Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇತಿಹಾಸ ಪಠ್ಯದಲ್ಲಿ ಮೊಘಲರ ಪಾತ್ರ ಪುನರ್‌ವ್ಯಾಖ್ಯಾನ – NCERT ಹೊಸ ಅಧ್ಯಾಯ

Spread the love

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ NCERT ತನ್ನ 8ನೇ ತರಗತಿ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದೆಹಲಿ ಸುಲ್ತಾನರ ಕ್ರೌರ್ಯ ಮತ್ತು ಮೊಘಲರ ಧಾರ್ಮಿಕ ಅಸಹಿಷ್ಣುತೆಯನ್ನು ಒತ್ತಿಹೇಳುವ ಹೊಸ ವಿಷಯ ಸೇರಿಸಿದೆ.

ಈ ಪರಿಷ್ಕರಣೆಯಿಂದ ಉಂಟಾಗಬಹುದಾದ ವಿವಾದವನ್ನು ತಡೆಯಲು ಒಂದು ಡಿಸ್ಕ್ಲೈಮರ್‌ನೊಂದಿಗೆ ಹೊರಡಿಸಿದ್ದು, ಇದರಲ್ಲಿ ಇತಿಹಾಸದ ವಿವರಣೆಯು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ರೂಪಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಪರಿಷ್ಕೃತ ಪಠ್ಯಪುಸ್ತಕವು ದೆಹಲಿ ಸುಲ್ತಾನರ ಆಡಳಿತ (1206-1526) ಮತ್ತು ಮೊಘಲ್ ಸಾಮ್ರಾಜ್ಯದ (1526-1857) ಕಾಲಘಟ್ಟದಲ್ಲಿ (Mughal Periods) ಕಂಡುಬಂದ ಧಾರ್ಮಿಕ ಅಸಹಿಷ್ಣುತೆಯ ಕೆಲವು ಘಟನೆಗಳನ್ನು ಒಳಗೊಂಡಿದೆ. ಹೊಸ ಪಠ್ಯಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್‌ನನ್ನು ʻಕ್ರೂರ ವಿಜಯಶಾಲಿʼಅಂತ ವರ್ಣಿಸಿದ್ರೆ, ಅಕ್ಬರ್‌ನನ್ನು ʻಕ್ರೌರ್ಯ ಮತ್ತು ಸಹಿಷ್ಣತೆಯ ಏಕರೂಪʼ, ಔರಂಗಜೇಬ್ ತನ್ನ ಆಳ್ವಿಕೆಯಲ್ಲಿ ʻದೇವಾಲಯಗಳು ಮತ್ತು ಗುರುದ್ವಾರಗಳನ್ನು ಕೆಡವಿದ್ದಕ್ಕೆʼ ಹೆಸರುವಾಸಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

NCERT ಈ ವಿಷಯವನ್ನು ಮಂಡಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದು, ಡಿಸ್ಕ್ಲೈಮರ್‌ನಲ್ಲಿ ಈ ವಿವರಣೆಯು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಒತ್ತಿಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *