ನೆಲಮಂಗಲ ಸಾಮೂಹಿಕ ಅತ್ಯಾಚಾರ: ದೀಪಾವಳಿ ದಿನದ ಕೃತ್ಯದ ಪ್ರಮುಖ ಆರೋಪಿ ಮಿಥುನ್ ಬಂಧನ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ದಿನ ಮನೆಗೆ ನುಗ್ಗಿ ಪುರುಷನನ್ನ ಕಟ್ಟಿ ಹಲ್ಲೆ ಮಾಡಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಾಪತ್ತೆಯಾಗಿದ್ದ, ಪ್ರಕರಣ ಪ್ರಮುಖ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್ ರೇಪ್ ಮಾಡಿ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಮಿಥುನ್ ಎ1 ಆರೋಪಿ. ನೆಲಮಂಗಲ ತಾಲೂಕಿನ ಶಿವಗಂಗೆ ಬಳಿ ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಆರೋಪಿಯನ್ನ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ನೇತೃತ್ವದ ತಂಡ ಬಂಧಿಸಿದೆ.
ಈ ಪ್ರಕರಣದ ಎಲ್ಲಾ ಆರು ಜನ ಆರೋಪಿಗಳ ಬಂಧನವಾಗಿದ್ದು, ಆರರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು. ಅವರನ್ನು ಬಾಲಪರಧಿ ಕಾರಾಗೃಹಕ್ಕೆ ಬಿಡಲಾಗಿದೆ. ಉಳಿದಂತೆ ಮಿಥುನ್, ಕಾರ್ತಿಕ್, ನವೀನ್, ಗ್ಲಾನಿ ಬಂಧನವಾಗಿದೆ.
ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸಿ ಡಿಎನ್‌ಎ ಟೆಸ್ಟ್‌ಗೆ ಒಳಪಡಿಸಲಿರುವ ಸಾಧ್ಯತೆ ಇದೆ.