Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಷ್ಟ್ರ ಪ್ರಶಸ್ತಿ ವಿವಾದ: ಶಾರುಖ್ ಖಾನ್ ಪ್ರಶಸ್ತಿಗೆ ನಟಿ ಊರ್ವಶಿ ಅಸಮಾಧಾನ

Spread the love

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಇದೇ ಮೊದಲ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಆಯಿತು. ‘ಜವಾನ್’ ಸಿನಿಮಾದ ಅಭಿನಯದಕ್ಕಾಗಿ ಶಾರುಖ್ ಖಾನ್ ಅವರು ‘ಬೆಸ್ಟ್ ಆಯಕ್ಟರ್ ನ್ಯಾಷನಲ್ ಅವಾರ್ಡ್’ (Best Actor National Award) ಪಡೆದಿದ್ದಾರೆ.

ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಶಾರುಖ್ ಖಾನ್ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ನೀಡಿದ್ದನ್ನು ಕೆಲವರು ಪ್ರಶ್ನಿಸಿದ್ದಾರೆ. ಹಿರಿಯ ನಟಿ ಊರ್ವಶಿ (Urvashi) ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಭಾಷೆಯ ‘ಪೂಕಾಲಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ವಿಜಯ ರಾಘವನ್ ಅವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ, ಮಲಯಾಳಂನ ‘ಉಳ್ಳೋಳುಕ್ಕು’ ಸಿನಿಮಾದ ನಟನೆಗಾಗಿ ಊರ್ವಶಿ ಅವರು ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜ್ಯೂರಿ ತಂಡದವರು ಶಾರುಖ್ ಖಾನ್ ಅವರನ್ನು ಅತ್ಯುತ್ತಮ ನಟನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮಾನದಂಡ ಏನು ಎಂದು ಊರ್ವಶಿ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಊರ್ವಶಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ವಿಜಯ ರಾಘವನ್ ಎಂಥ ಶ್ರೇಷ್ಠ ನಟ. ಶಾರುಖ್ ಖಾನ್ ಮತ್ತು ವಿಜಯ ರಾಘವನ್ ನಡುವೆ ಜೂರಿಗಳು ಏನನ್ನು ಪರಿಗಣಿಸಿದರು? ಒಬ್ಬರು ಪೋಷಕ ನಟನಾದರೆ, ಇನ್ನೊಬ್ಬರು ಅತ್ಯುತ್ತಮ ನಟ ಆಗಿದ್ದು ಹೇಗೆ? ಇದಕ್ಕೆ ಮಾನದಂಡಗಳೇನು’ ಎಂದು ಊರ್ವಶಿ ಕೇಳಿದ್ದಾರೆ.

‘ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳಬೇಕು. ನಾವು ಕೂಡ ತೆರಿಗೆ ಕಟ್ಟುತ್ತೇವೆ. ವಿಜಯ ರಾಘವನ್ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವ ಇದೆ. ಅವರು ಮಾಡಿದ ಸಿನಿಮಾ ಬಿಗ್ ಬಜೆಟ್ನದ್ದಲ್ಲ. ಬೇರೆ ಭಾಷೆಯವರು ಮಾಡುವ ರೀತಿ 250 ದಿನ ಚಿತ್ರೀಕರಣ ಮಾಡುವಂಥದ್ದೂ ಅಲ್ಲ’ ಎಂದಿದ್ದಾರೆ ಊರ್ವಶಿ. ‘ಪೂಕಾಲಂ’ ಸಿನಿಮಾಕ್ಕಾಗಿ ವಿಜಯ ರಾಘವನ್ ಹಾಕಿದ ಶ್ರಮಕ್ಕೆ ಇನ್ನಷ್ಟು ಮನ್ನಣೆ ಸಿಗಬೇಕಿತ್ತು ಎಂಬುದು ಊರ್ವಶಿ ಅವರ ಅಭಿಪ್ರಾಯ.

71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಟ್ಟಿಯಲ್ಲಿ ನಟಿ ರಾಣಿ ಮುಖರ್ಜಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ. ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ದೇಶನಕ್ಕಾಗಿ ಸುದೀಪ್ತೋ ಸೇನ್ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿದ್ದನ್ನು ಕೂಡ ಹಲವರು ಖಂಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *