Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ದಾಖಲೆ: 2024ರಲ್ಲಿ 3,900ಕ್ಕಿಂತ ಹೆಚ್ಚು ಪೋಕ್ಸೋ ಪ್ರಕರಣಗಳು-ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ

Spread the love

ಬೆಂಗಳೂರು :ಹುಬ್ಬಳ್ಳಿಯಲ್ಲಿ 5 ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗೆ ಎನ್‌ಕೌಂಟರ್‌ ಮೂಲಕ 24 ಗಂಟೆಗಳಲ್ಲಿ ಶಿಕ್ಷೆ ಕೊಟ್ಟಿದ್ದು ನಿಟ್ಟುಸಿರು ತರಿಸಿದೆ. ಆದರೆ ಇದಕ್ಕೆ ಕೊನೆ ಯಾವಾಗ ಎಂಬ ಆತಂಕ ಮಾತ್ರ ನಿಂತಿಲ್ಲ. ಏಕೆಂದರೆ ಕಳೆದೊಂದು ವರ್ಷದಲ್ಲೇ ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು/ ಹಸುಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿರುವ 3,900ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಪೋಕ್ಸೋ ಕಾಯ್ದೆ ಜಾರಿಗೆ ತಂದು ಕಾನೂನುಗಳನ್ನು ಎಷ್ಟೇ ಬಿಗಿಗೊಳಿಸಿದರೂ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳು ಸ್ಥಾಪನೆಗೊಂಡಿದ್ದರೂ ಪರಿಸ್ಥಿತಿ ವಿಷಮವಾಗಿದೆ.

2024ರಲ್ಲಿ 3,900ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದರೆ, ಶಿಕ್ಷೆಯಾಗಿರುವುದು ಒಂದೆರಡು ಪ್ರಕರಣಗಳಲ್ಲಿ ಮಾತ್ರ. 3,235 ಪ್ರಕರಣಗಳು ವಿಚಾರಣೆ, ತನಿಖೆ ಹಂತದಲ್ಲಿವೆ. ಪೋಕ್ಸೋ ಕಾಯ್ದೆಯಡಿ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಗೃಹ ಇಲಾಖೆ ಮೂಲಗಳ ಪ್ರಕಾರ 2020ರಲ್ಲಿ 2,615 ಪ್ರಕರಣಗಳು ದಾಖಲಾದರೆ, 2021ರಲ್ಲಿ 2,884 ಪ್ರಕರಣಗಳು, 2022ರಲ್ಲಿ 3,209 ಪ್ರಕರಣಗಳು, 2023ರಲ್ಲಿ 3,898 ಪ್ರಕರಣಗಳು ದಾಖಲಾಗಿದೆ. ಅದರಂತೆ ಕಳೆದ ಐದು ವರ್ಷಗಳಲ್ಲಿ 2024ರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷದ ರಾಜ್ಯದಲ್ಲಿ 3,900ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣದಲ್ಲಿ 2,597 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, 638 ಪ್ರಕರಣಗಳು ತನಿಖೆಯ ಹಂತದಲ್ಲಿದೆ. 499ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿದ್ದು, ಶಿವಮೊಗ್ಗ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ತಲಾ 182,164 ಹಾಗೂ 152 ಪ್ರಕರಣಗಳು ದಾಖಲಾಗಿದೆ. ಮೂಲಗಳ ಪ್ರಕಾರ 2020ರಲ್ಲಿ 2,615 ಪ್ರಕರಣಗಳು ದಾಖಲಾದರೆ 2021ರಲ್ಲಿ 2,884 ಪ್ರಕರಣಗಳು, 2022ರಲ್ಲಿ 3,209 ಪ್ರಕರಣಗಳು, 2023ರಲ್ಲಿ 3,898 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೇವಲ ಇಬ್ಬರನ್ನು ಮಾತ್ರ ಅಪರಾಧಿಗಳು ಎಂದು ಗುರುತಿಸಲಾಗಿದೆ. ಕಲಬುರಗಿ ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಅಂದರೆ 20 ಪ್ರಕರಣಗಳು ದಾಖಲಾಗಿವೆ.

ತ್ಯಾಚಾರ ಪ್ರಕರಣಗಳಲ್ಲೂ ಹೆಚ್ಚಳ ಪೋಕ್ಸೋ ಪ್ರಕರಣಗಳು ಹೊರತುಪಡಿಸಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅ*ತ್ಯಾಚಾರ ಪ್ರಕರಣಗಳೂ ರಾಜ್ಯದಲ್ಲಿ ಏರಿಕೆ ಕಂಡಿವೆ. 2020ರಲ್ಲಿ 479 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 928 ಆರೋಪಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 622ರನ್ನು ಬಂಧಿಸಲಾಗಿದೆ. 2021ರಲ್ಲಿ 556 ಪ್ರಕರಣಗಳು ದಾಖಲಾಗಿದ್ದು, 1,091 ಆರೋಪಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 800 ಜನರನ್ನು ಬಂಧಿಸಲಾಗಿದೆ. 2022ರಲ್ಲಿ 537 ಪ್ರಕರಣಗಳು ದಾಖಲಾಗಿದ್ದು, 1124 ಆರೋಪಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 717 ಆರೋಪಿಗಳನ್ನು ಬಂಧಿಸಲಾಗಿದೆ. 2023ರಲ್ಲಿ 601 ಪ್ರಕರಣಗಳು ದಾಖಲಾಗಿದ್ದು 1175 ಆರೋಪಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 773 ಜನರನ್ನು ಬಂಧಿಸಲಾಗಿದೆ. 2024ರಲ್ಲಿ 736 ಪ್ರಕರಣಗಳು ದಾಖಲಾಗಿದ್ದು 1438 ಆರೋಪಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೇವಲ 869 ಆರೋಪಿತರನ್ನು ಮಾತ್ರ ಬಂಧಿಸಲಾಗಿದೆ. 2025ರ ಫೆಬ್ರವರಿವರೆಗೆ 124 ಪ್ರಕರಣಗಳು ದಾಖಲಾಗಿದ್ದು 255 ಆರೋಪಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 20 ಜನರನ್ನು ಮಾತ್ರ ಬಂಧಿಸಲಾಗಿದೆ.

ರಾಜಧಾನಿಯಲ್ಲೇ ಹೆಚ್ಚು
ಅತೀ ಭದ್ರತೆಯ ನಡುವೆಯೂ ಬೆಂಗಳೂರು ನಗರದಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿ ವಿಚಾರವಾಗಿದೆ. ಮಹಿಳೆಯರ ಹಾಗೂ ಮಕ್ಕಳ ಭದ್ರತೆಗಾಗಿ ನಗರದ 3,000 ಸ್ಥಳಗಳಲ್ಲಿ 7,500 ಕೆಮರಾ ಅಳವಡಿಕೆ, ಅತ್ಯಾಧುನಿಕ ಮೊಬೈಲ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ ವಾಹನಗಳ ಬಳಕೆ, ನಗರದ 50 ಸ್ಥಳಗಳಲ್ಲಿ ಸೇಷ್ಟಿ ಲ್ಯಾಂಡ್‌ ಸ್ಥಾಪನೆ, ನಿರ್ಭಯ ಕೇಂದ್ರ, ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸ್ವ-ರಕ್ಷಣಾ ತರಬೇತಿ ಹೀಗೆ ಹತ್ತು ಹಲವು ಯೋಜನೆಗಳನ್ನು ಮಹಿಳೆಯರಿಗಾಗಿಯೇ ಆರಂಭಿಸಲಾಗಿದೆ. ಆದರೂ ಬೆಂಗಳೂರಿನಲ್ಲಿ 2024ರಲ್ಲಿ ಅತಿ ಹೆಚ್ಚು 499 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2024ರಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಅತಿ ಹೆಚ್ಚು 751 ಪ್ರಕರಣಗಳಿಗೆ ರಾಜಧಾನಿ ಸಾಕ್ಷಿಯಾಗಿದೆ.

ಅತಿ ಹೆಚ್ಚು ಪೋಕ್ಸೋ ಪ್ರಕರಣ ದಾಖಲಾದ ಜಿಲ್ಲೆ
ಬೆಂಗಳೂರು ನಗರ – 499
ಶಿವಮೊಗ್ಗ -182
ಚಿಕ್ಕಬಳ್ಳಾಪುರ -164
ತುಮಕೂರು-152
ಹಾಸನ -133
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ವರ್ಷ ಶಿಕ್ಷೆಯಾದ ಲೈಂಗಿಕ ದೌರ್ಜನ್ಯ ಕೇಸ್‌ ಶಿಕ್ಷೆಯಾದ ಅತ್ಯಾಚಾರ ಕೇಸ್‌
2020-47-8
2021-31-7
2022-28-9
2023-19-0
2024-8-0
2025(ಫೆಬ್ರವರಿ)-0-0


Spread the love
Share:

administrator

Leave a Reply

Your email address will not be published. Required fields are marked *