Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಳೆಯ ದಾಖಲೆಗೆ ಮುಂಗಾರು ಚಾಲನೆ: ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ

Spread the love

ಮಂಗಳೂರು: ಮುಂಗಾರು ಮಳೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಉತ್ತಮ ಆರಂಭ ದೊರಕಿದ್ದು, ಕಳೆದ ಒಂದೇ ವಾರದಲ್ಲಿ 374.5 ಮಿ.ಮೀ. ಮಳೆಯಾಗಿದೆ. ಇದರೊಂದಿಗೆ ಶೇ.86.4 ಮಿ.ಮೀ ಮಳೆ ವಾಡಿಕೆಗಿಂತ ಅಧಿಕ ಸುರಿದಿದೆ.

ರಾಜ್ಯ ಕರಾವಳಿಗೆ ವಾಡಿಕೆಗಿಂತ 12 ದಿನಗಳ ಮುಂಚಿತವಾಗಿ ಮುಂಗಾರು ಪ್ರವೇಶಿಸಿದ್ದು, ಕರಾವಳಿಯಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಮೇ 25 ಮತ್ತು 26 ರಂದು ದಿನವಿಡೀ ವ್ಯಾಪಕ ಮಳೆಯಾಗಿದ್ದು, ಮೇ 27 ರಂದು ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಆದರೂ, ಒಂದು ವಾರದ ಅವಧಿಯಲ್ಲಿ ಕರಾವಳಿಯಲ್ಲಿ ನಿರಂತರ ಮಳೆಯಾಗಿದೆ.ತಾಲೂಕುವಾರು ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 543 ಮಿ.ಮೀ. (ವಾಡಿಕೆ:45.6 ಮಿ.ಮೀ,) ಅಂದರೆ ಹತ್ತಕ್ಕೂ ಹೆಚ್ಚು ಪಟ್ಟು ಮಳೆಯಾಗಿ ದಾಖಲೆ ನಿರ್ಮಿಸಿದೆ. ಉಳಿದೆಡೆಯೂ ಬಹುತೇಕ ಅದೇ ಪ್ರಮಾಣದಲ್ಲಿ ಮಳೆ ಸುರಿದಿದೆ.ಬಂಟ್ವಾಳದಲ್ಲಿ 554.3 ಮಿ.ಮೀ (ವಾಡಿಕೆ: 48.5 ಮಿ.ಮೀ), ಮಂಗಳೂರು – 449.5 ಮಿ.ಮೀ (53.9), ಪುತ್ತೂರು – 479.4 ಮಿ.ಮೀ (45.6), ಸುಳ್ಯ – 387.7 ಮಿ.ಮೀ (35.4), ಮೂಡುಬಿದಿರೆ – 588.2 ಮಿ.ಮೀ (51.8), ಕಡಬ – 495.4 (42.6), ಮುಲ್ಕಿ – 450.5 (65.6), ಉಳ್ಳಾಲ – 507.4 ಮಿಮೀ (53.9).ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 493.8 ಮಿ.ಮೀ (45.8), ಕುಂದಾಪುರ – 418.4 ಮಿ.ಮೀ (54.8), ಉಡುಪಿ – 473.5 ಮಿ.ಮೀ (61.5), ಬೈಂದೂರು – 512.7 ಮಿ.ಮೀ (62.3), ಬ್ರಹ್ಮಾವರ – 517.8 ಮಿ.ಮೀ (56.2), ಕಾಪು – 439.6 (77.3), ಹೆಬ್ರಿ- 462.6 (47.6).


Spread the love
Share:

administrator

Leave a Reply

Your email address will not be published. Required fields are marked *