Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಿರುವ ಮಹಾತಾಯಿʼ

Spread the love

ತಾಯಿ (mother) ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಸಮಾಜವನ್ನು ಎದುರು ಹಾಕಿಕೊಳ್ಳಲು ಸಿದ್ಧವಿರುತ್ತಾಳೆ. ಬದುಕಿನ ಬಂಡಿ ಸಾಗಿಸಲು ಎಂತಹ ಕೆಲಸ ಮಾಡಲು ಸಿದ್ಧವಿರುತ್ತಾಳೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಎದೆಗೆ ಅಪ್ಪಿಕೊಂಡು ಆಟೋ ಓಡಿಸಿ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಂದಮ್ಮನಿಗಾಗಿ ತಾಯಿಯ ಹೋರಾಟ

come-learndrivingskills ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಮಡಿಲಿನಲ್ಲಿ ಕೂರಿಸಿ, ಎದೆಗೆ ಅಪ್ಪಿಕೊಂಡು, ಆಟೋ ಓಡಿಸುತ್ತಿದ್ದಾಳೆ. ಬದುಕಿಗಾಗಿ ಆಟೋ ಓಡಿಸುವ ಕಾಯಕವನ್ನು ಅವಲಂಬಿಸಿಕೊಂಡಿರುವುದನ್ನು ಕಾಣಬಹುದು. ಟ್ರಾಫಿಕ್ ನಡುವೆ ಆಟೋ ನಿಂತಿದ್ದು, ಈ ಕಂದಮ್ಮನನ್ನು ಮುದ್ದಿಸುತ್ತಿದ್ದಾಳೆ.

ಈ ವಿಡಿಯೋ ಇದುವರೆಗೆ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಬಳಕೆದಾರರೊಬ್ಬರು ಸಾವಿರ ಸಾರಿ ಚಿಂತಿಸಿದರೂ, ನಿನ್ನ ಪ್ರೀತಿಯ ಸಾಟಿಗೊಂದು ಪದವಾದರೂ ಸಿಗಬಹುದೇ? ಎಂದು ಹೇಳಿದ್ದಾರೆ. ಸಂಸಾರ ಎಂಬ ಯುದ್ಧಕ್ಕೆ ಕೃಷ್ಣನಂತೆ ಏರಿದಳು ಸಾರಥಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ಅಂದ್ರೆ ಅದು ತಾಯಿಯ ಪ್ರೀತಿ ಮಾತ್ರ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *