ಮುಂಬೈ ಇಂಡಿಯನ್ಸ್ ಕ್ರಿಕೆಟಿಗರಿಗೆ ನಿಯಮ ಉಲ್ಲಂಘನೆಗೆ ಸಿಕ್ಕಿತು ಈ ಶಿಕ್ಷೆ!

ಮುಂಬೈ :ಕ್ರಿಕೆಟಿಗರು ಶಿಸ್ತು ಪಾಲಿಸಲೇಬೇಕೆಂಬುದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಕಟ್ಟಪ್ಪಣೆ. ಇಲ್ಲದಿದ್ದರೆ ಇವರಿಗೆ ಶಿಕ್ಷೆ ಕಾದಿದೆ ಎಂದೇ ಅರ್ಥ.

ಅಂದರೆ ನಿಗದಿತ ಸಮಯದಲ್ಲಿ ಟೀಮ್ ಬಸ್‌ಗೆ ಬಾರದಿದ್ದರೆ, ಅಭ್ಯಾಸಕ್ಕೆ ಹಾಜರಾಗದಿದ್ದರೆ, ತಂಡದ ಮೀಟಿಂಗ್‌ಗೆ ತಡವಾಗಿ ಬಂದರೆ ಅಂತಹ ಕ್ರಿಕೆಟಿಗರು ಇಲ್ಲಿ “ಶಿಕ್ಷೆ’ಗೆ ಗುರಿಯಾಗಬೇಕಾಗುತ್ತದೆ.
ಈ ಶಿಕ್ಷೆ ಏನಪ್ಪಾ ಅಂದೀರಾ? “ಎಂಐ ಸೂಪರ್ ಹೀರೋ ಥೀಮ್ ಡ್ರೆಸ್’ ಹಾಕಿಸುವುದು, ಅಷ್ಟೇ!
ಎಲ್ಲ ಕ್ರಿಕೆಟಿಗರು ಮುಂಬೈ ಇಂಡಿ ಯನ್ಸ್ ಜೆರ್ಸಿಯಲ್ಲಿದ್ದರೆ, ಶಿಕ್ಷೆಗೆ ಗುರಿ ಯಾದವರು “ಪನಿಶ್‌ಮೆಂಟ್ ಸೂಟ್’ ನಲ್ಲಿದ್ದು, ನಗೆಪಾಟಲಿಗೀಡಾಗುತ್ತಾರೆ.
ಈ ಬಾರಿ ಮುಂಬೈಯ ಮೂವರು ಕ್ರಿಕೆಟಿಗರು ಥೀಮ್ ಡ್ರೆಸ್ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರೆಂದರೆ ತಿಲಕ್ ವರ್ಮ, ವಿಲ್ ಜಾಕ್ಸ್ ಮತ್ತು ರಾಜ್ ಅಂಗದ್ ಬಾವಾ. ಸೂಪರ್‌ಮ್ಯಾನ್ ಜಂಪ್ ಸೂಟ್ ಧರಿಸಿದ ಈ ಮೂವರು “ಸೂಪರ್ ಹೀರೋ’ಗಳ ವೀಡಿಯೋವನ್ನು ಮುಂಬೈ ಇಂಡಿ ಯನ್ಸ್ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಎಲ್ಲರೂ ಇದನ್ನು ಕ್ರೀಡಾ ಮನೋ ಭಾವದಿಂದ ಸ್ವೀಕರಿಸಿದ್ದು, ಅನೇಕ ಗ್ರೂಪ್ ಫೋಟೊಗಳಲ್ಲಿ ನಗುನಗುತ್ತ ಕಾಣಿಸಿಕೊಂಡಿದ್ದಾರೆ.
