ಅಕ್ರಮ ಸಂಬಂಧ ನಂತರ ರಾಜಿ ಸಂಧಾನದ ವೇಳೆ ಪತಿಯ ಹತ್ಯೆ – ಪತ್ನಿ, ಪ್ರೇಮಿಯ ಬಂಧನ

ಬೆಳಗಾವಿ : ಬೆಳಗಾವಿಯಲ್ಲಿ ಅಕ್ರಮ ಸಂಬಂಧಕ್ಕೆ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದವನು ಇದೀಗ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದಾನೆ. ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ಟೆಕ್ಕಿಯ ಬರ್ಬರ ಹತ್ಯೆ ನಡೆದಿದೆ.

ಧಾರವಾಡ ತಾಲೂಕಿನ ತೇಗೂರ ಗ್ರಾಮದ ಸುರೇಶ ಬಂಡಿವಡ್ಡರ (32) ಹತ್ಯೆಯಾಗಿದ್ದಾನೆ.
ಖಾನಾಪುರ ಪಟ್ಟಣದ ಗಾಂಧಿನಗರ ನಿವಾಸಿಗಳಾದ ಯಲ್ಲಪ್ಪ ಬಂಡಿವಡ್ಡರ (60), ಈತನ ಪತ್ನಿ ಸಾವಿತ್ರಿ (55) ಪುತ್ರ ಯಶವಂತ (25) ಹತ್ಯೆ ಆರೋಪಿಗಳಾಗಿದ್ದಾರೆ. ಸುರೇಶ್ ಮತ್ತು ರೇಖಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಎರಡು ಮಕ್ಕಳ ತಾಯಿ ಆಗಿದ್ದರೂ ರೇಖಾ ಯಶವಂತ ಎಂಬಾತನ ಜೊತೆಗೆ ಸಂಬಂಧ ಹೊಂದಿದ್ದಳು. ಅಲ್ಲದೇ ರೇಖಾ ಮತ್ತು ಯಶವಂತ ಇಬ್ಬರು ಸುರೇಶ್ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದರು.
ಈ ಮಧ್ಯೆಯೇ ರೇಖಾ ಎರಡು ದಿನಗಳ ಹಿಂದೆ ಪತಿಗೆ ಹೇಳದೇ ಕೊಪ್ಪಳದಲ್ಲಿರುವ ತವರು ಮನೆಗೆ ಹೋಗಿದ್ದಾಳೆ. ಆದರೆ ಸುರೇಶ್ ಯಶವಂತ ಜೊತೆಗೆ ಪತ್ನಿ ರೇಖಾ ಹೋಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದ. ಈ ಕಾರಣಕ್ಕೆ ಎರಡು ಕುಟುಂಬಗಳು ಕೂಡ ಮೊನ್ನೆ ರಾಜೀ ಪಂಚಾಯಿತಿಗೆ ಸೇರಿದ್ದಾರೆ. ರಾಜೀ ಪಂಚಾಯಿತಿ ವೇಳೆ ಉಭಯ ಕುಟುಂಬಸ್ಥರ ಮಧ್ಯೆ ತೀವ್ರಗೊಂಡ ವಾಗ್ವಾದ ನಡೆದಿದ್ದು, ವಿಕೋಪಕ್ಕೆ ತಿರುಗುತ್ತಿದ್ದಂತೆ ಉಭಯ ಕುಟುಂಬಸ್ಥರ ಮಧ್ಯೆ ಗಲಾಟೆ ನಡೆದಿದೆ.
ಈ ವೇಳೆ ಯಶವಂತ ತಂದೆ ಯಲ್ಲಪ್ಪ ಚಾಕುವಿನಿಂದ ಸುರೇಶನ ಹೊಟ್ಟೆಗೆ ರಭಸವಾಗಿ ಇರಿದಿದ್ದಾನೆ. ಚಾಕು ಇರಿತದ ರಭಸಕ್ಕೆ ಸುರೇಶನ ಕರುಳೇ ಹೊರ ಬಂದಿದೆ. ತಕ್ಷಣವೇ ಆತನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ಸುರೇಶ ಸಾವನ್ನಪ್ಪಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಠಾಣಾ ಪೊಲೀಸರು, ಯಲ್ಲಪ್ಪ ಬಂಡಿವಡ್ಡರ , ಈತನ ಪತ್ನಿ ಸಾವಿತ್ರಿ ಮತ್ತು ಪುತ್ರ ಯಶವಂತನನ್ನು ಬಂಧಿಸಿದ್ದಾರೆ.
