ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಬಾಗ್ಪತ್: ಗಂಡನ ಜತೆ ಜಗಳವಾಡಿದ್ದ ಮಹಿಳೆ ಕೋಪದಲ್ಲಿ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಟಿಕ್ರಿ ಪಟ್ಟಣದಲ್ಲಿ ಕೌಟುಂಬಿಕ ಕಲಹದ ಬಳಿಕ ಮಹಿಳೆ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ತೇಜ್ ಕುಮಾರಿ ಅಲಿಯಾಸ್ ಮಾಯಾ ಎಂದು ಗುರುತಿಸಲ್ಪಟ್ಟ ಮಹಿಳೆ, ತನ್ನ ಪತಿ ತನ್ನೊಂದಿಗೆ ಮಾತನಾಡದಿರುವುದು ಮತ್ತು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದ ಕಾರಣ ಮನೆಯಲ್ಲಿ ಜಗಳವಾದ ನಂತರ ಈ ಹೆಜ್ಜೆ ಇಟ್ಟಿದ್ದಾರೆ.
ಮೃತರನ್ನು 4 ತಿಂಗಳು, 2 ವರ್ಷ ಮತ್ತು 7 ವರ್ಷ ವಯಸ್ಸಿನ ಹೆಣ್ಣುಮಕ್ಕಳು. ಘಟನೆ ನಡೆದಾಗ ಮಾಯಾ ಅವರ ಪತಿ ಮತ್ತು ದೆಹಲಿ ಮೂಲದ ಪ್ರವಾಸಿ-ಬಸ್ ನಿರ್ವಾಹಕ ವಿಕಾಸ್ ಕಶ್ಯಪ್ ಹೊರಗೆ ಮರದ ಕೆಳಗೆ ಮಲಗಿದ್ದರು ಎಂದು ವರದಿಯಾಗಿದೆ.
ಅಕ್ಕಪಕ್ಕದ ಮನೆಯವರು ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೂವರು ಮಕ್ಕಳ ಶವಗಳು ಹಾಸಿಗೆಯ ಮೇಲೆ ಮತ್ತು ಮಾಯಾ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮತ್ತೊಂದು ಘಟನೆ
ಗಂಡನ ಜತೆ ಜಗಳವಾಡಿ ಗಂಗಾ ನದಿಗೆ ಹಾರಿ, ಮೊಸಳೆ ಕಂಡು ಮರವೇರಿ ಕುಳಿತ ಮಹಿಳೆ
ಕೋಪ, ಬೇಸರ, ಹತಾಶೆ ಹೀಗೆ ಯಾವುದೋ ಸ್ಥಿತಿಯಲ್ಲಿ ಕೆಲವರು ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡುಬಿಡುತ್ತಾರೆ. ಆದರೆ ಆ ದೈವ ಇಚ್ಛೆಯನ್ನು ಬಲ್ಲವರಾರು. ಮಹಿಳೆಯೊಬ್ಬರು ಗಂಡನ ಜತೆ ಜಗಳವಾಡಿ ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಗಂಗಾ ನದಿಗೆ ಹಾರಿದ್ದಾರೆ. ಅಲ್ಲಿ ಮೊಸಳೆ ಕಂಡು ಮರವೇರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಬಾರಿ ಮೊಸಳೆ ಭಕ್ಷನಾಗದೆ ಒಂದು ಜೀವ ಉಳಿಸಿದ ರಕ್ಷಕನಾಯಿತು.
ಸುರೇಶ್ ಅವರ ಪತ್ನಿ ಮಾಲತಿ ಎಂಬುವವರು ಪತಿಯೊಂದಿಗೆ ಜಗಳವಾಡಿ ಕೋಪದಿಂದ ಗಂಗಾ ನದಿಗೆ ಹಾರಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದಾಗ ಮೊಸಳೆ ಎದುರಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿ ಇಡೀ ರಾತ್ರಿ ಅಲ್ಲಿಯೇ ಕಳೆದಿದ್ದಾರೆ. ಅಹಿರ್ವಾನ್ ನಿವಾಸಿ ಸುರೇಶ್ ತನ್ನ ಪತ್ನಿ ಮಾಲತಿ ಜೊತೆ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಆಗಾಗ ಜಗಳವಾಡುತ್ತಿದ್ದ. ಸೆಪ್ಟೆಂಬರ್ 6 ರ ಶನಿವಾರ ರಾತ್ರಿ ಕೂಡ ದಂಪತಿ ಮಧ್ಯೆ ದೊಡ್ಡ ಜಗಳವಾಗಿತ್ತು.
