ಐವಿಎಫ್ ತಂತ್ರಜ್ಞಾನದಲ್ಲಿ ಹೊಸ ದಾಖಲೆ: 33 ವರ್ಷಗಳ ಹಿಂದೆ ಸಂರಕ್ಷಿಸಲಾಗಿದ್ದ ಅಂಡಾಣುವಿನಿಂದ ಮಗು ಜನನ!

ವಾಷಿಂಗ್ಟನ್: ಅಮೆರಿಕದ ಒಹಿಯೊ ಎಂಬ ಪಟ್ಟಣದಲ್ಲಿ ಮಹಿಳೆಯೊಬ್ಬರಿಂದ 33 ವರ್ಷಗಳ ಹಿಂದೆ ಸಂಸ್ಕರಿಸಲ್ಪಟ್ಟಿದ್ದ ಅಂಡಾಣುಗಳನ್ನು ಪಡೆದು ಇಂದಿನ ತಲೆಮಾರಿನ ಯುವತಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಐವಿಎಫ್ ತಂತ್ರಜ್ಞಾನ ಹಾಗೂ ಎಗ್ ಫ್ರೋಜಿಂಗ್ ಕ್ಷೇತ್ರದಲ್ಲಿ ಹೊಸ ದಾಖಲೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

1992ರಲ್ಲಿ ಸಂಸ್ಕರಿಸಲ್ಪಟ್ಟ ಅಂಡಾಣುಗಳ ಮೂಲಕ 2022ರಲ್ಲಿ ಒಬ್ಬ ಮಹಿಳೆಗೆ ಹೆರಿಗೆಯಾಗಿತ್ತು. ಅಲ್ಲಿಗೆ, ಆ ಅಂಡಾಣು ಸಂಸ್ಕರಣೆಗೊಂಡು 30 ವರ್ಷಗಳ ನಂತರ ಅದರಿಂದ ಮಗುವೊಂದು ಜನನವಾಗಿತ್ತು. ಆದರೀಗ, ಆ ದಾಖಲೆಯನ್ನು ಒಹಿಯೊ ನಗರದ ಮಹಿಳೆ ಲಿಂಡ್ಸೆ ಎಂಬುವರು ಮುರಿದಿದ್ದಾರೆ. 1994ರಲ್ಲಿ ಸಂಸ್ಕರಿಸಲಾಗಿದ್ದ ಅಂಡಾಣುವಿನಿಂದ ಗರ್ಭಿಣಿಯಾಗಿ ಇದೇ ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅಲ್ಲಿಗೆ, 33 ವರ್ಷಗಳ ನಂತರ ಸಂಸ್ಕರಿತ ಅಂಡಾಣುವೊಂದು ಯಶಸ್ವಿಯಾಗಿ ತಾಯ್ತನ ಕೊಟ್ಟಿದೆ. ಇಷ್ಟು ದೀರ್ಘಾವಧಿಯಲ್ಲಿ ಅಂಡಾಣುವಿನಿಂದ ಮಗು ಪಡೆದಿದ್ದು ಹೊಸ ದಾಖಲೆಯೇ ಸರಿ ಎಂದು ವೈದ್ಯರು ತಿಳಿಸಿದ್ದಾರೆ.
1994ರಲ್ಲಿ ಲಿಂಡಾ ಆರ್ಚೆರ್ಡ್ (ಈಗ ಅವರಿಗೆ 62 ವರ್ಷ) ಎಂಬ ಮಹಿಳೆಯೊಬ್ಬರು ತಮ್ಮ ನಾಲ್ಕು ಅಂಡಾಣುಗಳನ್ನು ಐವಿಎಫ್ ತಂತ್ರಜ್ಞಾನದಡಿ ಕ್ರಿಶ್ಚಿಯನ್ ಎಂಬ್ರಿಯೋ ಅಡಾಪ್ಷನ್ ಏಜೆನ್ಸಿ ಎಂಬ ಸಂಸ್ಥೆಯ ನೈಟ್ ಲೈಟ್ ಕ್ರಿಶ್ಚಿಯನ್ ಅಡಾಪ್ಷನ್ಸ್ ಎಂಬ ಐವಿಎಫ್ ಕೇಂದ್ರದಲ್ಲಿ ಫ್ರೀಜ್ ಮಾಡಿಸಿದ್ದರು. ಅವುಗಳಲ್ಲಿ ಒಂದನ್ನು ಅದೇ ವರ್ಷವೇ ಪಡೆದು ಆಗ ತಮ್ಮೊಂದಿಗಿದ್ದ ತಮ್ಮ ಪತಿಯ ವೀರ್ಯಾಣಗಳ ಸಹಾಯದಿಂದ ಗರ್ಭಧಾರಣೆ ಮಾಡಿಸಿಕೊಂಡಿದ್ದರು. ಒಂಭತ್ತು ತಿಂಗಳು ಪೂರ್ತಿಯಾಗಿ ಅವರಿಗೆ ಹೆಣ್ಣುಮಗು ಜನಿಸಿತ್ತು. ಈಗ ಆ ಮಗು 30 ವರ್ಷದವಳಾಗಿದ್ದಾಳೆ.
ಐವಿಎಫ್ ಕೇಂದ್ರದಲ್ಲಿ ಫ್ರೀಜ್ ಮಾಡಿಸಲಾಗಿದ್ದ ಇನ್ನುಳಿದ ಮೂರು ಅಂಡಾಣುಗಳಲ್ಲಿ ಉಳಿದ ಮೂರನ್ನು ಅವರು ಪಡೆಯದೇ ಹಾಗೇ ಬಿಟ್ಟಿದ್ದರು. ಅವುಗಳನ್ನು ಸಂಶೋಧನೆಗಾಗಿ ಬಳಸಿಕೊಳ್ಳುವಂತೆ ಹೇಳಬಹುದಿತ್ತು ಅಥವಾ ಯಾವುದಾದರೂ ಮಕ್ಕಳು ಬೇಕು ಎನ್ನುವ ಜೋಡಿಗಳಿಗೆ ಅವುಗಳನ್ನು ದಾನ ಮಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಿರಲಿಲ್ಲ. ತಮ್ಮ ಅಂಡಾಣುಗಳು ಸೇಫ್ ಆಗಿರಬೇಕು, ತಾವು ಇಚ್ಛೆಪಟ್ಟ ಜೋಡಿಗೆ ಮಾತ್ರ ಈ ಅಂಡಾಣುಗಳನ್ನು ನೀಡಬೇಕು ಎಂಬ ಗಟ್ಟಿ ನಿರ್ಧಾರ ಮಾಡಿದ್ದ ಅವರು, ತಮ್ಮ ಅಂಡಾಣುಗಳನ್ನು ಸಂಸ್ಕರಿಸಿದ್ದ ಐವಿಎಫ್ ಕೇಂದ್ರಕ್ಕೆ ವರ್ಷಕ್ಕೆ ಹಲವಾರು ಡಾಲರ್ ಗಳ ಬಾಡಿಗೆಯನ್ನು ತೆರುತ್ತಾ ಆ ಅಂಡಾಣುಗಳನ್ನು ಕಾಯ್ದಿರಿಸಿದ್ದರು.

ತಮ್ಮ ಅಂಡಾಣುಗಳಿಗೆ ಸೂಕ್ತ ಜೋಡಿಯನ್ನು ಹುಡುಕಲು ಅವರು ಸ್ನೋ ಫ್ಲೇಕ್ಸ್ ಎಂಬ ಅಭಿಯಾನವನ್ನೂ ಹಮ್ಮಿಕೊಂಡಿದ್ದರು. ಈ ಅಭಿಯಾನದಡಿ, ಕೌಕಾಸಿಯನ್ ಮೂಲದ ಅಮೆರಿಕನ್ ಜೋಡಿಗೆ ಮಾತ್ರ ಈ ಅಂಡಾಣುಗಳನ್ನು ನೀಡಬೇಕೆನ್ನುವುದು ತಮ್ಮ ಇಚ್ಛೆಯಾಗಿದ್ದು, ಅಂಥವರಿಗೆ ಮಾತ್ರ ತನ್ನ ಅಂಡಾಣುಗಳನ್ನು ನೀಡಲು ಸಿದ್ಧ ಎಂದು ಅವರು ಪ್ರಕಟಿಸಿದ್ದರು. ಜೊತೆಗೆ, ಅಂಡಾಣುಗಳಿಂದ ಮಗು ಪಡೆದಾದ ಮೇಲೆ ಆ ಜೋಡಿಯು ಅಮೆರಿಕವನ್ನು ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತನ್ನೂ ಹಾಕಿದ್ದರು. ಅವರ ಈ ಷರತ್ತುಬದ್ಧ ಹುಡುಕಾಟಕ್ಕೆ ಕಡೆಗೂ ಒಂದು ಜೋಡಿ ಸಿಕ್ಕಿತು.
ಲಿಂಡ್ಸೆ (35) ಹಾಗೂ ಟಿಮ್ ಪಿಯರ್ಸ್ (34) ಎಂಬ ದಂಪತಿಗೆ ಮದುವೆಯಾಗಿ ಏಳು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆ ಜೋಡಿಯು ಲಿಂಡಾ ಆರ್ಚರ್ಡ್ ಅವರ ಷರತ್ತುಗಳನ್ನು ಒಪ್ಪಿ ಅವರ ಸಂಸ್ಕರಿಸಿದ ಅಂಡಾಣುಗಳನ್ನು ಪಡೆದಿದ್ದರು. ಲಿಂಡ್ಸೆಗೆ ಇತ್ತೀಚೆಗೆ ಗಂಡು ಮಗುವಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಈ ಇಡೀ ವೃತ್ತಾಂತವನ್ನು ವರದಿ ಮಾಡಿರುವ ಎಂಐಟಿ ಟೆಕ್ನಾಲಜಿ ರಿವ್ಯೂ ಮ್ಯಾಗಜಿನ್ ನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ, ಬೆಂಗಳೂರಿನಲ್ಲಿ ಮಹಿಳೆಯರು ತಮ್ಮ ಅಂಡಾಣುಗಳನ್ನು ಸಂಸ್ಕರಿಸುವ ತಂತ್ರಜ್ಞಾನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂಬ ಸುದ್ದಿಯೊಂದು ವಿಜಯ ಕರ್ನಾಟಕ ವೆಬ್ ನಲ್ಲಿ ಪ್ರಕಟವಾಗಿತ್ತು. ಇಲ್ಲಿ ಈ ಟ್ರೆಂಡ್ ಈಗ ಶುರುವಾಗಿದೆಯಷ್ಟೇ. ಆದರೆ, ವಿದೇಶಗಳಲ್ಲಿ ಇದು ಸುಮಾರು 30-35 ವರ್ಷಗಳ ಹಿಂದೆಯೇ ಶುರುವಾಗಿದೆ.
ಬೆಂಗಳೂರು ಮಹಿಳೆಯರಲ್ಲಿ ಹೆಚ್ಚುತ್ತಿದೆ ‘ಅಂಡಾಣು ಸಂಸ್ಕರಣೆ
ಬೆಂಗಳೂರಿನಲ್ಲಿ ತಾಯ್ತನವನ್ನು ಮುಂದೂಡುತ್ತಿರುವ ಯುವತಿಯುರು ತಮ್ಮ ಅಂಡಾಣುಗಳನ್ನು ಸಂರಕ್ಷಿಸಲು ಹೆಚ್ಚೆಚ್ಚು ಮುಂದಾಗುತ್ತಿದ್ದಾರೆ. ಮದುವೆಯಾದವರು ಅಥವಾ ಆಗದವರು ಎಲ್ಲರೂ ಈ ಪ್ರಕ್ರಿಯೆಯ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಿರುವವರಲ್ಲಿ, 27 ರಿಂದ 36 ವರ್ಷದೊಳಗಿನ ಮಹಿಳೆಯರೇ ಹೆಚ್ಚು. ಈಗ ಅಂಡಾಣುಗಳನ್ನು ಸಂಸ್ಕರಿಸಿ ಮುಂದೆ ತಮಗೆ ಬೇಕಾದಾಗ ಮಕ್ಕಳನ್ನು ಮಾಡಿಕೊಳ್ಳಲು ಹೆಚ್ಚು ಆಸೆ ಪಡುತ್ತಿದ್ದಾರೆ ಎನ್ನಲಾಗಿದೆ.
ಅಂಡಾಣು ಬಿಡುಗಡೆಗೆ ಅಗತ್ಯ ಇದು ಎಂಟು ಆಹಾರಗಳು
ಅಂಡಾಣು ಬಿಡುಗಡೆಯೆಂದರೆ ಅದೊಂದು ಮಹತ್ವದ ಕಾಲಘಟ್ಟವಾಗಿರುತ್ತದೆ. ಮಹಿಳೆಯರ ಆರೋಗ್ಯಕ್ಕೂ ಇದಕ್ಕೂ ನಂಟಿದೆ. ಹಾಗಾಗಿ, ಅಂಡಾಣು ಬಿಡುಗಡೆಯ ಸಂದರ್ಭದಲ್ಲಿ ಕೆಲವು ಉತ್ತಮ ಆಹಾರಗಳನ್ನು ಸೇವಿಸುವುದರಿಂದ ಈ ಪ್ರಕ್ರಿಯೆಗೆ ಸಹಕಾರಿಯಾಗಿರುತ್ತದೆ. ಮೊಟ್ಟೆ, ವಾಲ್ನಟ್ಸ್, ದಾಳಿಂಬೆ, ಅನಾನಸ್, ಟೊಮ್ಯಾಟೊ, ಮೂಲಂಗಿ, ಪಾಲಕ್, ಗೆಣಸು ಉತ್ತಮವಾದ ಆಹಾರಗಳು ಎಂದು ವೈದ್ಯರು ತಿಳಿಸಿದ್ದಾರೆ.