Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೇಕ್ ಇನ್ ಇಂಡಿಯಾ ನೂತನ ಹೆಜ್ಜೆ: ದೇಶೀಯ ಹೈಡ್ರೋಜನ್ ಡ್ರೋನ್ ಸಜ್ಜು

Spread the love

ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ತಯಾರಿಸಲಾದ ಹೈಡ್ರೋಜನ್ ಶಕ್ತ ಡ್ರೋನ್​​ಗಳು ಸೇನೆಯಲ್ಲಿ ನಿಯೋಜನೆಗೆ ಸಿದ್ಧವಾಗಿವೆ. ಇಸ್ರೇಲ್​​ನ ಹೆವೆನ್​​ಡ್ರೋನ್ಸ್ ಎನ್ನುವ ಸಂಸ್ಥೆಯ ಸಹಯೋಗದಲ್ಲಿ ಭಾರತದ ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆ ಈ ಡ್ರೋನ್​​​ಗಳನ್ನು ತಯಾರಿಸಿದೆ. ಈ ಜಲಜನಕ ಶಕ್ತ ಡ್ರೋನ್​​ಗಳಿಂದ ಭಾರತದ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಳ್ಳಗೊಳ್ಳಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಡ್ರೋನ್​​ಗಳು ಎಷ್ಟು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಸಾಬೀತಾರಿದೆ. ಈ ಹಿನ್ನೆಲೆಯಲ್ಲಿ ಹೈಡ್ರೋಜನ್ ಡ್ರೋನ್​​ಗಳ ಆಗಮನವು ಭಾರತದ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.ಅಮೆರಿಕ, ಇಸ್ರೇಲ್ ಮತ್ತು ಭಾರತದ ಶಕ್ತಿಗಳ ಸಂಯೋಜನೆ ಈ ಹೈಡ್ರೋನ್​ಶಕ್ತ ಡ್ರೋನ್​​ಗೆ
ಇಸ್ರೇಲ್​​ನ ಹೆವೆನ್​ಡ್ರೋನ್ಸ್ ಕಂಪನಿಯು ಅಮೆರಿಕ ಮೂಲದ ಹೆವೆನ್ ಎನ್ನುವ ಕಂಪನಿಯ ಅಂಗಸಂಸ್ಥೆಯಾಗಿದೆ. ಅಮೆರಿಕದ ಈ ಕಂಪನಿಯು ಹೈಡ್ರೋಜನ್ ಶಕ್ತ ಡ್ರೋನ್​​ಗಳ ತಯಾರಿಕೆಗೆ ಹೆಸರಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ಈ ಡ್ರೋನ್​​ಗಳನ್ನು ಪರಸ್ ಸಂಸ್ಥೆ ತಯಾರಿಸುತ್ತಿದೆ. ಇಸ್ರೇಲ್​​ನ ಯುದ್ಧ ಸಿದ್ಧ ಮಾದರಿ, ಅಮೆರಿಕದ ತಂತ್ರಜ್ಞಾನ ಹಾಗೂ ಭಾರತದ ಉತ್ಪಾದನಾ ಸಾಮರ್ಥ್ಯ ಇದು ಭಾರತದಲ್ಲಿ ಹೈಡ್ರೋಜನ್ ಶಕ್ತ ಡ್ರೋನ್​​ಗಳಿಗೆ ಜೀವ ತುಂಬಿದೆ ಎನ್ನುತ್ತದೆ ಪರಸ್ ಡಿಫೆನ್ಸ್ ಅಂಡ್ ಸ್ಪೆಸ್ ಟೆಕ್ನಾಲಜೀಸ್ ಸಂಸ್ಥೆ.

ಅಮೆರಿಕ, ಇಸ್ರೇಲ್ ಮತ್ತು ಭಾರತದ ಶಕ್ತಿಗಳ ಸಂಯೋಜನೆ ಈ ಹೈಡ್ರೋನ್​ಶಕ್ತ ಡ್ರೋನ್​​ಗೆ
ಇಸ್ರೇಲ್​​ನ ಹೆವೆನ್​ಡ್ರೋನ್ಸ್ ಕಂಪನಿಯು ಅಮೆರಿಕ ಮೂಲದ ಹೆವೆನ್ ಎನ್ನುವ ಕಂಪನಿಯ ಅಂಗಸಂಸ್ಥೆಯಾಗಿದೆ. ಅಮೆರಿಕದ ಈ ಕಂಪನಿಯು ಹೈಡ್ರೋಜನ್ ಶಕ್ತ ಡ್ರೋನ್​​ಗಳ ತಯಾರಿಕೆಗೆ ಹೆಸರಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ಈ ಡ್ರೋನ್​​ಗಳನ್ನು ಪರಸ್ ಸಂಸ್ಥೆ ತಯಾರಿಸುತ್ತಿದೆ. ಇಸ್ರೇಲ್​​ನ ಯುದ್ಧ ಸಿದ್ಧ ಮಾದರಿ, ಅಮೆರಿಕದ ತಂತ್ರಜ್ಞಾನ ಹಾಗೂ ಭಾರತದ ಉತ್ಪಾದನಾ ಸಾಮರ್ಥ್ಯ ಇದು ಭಾರತದಲ್ಲಿ ಹೈಡ್ರೋಜನ್ ಶಕ್ತ ಡ್ರೋನ್​​ಗಳಿಗೆ ಜೀವ ತುಂಬಿದೆ ಎನ್ನುತ್ತದೆ ಪರಸ್ ಡಿಫೆನ್ಸ್ ಅಂಡ್ ಸ್ಪೆಸ್ ಟೆಕ್ನಾಲಜೀಸ್ ಸಂಸ್ಥೆ.
ಹೈಡ್ರೋಜನ್ ಶಕ್ತ ಯುಎವಿಗಳ ವಿಶೇಷತೆ ಏನು?
ಸಾಮಾನ್ಯವಾಗಿ ಡ್ರೋನ್​​ಗಳು ಬ್ಯಾಟರಿ ಚಾಲಿತವಾಗಿರುತ್ತವೆ. ಹೈಡ್ರೋಜನ್ ಡ್ರೋನ್​​ಗಳು ಹೈಡ್ರೋಜನ್ ಫುಯಲ್ ಸೆಲ್​​ಗಳನ್ನು ಹೊಂದಿರುತ್ತವೆ. ಇವು ದೀರ್ಘಾವಧಿ ಕಾಲ ಹಾರಾಡಬಲ್ಲುವು. ದೂರ ಶ್ರೇಣಿಯ ಆಕ್ರಮಣ ಹಾಗೂ ಸ್ಟೀಲ್ತ್ ಅಪರೇಷನ್ಸ್​​ಗೆ ಈ ಡ್ರೋನ್​​ಗಳು ಹೇಳಿ ಮಾಡಿರುತ್ತವೆ.

ನಾಗರಿಕ ಬಳಕೆಗೂ ಡ್ರೋನ್​​​ಗಳನ್ನು ತಯಾರಿಸಲಿದೆ ಪಾರಸ್
ಪಾರಸ್ ಡಿಫೆನ್ಸ್ ಮತ್ತು ಹೆವೆನ್​​ಡ್ರೋನ್ಸ್ ಸಂಸ್ಥೆಗಳ ಈ ಜಂಟಿ ವ್ಯವಹಾರದಲ್ಲಿ ಮಿಲಿಟರಿ ಡ್ರೋನ್​​​ಗಳಷ್ಟೇ ಅಲ್ಲದೆ, ನಾಗರಿಕ ಬಳಕೆಗೆ ಬೇಕಾದ ಡ್ರೋನ್​​ಗಳನ್ನೂ ತಯಾರಿಸುತ್ತಿದೆ. ಸರಕು ಸಾಗಣೆಗೆ ಇವುಗಳನ್ನು ಬಳಸಬಹುದಾಗಿದೆ. ಭಾರತದ ಮಾರುಕಟ್ಟೆಗೆ ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಗೂ ಈ ಡ್ರೋನ್​​ಗಳ ಸರಬರಾಜಾಗಬಹುದು. ಭಾರತದಲ್ಲಿ ಎವಿರೋನಿಕ್ಸ್ ಡ್ರೋನ್ ಎನ್ನುವ ಕಂಪನಿ ಕೂಡ ಹೈಡ್ರೋಜನ್​​ಶಕ್ತ ಡ್ರೋನ್​ಗಳನ್ನು ತಯಾರಿಸುತ್ತಿದೆ.
ಜಾಗತಿಕವಾಗಿ, ಚೀನಾ ಅತಿಹೆಚ್ಚು ಹೈಡ್ರೋಜನ್ ಡ್ರೋನ್​​ಗಳನ್ನು ತಯಾರಿಸುತ್ತದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಸೌತ್ ಕೊರಿಯ, ಜಪಾನ್ ಮೊದಲಾದ ಕೆಲ ದೇಶಗಳು ಈ ತಂತ್ರಜ್ಞಾನ ಹೊಂದಿವೆ.

Spread the love
Share:

administrator

Leave a Reply

Your email address will not be published. Required fields are marked *