Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೈಸೂರು: ವಂಚಿತ ವಿಳಾಸ ಬಳಸಿ ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಯತ್ನ

Spread the love

ಮೈಸೂರು: ಯಾರದ್ದೋ ಮನೆಯ ವಿಳಾಸವನ್ನು ತನ್ನ ಮನೆಯ ವಿಳಾಸ ಅಂತ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಕೊಟ್ಟು ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಯತ್ನಿಸಿರುವ ಘಟನೆ ಮೈಸೂರಿನ ಚಾಮರಾಜ ಕ್ಷೇತ್ರದ ಮಡಿವಾಳ ಬೀದಿಯಲ್ಲಿ ಬೆಳಕಿಗೆ ಬಂದಿದೆ. ಸಲ್ಮಾನ್ ಎಂಬ ಯುವಕ ಮೈಸೂರಿನ ಮಡಿವಾಳ ಬೀದಿಯ ಮನೆ ನಂ. 130 ರಲ್ಲಿ ವಾಸವಿದ್ದೇನೆ ಎಂದು ಸಬ್ ರಿಜಿಸ್ಟ್ರಾರ್‌ಗೆ ಸಲ್ಲಿಕೆ ಮಾಡಿದ್ದಾನೆ. ಹಿಂದೂ ಯುವತಿಯ ಜೊತೆ ಮದುವೆಯಾಗಲು ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅಸಲಿಗೆ ಸಲ್ಮಾನ್ ಈ ಮನೆಯಲ್ಲಿ ಬಾಡಿಗೆ ಇಲ್ಲ. ಅಲ್ಲದೇ ಈ ಯುವಕ ಯಾರು ಅಂತನೂ ಮನೆಯ ಮಾಲೀಕನಿಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾಗಿ ಸಬ್ ರಿಜಿಸ್ಟ್ರಾರ್‌ಗೆ ಮನೆಯ ಮಾಲೀಕ ರವೀಂದ್ರ ದೂರು ನೀಡಿದ್ದಾರೆ. ಸಲ್ಮಾನ್ ಯಾರು ಅಂತಲೇ ಗೊತ್ತಿಲ್ಲ. ನಮ್ಮ ಮನೆಯ ವಿಳಾಸವನ್ನ ದುರುಪಯೋಗ ಪಡಿಸಿಕೊಂಡಿದ್ದಾನೆ.

ನಾನು ಯಾವ ಕುಟುಂಬಕ್ಕೂ ಮನೆ ಬಾಡಿಗೆ ಕೊಟ್ಟಿಲ್ಲ. ಒಂದು ಪಕ್ಷದ ಕಚೇರಿಗೆ ಮಾತ್ರ ಬಾಡಿಗೆ ಕೊಟ್ಟಿದ್ದೇನೆ. ನನಗೆ ನನ್ನ ಮನೆಯ ವಿಳಾಸ ಬಳಸಿರುವ ಸಲ್ಮಾನ್‌ ಯಾರು ಎಂಬುದೇ ಗೊತ್ತಿಲ್ಲ. ನನಗೆ ವಾಟ್ಸಪ್‌ ಮೂಲಕ ಮಾಹಿತಿ ಬಂತು. ಕೂಡಲೇ ನಾನು ಸಬ್ ರಿಜಿಸ್ಟ್ರಾರ್‌ಗೆ ದೂರು ಕೊಟ್ಟಿದ್ದೇನೆ ಅಂತ ಮನೆಯ ಮಾಲೀಕ ಎಂ.ರವೀಂದ್ರ ಹೇಳಿದ್ದಾರೆ. ಅಲ್ಲದೇ ಈ ವಿವಾಹ ನೊಂದಣಿಯನ್ನ ವಜಾಮಾಡಿ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *