ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲೇ ಕೊ*ಲೆ- ಶವ ತುಂಡು ತುಂಡಾಗಿ ಎಸೆದ ದುಷ್ಕರ್ಮಿಗಳು

ತುಮಕೂರು: ಮಹಿಳೆಯ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದಿರುವ ಘಟನೆ ಕೊರಟಗೆರೆಯಲ್ಲಿ ನಡೆದಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲೇ ಈ ರೀತಿಯ ಭೀಕರ ಕೊಲೆ ನಡೆದಿರುವುದು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಮಹಿಳೆಯ ಕೊಲೆ ಮಾಡಿದ ನಂತರ ಮೃತ ದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈಕಾಲು ಒಂದು ಕಡೆ, ಹೃದಯದ ಭಾಗ ಮತ್ತೊಂದು ಕಡೆ, ಹೊಟ್ಟೆ ಮತ್ತು ಕರುಳಿನ ಭಾಗ ಇನ್ನೊಂದು ಕಡೆ, ತಲೆಬುರುಡೆ ಮತ್ತು ಮುಖವೇ ಕಾಣದಂತೆ ಕತ್ತರಿಸಿ ಕಪ್ಪು ಬಣ್ಣದ ಕವರ್‌ನಲ್ಲಿ ಹಾಕಿ ರಸ್ತೆಯುದ್ದಕ್ಕೂ ಎಸೆಯಲಾಗಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಳಮ್ಮ ದೇವಾಲಯದ ಬಳಿ ಈ ಭೀಕರ ಘಟನೆ ಘಟನೆ ನಡೆದಿದೆ. ಲಿಂಗಾಪುರದ ಸೇತುವೆ ಬಳಿ ಮಹಿಳೆಯ ಹೊಟ್ಟೆಯ ಭಾಗ, ಚಿಂಪುಗಾನಹಳ್ಳಿ ಸೇತುವೆ ಬಳಿ ಕರುಳು ಮತ್ತು ಕೈ ಹಾಗೂ ಮುತ್ಯಾಲಮ್ಮ ದೇವಾಲಯದ ಮುಂದೆ ಮತ್ತೊಂದು ಕೈ ಇದರ ಜೊತೆಯಲ್ಲಿ ಗರುಡಚಲ ನದಿದ ದಡದಲ್ಲಿ ಮೂಟೆಯೊಂದು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ತಿಪಟೂರು ಡಿವೈಎಸ್ಪಿ ಕುಮಾರಶರ್ಮ, ಕೊರಟಗೆರೆ ಸಿಪಿಐ ಅನಿಲ್ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ .
ಬೇರೆ ಕಡೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿ ಕವರ್‌ನಲ್ಲಿ ಹಾಕಿ ಎಸೆದಿರುವ ಸಾಧ್ಯತೆ ಇದೆ. ಆರಂಭದಲ್ಲಿ ದೇಹದ ಭಾಗಗಳು ಮಹಿಳೆಯದ್ದಾ, ಪುರುಷನದ್ದಾ ಎಂದು ಹುಡುಕಾಟ ನಡೆಸಲಾಗಿತ್ತು, ಕೈ, ಹೊಟ್ಟೆ ಭಾಗ, ಕರುಳಿನ ಭಾಗಗಳು ಸಿಕ್ಕಿವೆ. ಶವದ ವಾಸನೆ ಬಂದ ಹಿನ್ನೆಲೆ ಸ್ಥಳೀಯರು ದೂರು ನೀಡಿದ್ದರು.
