Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ನಿಕ್ಸ್’ ಗಗನನೌಕೆ ದುರಂತ: ಬಾಹ್ಯಾಕಾಶದಲ್ಲಿ ಸಮಾಧಿ ಕನಸು ಭಗ್ನ, ಚಿತಾಭಸ್ಮ ಸಮುದ್ರಪಾಲು!

Spread the love

ಬರ್ಲಿನ್: ಬಾಹ್ಯಾಕಾಶದಲ್ಲಿ ಸಮಾಧಿ ಮಾಡಬೇಕೆಂದು ಬಯಸಿದ್ದ 166 ಜನರ ಅವಶೇಷ ಮತ್ತು ಚಿತಾಭಸ್ಮವನ್ನು ಒಯ್ದಿದ್ದ ವಿಶಿಷ್ಟ ಗಗನನೌಕೆ `ನಿಕ್ಸ್’ನ ಯೋಜನೆ ವಿಫಲಗೊಂಡಿದ್ದು ಗಗನನೌಕೆ ಫೆಸಿಫಿಕ್ ಮಹಾಸಾಗರಕ್ಕೆ ಪತನಗೊಂಡಿರುವುದಾಗಿ ವರದಿಯಾಗಿದೆ.

ಜರ್ಮನಿಯ ನವೋದ್ಯಮವೊಂದು `ಮಿಷನ್ ಪಾಸಿಬಲ್’ ಎಂಬ ಹೆಸರಿನ ಯೋಜನೆಗೆ ಜೂನ್ 23ರಂದು ಚಾಲನೆ ನೀಡಿತ್ತು.

ಬಾಹ್ಯಾಕಾಶಕ್ಕೆ ನೆಗೆದಿದ್ದ ನಿಕ್ಸ್’ ಗಗನನೌಕೆ ಎರಡು ಕಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಭೂಮಿಗೆ ಕುಸಿದು ಪೆಸಿಫಿಕ್ ಮಹಾಸಾಗರಕ್ಕೆ ಅಪ್ಪಳಿಸಿದೆ. ಮಿಷನ್ ಪಾಸಿಬಲ್ ಆಂಶಿಕ ಯಶಸ್ಸು ಗಳಿಸಿದೆ. ಆದರೆ ನಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಪ್ರೀತಿಪಾತ್ರರ ಚಿತಾಭಸ್ಮವನ್ನು ನೀಡಿದ್ದ ಜನರ ಕ್ಷಮೆ ಯಾಚಿಸುವುದಾಗಿ ಗಗನನೌಕೆಯನ್ನು ರಚಿಸಿದ್ದದಿ ಎಕ್ಸ್ಪ್ಲೋರೇಷನ್ ಕಂಪೆನಿ’ ಹೇಳಿಕೆ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *