ದೇಶಾದ್ಯಂತ ಎನ್‌ಸಿಇಆರ್‌ಟಿ ನಕಲಿ ಪುಸ್ತಕ ಜಾಲ – 5 ಲಕ್ಷ ಪುಸ್ತಕ ವಶ

ದೇಶಾದ್ಯಂತ ನಕಲಿ ಪಠ್ಯಪುಸ್ತಕ ಮುದ್ರಣದ ಮೇಲೆ ದಾಳಿ ನಡೆಸಲಾಗಿದ್ದು, 2024ರಿಂದೀಚೆಗೆ ಸುಮಾರು 5 ಲಕ್ಷ ನಕಲಿ ಪಠ್ಯಪುಸ್ತಕ ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ರಾಜ್ಯಸಭೆಯಲ್ಲಿ ಗುರುವಾರ ಸಹಾಯಕ ಶಿಕ್ಷಣ ಸಚಿವ ಜಯಂತ್ ಚೌಧರಿ, ಪ್ರತಿಪಕ್ಷ ಸದಸ್ಯರ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ದೇಶದ ಹಲವು ಭಾಗಗಳಲ್ಲಿ ನಕಲಿ ಭಾಗಗಳಲ್ಲಿ ಎನ್ ಸಿಇಆರ್ ಟಿ ಪಠ್ಯಪುಸ್ತಕ ಮುದ್ರಣ ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದರು.
2024-2025ರ ನಡುವೆ ದೇಶಾದ್ಯಂತ 4.71 ಲಕ್ಷ ಎನ್ ಸಿಇಆರ್ ಟಿ ನಕಲಿ ಪಠ್ಯ ಪುಸ್ತಕ ವಶಪಡಿಸಿಕೊಳ್ಳಲಾಗಿದೆ. ಪಠ್ಯ ಪುಸ್ತಕವನ್ನು ವಾಣಿಜ್ಯವಾಗಿ ಬಳಸುವ ಉದ್ದೇಶದಿಂದ ಶಾಲೆಗಳಿಗೆ ನಕಲಿ ಪುಸ್ತಕ ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದೇಶಾದ್ಯಂತ 29 ಕಡೆಗಳಲ್ಲಿ ಪಠ್ಯಪುಸಕ್ತ ನಕಲು ಮಾಡುತ್ತಿದ್ದ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದ್ದು ಸುಮಾರು 20 ಕೋಟಿ ರೂ. ಮೌಲ್ಯದ ಪಠ್ಯಪುಸ್ತಕ ಮುದ್ರಣಕ್ಕೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ನಕಲಿ ಪಠ್ಯಪುಸಕ್ತ ಹಾವಳಿ ತಡೆಗಟ್ಟಲು ಕಡಿಮೆ ದರದಲ್ಲಿ ಪುಸಕ್ತಗಳನ್ನು ಮಾರಾಟ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ಅವರು ವಿವರಿಸಿದರು.