Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು:ಪೊಲೀಸ್ ಕಾನ್ಸ್‌ಟೇಬಲ್ ರಶೀದ್ ಕೈವಾಡವಿದೆಯೇ?

Spread the love

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಹತ್ಯೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಸ್ಲಿಂ ಹೆಡ್ ಕಾನ್ಸ್‌ಟೇಬಲ್‌ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಸುಹಾಸ್ ಶೆಟ್ಟಿ ಹತ್ಯೆಯಾದ ಕ್ಷಣದಿಂದ ದಿನಕ್ಕೊಂದು ಅನುಮಾನ, ಆಯಾಮಗಳು ಹುಟ್ಟುತ್ತಲೇ ಇದೆ. ಮೊದಲಿಗೆ ರಿವೇಂಜ್‌ಗಾಗಿ ಫಾಝಿಲ್ ತಮ್ಮ ಆದಿಲ್ ಮೆಹರೂಫ್ ಸುಫಾರಿ ಕೊಟ್ಟು ಹತ್ಯೆ ನಡೆಸಿದ್ದಾನೆಂದು ಆರೋಪಿಗಳ ಬಂಧನ ವೇಳೆ ಬೆಳಕಿಗೆ ಬಂದಿತ್ತು. ಬಳಿಕ ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಭಾಗಿಯಾಗಿದೆ ಎಂಬ ಅನುಮಾನ ಹುಟ್ಟಿಕೊಂಡಿದ್ದವು. ಇದೀಗ ಹತ್ಯೆಯಲ್ಲಿ ಪೊಲೀಸರು ಕೈ ಜೋಡಿಸಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಆರಂಭದಿಂದಲೂ ಸುಹಾಸ್ ತಾಯಿ ಬಜಪೆ ಪೊಲೀಸರೇ ನಮ್ಮ ಮಗನನ್ನು ಸಾಯುವಂತೆ ಮಾಡಿದ್ದಾರೆಂದು ಎಂದು ಹೇಳುತ್ತಿದ್ದರು. ಇದೀಗ ಹಲವಾರು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿದ್ದು, ಸದ್ಯ ಪ್ರಕರಣದ ತನಿಖೆಯನ್ನು ಎನ್‌ಐಎಗೆ ನೀಡುವಂತೆ ಒತ್ತಾಯ ಹೆಚ್ಚಾಗಿದೆ.

ಹಿಂದೂ ಸಂಘಟನೆಗಳ ಆರೋಪ ಏನು?
ಸುಹಾಸ್ ಹತ್ಯೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ ರಶೀದ್ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ಹೆಚ್ಚಾಗಿದೆ. ಸುಹಾಸ್ ಶೆಟ್ಟಿ ಬಜಪೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ವ್ಯಾಪ್ತಿಗೆ ಬರುವ ಬಜಪೆ ಪೊಲೀಸ್ ಠಾಣೆ ಪೊಲೀಸರು ಆಗಾಗ ಸುಹಾಸ್ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದರು. ಅದರಲ್ಲೂ ಠಾಣೆಯ ಕಾನ್ಸ್‌ಟೇಬಲ್‌ ರಶೀದ್ ಪದೇ ಪದೇ ಕರೆದು ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಕುಡುಪು ಎಂಬಲ್ಲಿ ಅಶ್ರಫ್ ಎಂಬಾತನ ಗುಂಪು ಹತ್ಯೆ ನಡೆದ ದಿನವೂ ರಶೀದ್ ಸುಹಾಸ್ ಶೆಟ್ಟಿಯನ್ನು ಬಜಪೆ ಠಾಣೆಗೆ ಕರೆಸಿ ನೀನು ಯಾವುದೇ ಮಾರಕಾಸ್ತ್ರಗಳನ್ನು ಇಡಬೇಡ, ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಗಮನಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್‌ ರಶೀದ್ ಹಂತಕರಿಗೆ ಸುಹಾಸ್ ಬರುವ ಹಾಗೂ ನಿರಾಯುಧನಾಗಿ ಇದ್ದಾನೆ ಎನ್ನುವ ಮಾಹಿತಿ ನೀಡಿದ್ದಾರೆಂದು ವಿಎಚ್‌ಪಿ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ಆರೋಪ ಮಾಡಿದ್ದಾರೆ.

ಹಿಂದೂ ಸಂಘಟನೆಗಳ ಆರೋಪಕ್ಕೆ ಪುಷ್ಟಿ ನೀಡುವಂತೆ ಸುಹಾಸ್ ಹತ್ಯೆಯ ತನಿಖೆಯಿಂದ ಈ ರಶೀದ್‌ ಅವರನ್ನು ದೂರ ಇಡಲಾಗಿದೆ. ಹೀಗಾಗಿ ರಶೀದ್ ಅವರನ್ನು ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆ ಒತ್ತಾಯಿಸಿದೆ. ಎನ್‌ಐಎ ತನಿಖೆಯಾದರೆ ರಶೀದ್ ಸೇರಿ ಎಲ್ಲರ ತನಿಖೆಯಾಗುವ ಸಾಧ್ಯತೆಯಿದೆ.


Spread the love
Share:

administrator

Leave a Reply

Your email address will not be published. Required fields are marked *