರಿತನ ಹಾಗೂ ಆ ನಾಯಕನ ಲಘುವಾದ ಮಾತುಗಳಿಗೆ ಸೂಕ್ತ ಸಮಯದಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ಗ್ಯಾರಂಟಿಗಳೇ ದೊಡ್ಡದು: ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳೇ ದೊಡ್ಡದು ಎಂದು ಬಿಂಬಿಸಿ ಬೇರೆ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರು. ಘೋಷಣೆ ಮಾಡಿದ್ದು, ಈ ವರ್ಷ ಒಂದೂ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ಇದನ್ನು ನೋಡಿದಾಗ ಸರ್ಕಾರ ಎಷ್ಟರಮಟ್ಟಿಗೆ ಬಡವರ ಪರವಾದ ಕಾರ್ಯಕ್ರಮಗಳನ್ನು ರೂಪಿಸಿ, ಅದಕ್ಕೆ ಚಾಲನೆ ಕೊಟ್ಟಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಮೆಗಾಟೆಕ್ಸ್‌ ಟೈಲ್‌ ಪಾರ್ಕ್‌ ನಿರ್ಮಿಸಲು ಮುಂದಾಗಿದೆ ಅದರಂತೆ ರಾಜ್ಯದಲ್ಲಿ ಕಲಬುರಗಿಯಲ್ಲಿ ನಿರ್ಮಿಸಲು ಹೊರಟಿದೆ.
ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುತ್ತಿರುವುದರಿಂದ ಅದನ್ನು ರಾಯಚೂರಿಗೆ ನೀಡಬೇಕು ಎಂಬುವ ಬೇಡಿಕೆಯಿದೆ. ಹತ್ತಿ ಬೆಳೆಯುವಲ್ಲಿ ರಾಜ್ಯದಲ್ಲಿಯೇ ರಾಯಚೂರು ಮೊದಲ ಸ್ಥಾನದಲ್ಲಿದೆ. ಹತ್ತಿ ಬಿತ್ತನೆ ಹಲವಾರು ರೀತಿಯ ತಳಿಗಳ ಸಂಶೋಧನೆಯಾಗಿದೆ, ದುಪ್ಪಟ್ಟು ಹತ್ತಿ ಬೆಳೆಯುವ ಬೀಜವನ್ನು ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಇದರ ಬಗ್ಗೆ ಗಮನ ಹರಿಸಲಾಗುವುದು ಎಂದರು. ಇನ್ನು ಮೆಣಸಿನಕಾಯಿ ಬೆಳೆಯನ್ನು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿರುವುದರ ಬಗ್ಗೆ ಗಮನಕ್ಕಿದೆ. ಆಂಧ್ರ ಮತ್ತು ಕರ್ನಾಟಕದ ಮೆಣಸಿನಕಾಯಿ ರೈತರು ಸಮಸ್ಯೆ ಅನುಭವಿಸುತ್ತಿದ್ದು, ಈ ಬಗ್ಗೆ ಕೇಂದ್ರದ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *