ಮೊಬೈಲ್ ಅಡಿಕ್ಷನ್ನಿಂದ ಮಕ್ಕಳನ್ನು ರಕ್ಷಿಸಲು ನಿಮ್ಹಾನ್ಸ್ನ ಹೊಸ ಹೆಜ್ಜೆ
ಬೆಂಗಳೂರು: ಮಕ್ಕಳು ಅತಿಯಾಗಿ ಮೊಬೈಲ್, ಟಿವಿ ನೋಡುವುದು ಇತ್ತೀಚಿಗೆ ಪೋಷಕರಿಗೆ ದೊಡ್ಡ ತಲೆ ನೋವಾಗಿದ್ದು, ಈ ಅಡಿಕ್ಷನ್ನಿಂದ ಮಕ್ಕಳನ್ನು ಹೊರಗೆ ತರುವುದೇ ದೊಡ್ಡ ಟಾಸ್ಕ್ ಆಗಿದೆ. ಹೆಚ್ಚು ಸಮಯ ಮೊಬೈಲ್ ಹಾಗೂ ಟಿವಿ ನೋಡುವುದರಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ಪೋಷಕರಿಗೆ ಸಹಾಯ ಮಾಡಲು ಮುಂದಾಗಿದ್ದು, ಮಕ್ಕಳಲ್ಲಿ ಕಂಡು ಬರುತ್ತಿರುವ ಸ್ಕ್ರೀನ್ ಅಡಿಕ್ಷನ್ ದೂರ ಮಾಡಲು ಪೋಷಕರಿಗೆ ಉಚಿತ ಆನ್ಲೈನ್ ಸೆಷನ್ ನೀಡಲು ನಿಮ್ಹಾನ್ಸ್ ನಿರ್ಧರಿಸಿದೆ.
ಎಸ್ಎಚ್ಯುಟಿ ಕ್ಲಿನಿಕ್ (ತಂತ್ರಜ್ಞಾನದ ಆರೋಗ್ಯಕರ ಬಳಕೆಗಾಗಿನ ಸೇವೆ) ಮತ್ತು ಯೋಗಕ್ಷೇಮ ಕೇಂದ್ರ (NCWB) ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸೆಷನ್ನಲ್ಲಿ ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಹಾಗೂ ಅವರ ವರ್ತನೆಯಲ್ಲಿ ಬದಲಾವಣೆ ತರಲು ಪೋಷಕರು ಏನೇನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದರಿಂದ ಮಕ್ಕಳ ಹಾಗೂ ಪೋಷಕರ ಇಬ್ಬರ ದಿನಚರಿಯೂ ಸಕರಾತ್ಮವಾಗಿ ಬದಲಾಗಲಿದೆ ಎನ್ನುವುದು ನಿಮ್ಹಾನ್ಸ್ನ ಭರವಸೆಯಾಗಿದೆ.
ಉಚಿತವಾಗಿ ಸಿಗುವ ಈ ಆನ್ಲೈನ್ ಸೆಷನ್ನಲ್ಲಿ ಭಾಗವಹಿಸಲು ಪೋಷಕರು NIMHANS parent group registration form ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ಪೋಷಕರು ದೇಶದ ಪರಿಣಿತ ಮಾನಸಿಕ ಆರೋಗ್ಯ ತಜ್ಞರಿಂದ ತರಬೇತಿ ಪಡೆಯಬಹುದು ಎಂದು ನಿಮ್ಹಾನ್ಸ್ ಸಂಸ್ಥೆ ತಿಳಿಸಿದೆ.