ಮಸ್ಕ್ ಎಐ ಹೇಳಿಕೆ: ಮೋದಿಗೆ ಕೋಮುವಾದಿ ಟ್ಯಾಗ್!

ಹೊಸದಿಲ್ಲಿ: ಎಲಾನ್ ಮಸ್ಕ್ ಅವರ ಎಕ್ಸ್ ಅಭಿವೃದ್ಧಿಪಡಿಸಿದ ಎಐ ಚಾಟ್‌ಬಾಟ್ ‘ಗೋಕ್'(Grok) ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು? ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿ ವಿವಾದವನ್ನು ಸೃಷ್ಟಿಸಿದೆ.

ತರುಣ್ ಗೌತಮ್ ಎಂಬ ಎಕ್ಸ್ ಬಳಕೆದಾರರು @TARUNspeakss ಎಂಬ ಖಾತೆಯಲ್ಲಿ ಎಲಾನ್ ಮಸ್ಕ್ ಅವರ @grok ಬಳಿ ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು? ಎಂದು ಕೇಳಿದೆ. ಈ ವೇಳೆ @grok, ‘ನರೇಂದ್ರ ಮೋದಿ ಅವರನ್ನು ಹಿಂದೂ ರಾಷ್ಟ್ರೀಯತಾವಾದಿ ನೀತಿಗಳು ಮತ್ತು 2002ರ ಗುಜರಾತ್ ಗಲಭೆ ಬಳಿಕ ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಎಂದು ನೋಡಲಾಗುತ್ತದೆ. ಮುಸ್ಲಿಮರನ್ನು ‘ನುಸುಳುಕೋರರು’ ಎಂದು ಕರೆದ ಅವರ 2024ರ ಹೇಳಿಕೆಯು ಜಾಗತಿಕವಾಗಿ ಹಿನ್ನಡೆಯನ್ನುಂಟುಮಾಡಿತ್ತು. ಯೋಗಿ ಆದಿತ್ಯನಾಥ್ ಮತ್ತು ಪ್ರಜ್ಞಾ ಠಾಕೂರ್ ಕೂಡ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಮರ್ಶಕರು ಅವರು ಉದ್ವಿಗ್ನತೆಯನ್ನು ಉತ್ತೇಜಿಸುತ್ತಾರೆ ಎಂದು ಹೇಳುತ್ತಾರೆ, ಬೆಂಬಲಿಗರು ಇದು ರಾಷ್ಟ್ರೀಯ ಪ್ರಗತಿ’ ಎಂದು ವಾದಿಸುತ್ತಾರೆ ಎಂದು ಹೇಳಿದೆ.
ಎಲಾನ್ ಮಸ್ಕ್ ಅವರ ನೇತೃತ್ವದ AI ಚಾಟ್‌ಬಾಟ್ ‘ಪ್ರೋಕ್ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗೆ ಕಾರಣವಾಗಿದೆ. ಕೆಲವರು AI ಅನ್ನು ಪಕ್ಷಪಾತೀಯವಾಗಿದೆ ಎಂದು ಟೀಕಿಸಿದರೆ, ಕೆಲವರು ಅದರ ಪ್ರತಿಕ್ರಿಯೆಯನ್ನು ಬೆಂಬಲಿಸಿದ್ದಾರೆ.
