Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಟಾಕ್ಸಿಕ್’ನಲ್ಲಿ ನಯನತಾರಾ ಹೊಸ ಅವತಾರ: “ಇದು ಅವರ ವೃತ್ತಿಜೀವನದ ಮೈಲಿಗಲ್ಲು” ಎಂದ ನಿರ್ದೇಶಕಿ ಗೀತು ಮೋಹನ್‌ದಾಸ್!

Spread the love

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾವು ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ, ಇದೀಗ ನಟಿ ನಯನತಾರಾ ಅವರ ‘ಗಂಗಾ’ ಪಾತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಗಂಗಾ ಪಾತ್ರವು ಟಾಕ್ಸಿಕ್ (Toxic) ಸಿನಿಮಾದಲ್ಲಿನ ಪ್ರಬಲ ಪಾತ್ರ ಎಂದು ಹೇಳಲಾಗಿದೆ.

ಬಹುಮುಖ ಪ್ರತಿಭೆಯಿಂದಾಗಿ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಯನತಾರಾ ಅವರು ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಟಾಕ್ಸಿಕ್ ಸಿನಿಮಾದಲ್ಲಿನ ಅವರ ಪಾತ್ರವು ಪ್ರೇಕ್ಷಕರಿಗೆ ಸಂಪೂರ್ಣವಾಗಿ ಹೊಸ ನಯನತಾರಾ ಅವರನ್ನು ಪರಿಚಯ ಮಾಡಿಸಲಿದೆಯಂತೆ. ಗಂಗಾ ಪಾತ್ರದಲ್ಲಿ ನಯನತಾರಾ ಅವರ ರೂಪವು ಕಣ್ಮನ ಸೆಳೆಯುವಂತಿದೆ. ಜೊತೆಗೆ ಅವರ ಭಯರಹಿತ ವ್ಯಕ್ತಿತ್ವ ಈ ಫಸ್ಟ್‌ ಲುಕ್‌ನಲ್ಲಿ ಎದ್ದು ಕಾಣುತ್ತಿದೆ. ಕೈಯಲ್ಲಿ ಗನ್ ಹಿಡಿದು ಅವರು ನೀಡಿರುವ ಪೋಸ್ ಆಕರ್ಷಕವಾಗಿದೆ

ತಿಳಿದಿರುವಂತೆ ನಯನತಾರಾ ಕಳೆದ ಎರಡು ದಶಕಗಳಿಂದ ಅದ್ಭುತ ವೃತ್ತಿಜೀವನ ಹೊಂದಿರುವ ಪ್ರಖ್ಯಾತ ತಾರೆ. ಆದರೆ ಪ್ರೇಕ್ಷಕರು ನೋಡಲು ಕಾಯುತ್ತಿದ್ದ ಅವರೊಳಗಿನ ಒಂದು ವಿಶೇಷ ಪ್ರತಿಭೆಯನ್ನು ‘ಟಾಕ್ಸಿಕ್’ನಲ್ಲಿ ಕಾಣಲಿದ್ದಾರೆ. ನಯನತಾರಾ ಅವರನ್ನು ಹಿಂದೆಂದೂ ತೋರಿಸದ ರೀತಿಯಲ್ಲಿ ತೆರೆಯ ಮೇಲೆ ತರಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರೀಕರಣ ಸಾಗುತ್ತಿದ್ದಂತೆ, ಅವರ ಸ್ವಂತ ವ್ಯಕ್ತಿತ್ವವು ಪಾತ್ರದ ಆತ್ಮಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ಅರಿವಾಯಿತು” ಎಂದು ಗೀತು ಹೇಳಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *