20 ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ವ್ಯಕ್ತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರ್ಲಕ್ಷ್ಯ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಇದೀಗ ಬೆಂಗಳೂರಿನಲ್ಲಿ ವ್ಯಕ್ತಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ರಸ್ತೆಯ ಮೇಲೆ ನಡ್ಕೊಂಡು ಹೋಗುತ್ತಿದ್ದವನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ್ದು, ಏಕಾಏಕಿ 20 ಬೀದಿ ನಾಯಿಗಳು ದಾಳಿ ಮಾಡಿವೆ ಬೆಂಗಳೂರಿನ ಕೊಡಿಗೆಹಳ್ಳಿಯ ಕೆಂಪೇಗೌಡ ನಗರದಲ್ಲಿ ಈ ಒಂದು ಘಟನೆ ನಡೆದಿದೆ.

ಬೀದಿ ನಾಯಿ ದಾಳಿಯಿಂದ 20 ವರ್ಷದ ವೀರೇಶ್ ಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡ ವೀರೇಶ್ ಗೆ ಚಿಕಿತ್ಸೆ ನೀಡದೆ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಬೆಜವಾಬ್ದಾರಿ ವರ್ತನೆ ತೋರಿದ್ದಾರೆ. ಚಿಕಿತ್ಸೆ ನೀಡದೆ ವೈದ್ಯರು ಮನೆಗೆ ವೀರೇಶ ವಾಪಸ್ ಕಳುಹಿಸಿದ್ದಾರೆ. ದೇಹದ ತುಂಬಾ ರಕ್ತ ಸುರಿಯುತ್ತಿದ್ದರು ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಿಲ್ಲ.
ಬ್ಯಾಂಡೇಜ್ ಕೂಡ ಹಾಕದೆ ವೈದ್ಯರು ಮನೆಗೆ ಕಳುಹಿಸಿದ್ದಾರೆ. ಮೊದಲು ಯಲಹಂಕ ಸರ್ಕಾರಿ ಆಸ್ಪತ್ರೆಗೆ ವೀರೇಶ್ ದಾಖಲಾಗಿದ್ದರು. ಆನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು ರಾತ್ರಿಯೇ ವೀರೇಶನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಎಂದು ವೈದ್ಯರು ನಿರ್ಲಕ್ಷ ತೋರಿದ್ದಾರೆ.