ಮೈಸೂರು: ವರದಕ್ಷಿಣೆ ಕಿರುಕುಳ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ, ಡಾ. ಆದರ್ಶಗೆ ಬಿಗ್ ರಿಲೀಫ್
ಸುಳ್ಯ:ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ನಿರಾಕರಿಸುತ್ತಿರುವುದಕ್ಕೆ ವರದಕ್ಷಿಣೆಗಾಗಿ ಷರತ್ತು ವಿಧಿಸಿರುವ ತನ್ನ ಪತಿ ಡಾ| ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮೈಸೂರಿನ ಅನೂಹ್ಯ ಅವರು ಮೈಸೂರಲ್ಲಿ ಪೊಲೀಸರಿಗೆ ನೀಡಿರುವ ಕೇಸಿಗೆ ರಾಜ್ಯ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಅನೂಹ್ಯ ತನ್ನ ಪತಿ ಮತ್ತು ಅವರ ಮನೆಯವರ ಮೇಲೆ ಪೊಲೀಸ್ ದೂರು ಕೊಡುವುದಕ್ಕಿಂತ ಮೊದಲೇ ಡಾ| ಆದರ್ಶರು ಪತ್ನಿ ಅನೂಹ್ಯರಿಂದ ವಿಚ್ಛೇದನ ಕೋರಿ ಮೈಸೂರಲ್ಲಿ ದಾವೆ ಹೂಡಿದ್ದರೆಂದೂ ಆ ಬಳಿಕ ಉದ್ದೇಶಪೂರ್ವಕವಾಗಿ ಈ ರೀತಿ ಕೇಸು ಹಾಕಿ ಅವಮಾನಗೊಳಿಸಲು ಪ್ರಯತ್ನಿಸಿರುವುದಾಗಿಯೂ ಡಾ| ಆದರ್ಶ ಪರ ವಕೀಲರು ದಾಖಲೆ ಸಹಿತ ವಾದ ಮಂಡಿಸಿದ್ದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಈ ಆದೇಶ ಮಾಡಿದ್ದಾರೆ ಎಂದು ಡಾ| ಆದರ್ಶ ಪರ ವಾದಿಸಿರುವ ಹಿರಿಯ ನ್ಯಾಯವಾದಿ ಧರ್ಮಪಾಲ ಎಣ್ಣೆಮಜಲು ತಿಳಿಸಿದ್ದಾರೆ.
