Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಷ್ಟ್ರೀಯ ಏಕತಾ ದಿವಸ್: “ಸಂಪೂರ್ಣ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ನೆಹರೂ ಬಿಡಲಿಲ್ಲ”; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Spread the love

ಗಾಂಧಿನಗರ: ಸ್ವಾತಂತ್ರ‍್ಯ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನ ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲರು (Sardar Vallabhbhai Patel) ಪ್ರಮುಖಪಾತ್ರ ವಹಿಸಿದ್ದರು. ಇಡೀ ಕಾಶ್ಮೀರವನ್ನ ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು, ಆದ್ರೆ ಜವಾಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ ಅಂತ ಪ್ರಧಾನಿ ಮೋದಿ (PM Modi) ವಾಗ್ದಾಳಿ ನಡೆಸಿದರು.

ಗುಜರಾತ್‌ನ ಏಕ್ತಾ ನಗರದ ಏಕತಾ ಪ್ರತಿಮೆಯ ಬಳಿ ನಡೆದ ರಾಷ್ಟ್ರೀಯ ಏಕತಾ ದಿನ ಆಚರಣೆ (Rashtriya Ekta Diwas) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ‍್ಯ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನ ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲರು ಪ್ರಮುಖಪಾತ್ರ ವಹಿಸಿದ್ದರು. ಅಲ್ಲದೆ, ಇಡೀ ಕಾಶ್ಮೀರವನ್ನ ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು, ಆದರೆ ಜವಾಹರಲಾಲ್ ನೆಹರೂ (Jawaharlal Nehru) ಅದಕ್ಕೆ ಅವಕಾಶ ನೀಡಲಿಲ್ಲ ಕಿಡಿ ಕಾರಿದರು.

ಕಾಶ್ಮೀರವನ್ನ ವಿಭಜಿಸಲಾಯಿತು. ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜವನ್ನ ನೀಡಲಾಯಿತು, ಕಾಂಗ್ರೆಸ್‌ನ ತಪ್ಪಿನಿಂದಾಗಿ ರಾಷ್ಟ್ರವು ದಶಕಗಳ ಕಾಲ ಬಳಲಿ ಹೋಯಿತು. ಸರ್ದಾರ್ ಪಟೇಲ್ ಅವರಿಗೆ, ʻಒಂದು ಭಾರತ, ಅತ್ಯುತ್ತಮ ಭಾರತʼ ಎಂಬ ಕಲ್ಪನೆಯು ಅತ್ಯಂತ ಮುಖ್ಯವಾಗಿತ್ತು. ಇತಿಹಾಸ ಬರೆಯುವ ಸಮಯವನ್ನು ವ್ಯರ್ಥ ಮಾಡಬಾರದು. ಆದ್ರೆ ಅದನ್ನ ರಚಿಸಲು ಶ್ರಮಿಸಬೇಕು ಎಂದು ಅವರು ನಂಬಿದ್ದರು ಎಂದು ಬಣ್ಣಿಸಿದರು.

ಪಟೇಲರ ಜನ್ಮದಿನವನ್ನು 2014 ರಿಂದ ರಾಷ್ಟ್ರೀಯ ಏಕತಾ ದಿವಸ್ ಎಂದು ಆಚರಿಸಲಾಗುತ್ತಿದೆ.

ಖರ್ಗೆ ತಿರುಗೇಟು
ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ನಡೆಸಿದ ವಾಗ್ದಾಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು, ದೇಶದಲ್ಲಿ ಆರ್‌ಎಸ್‌ಎಸ್, ಬಿಜೆಪಿಯಿಂದಲೇ ಹೆಚ್ಚು ಕಾನೂನು & ಸುವ್ಯವಸ್ಥೆಗೆ ಧಕ್ಕೆ ಆಗ್ತಿರೋದು. ಹೀಗಾಗಿ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.

1948ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಬರೆದ ಪತ್ರವನ್ನು ಉಲ್ಲೇಖಿಸಿ, ಗಾಂಧಿ ಸತ್ತಾಗ ಆರ್‌ಎಸ್‌ಎಸ್ ವಿರುದ್ಧ ಕ್ರಮಕ್ಕೆ ಸರ್ದಾರ್ ಪಟೇಲ್ ಒತ್ತಾಯಿಸಿದ್ದರು. ಇದು ಜಾತ್ಯತೀತ ದೇಶದ ರಚನೆಯ ಹಿತಾಸಕ್ತಿಗಾಗಿ ತೆಗೆದುಕೊಂಡ ಹೆಜ್ಜೆಯಾಗಿತ್ತು. ಬಿಜೆಪಿ ಯಾವಾಗಲೂ ನೆಹರು ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ. ಆದರೆ ವಾಸ್ತವದಲ್ಲಿ ಅವರಿಗೆ ಪರಸ್ಪರ ಅಪಾರ ಗೌರವವಿತ್ತು ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *