ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆಯರಿಗಿಲ್ಲ ಗಡಿಪಾರು

ಭಟ್ಕಳ :ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಮಂದಿ ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದು, ಇವರುಗಳಿಗೆ ಗಡೀಪಾರು ಆದೇಶ ಇಲ್ಲ.
ಹೌದು.. 14 ಮಂದಿ ಪಾಕಿಸ್ತಾನ ಮೂಲದ ಮಹಿಳೆಯರು ಭಟ್ಕಳದಲ್ಲಿ ವಾಸವಿದ್ದು, ದೀರ್ಘಾವಧಿ ವೀಸಾ ಇರುವ ಹೊಂದಿರುವ ಹಿನ್ನೆಲೆಯಲ್ಲಿ ಅವರು ಭಟ್ಕಳದಲ್ಲೇ ಇರಲಿದ್ದಾರೆ. ಇನ್ನು ಈ 14 ಮಂದಿ ಅಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು, ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿ ಮಾಹಿತಿ ಕಲೆಹಾಕುತಿದ್ದಾರೆ.
ಸ್ವತಂತ್ರ ಪೂರ್ವದಲ್ಲೇ ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದು ಭಟ್ಕಳದ ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ. ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ.