ಶಿಕ್ಷಕರಿಗೆ ಮೊಬೈಲ್ ನಿಷೇಧ: ತರಗತಿಯಲ್ಲಿ ಮೊಬೈಲ್ ಬಳಸಿದರೆ ಮುಖ್ಯ ಶಿಕ್ಷಕರೇ ಹೊಣೆ!

ಬೆಂಗಳೂರು : ಶಾಲೆಗಳಲ್ಲಿ (school) ಮೊಬೈಲ್ (Mobile) ಬಳಸೋ ಶಿಕ್ಷಕರಿಗೆ (teachers) ಶಿಕ್ಷಣ ಇಲಾಖೆ ( education department )ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ತರಗತಿ ವೇಳೆ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹೇರಿದೆ.

ತರಗತಿ ವೇಳೆ ಶಿಕ್ಷಕರು ಮೊಬೈಲ್ ಬಳಕೆ ಮಾಡ್ತಿರೋದು ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಹೀಗಾಗಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಲಾಗಿದೆ.
ಶಾಲೆಗಳಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸುವ ಸಲುವಾಗಿ ಮೊಬೈಲ್ಗಳ ಬಳಕೆಯನ್ನು ಆದೇಶಗಳ ರೀತ್ಯಾ ಈಗಾಗಲೇ ನಿಷೇದಿಸಲಾಗಿರುತ್ತದೆ.ಶಾಲಾ ಮುಖ್ಯಶಿಕ್ಷಕರಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ಅವರು ತಮ್ಮ ಬೋಧನಾ ಕಾರ್ಯದ ಅವಧಿಯಲ್ಲಿ ಮೊಬೈಲ್ಗಳನ್ನು ಬಳಸುವುದನ್ನು ನಿಷೇಧಿಸಿದೆ ಹಾಗೂ ಯಾವುದೇ ಶಾಲೆಗಳಲ್ಲಿ ಶಾಲಾ ವೇಳೆಯಲ್ಲಿ ಮೊಬೈಲ್ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಲ್ಲಿ ಅಥವಾ ಈ ಸಂಬಂಧ ದೂರುಗಳು ಬಂದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ಹೊಣೆಗಾರರಾಗುತ್ತಾರೆಂದು ಆದೇಶದಲ್ಲಿ ತಿಳಿಸಲಾಗಿದೆ.
ಶಾಲೆಗಳ ಶಿಸ್ತನ್ನು ಕಾಪಾಡಿ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ಕ್ರಮವಹಿಸುವ ಸಲುವಾಗಿ, ತಾಲ್ಲೂಕಿನ ಪ್ರತಿಯೊಂದು ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮೊಬೈಲ್ ಉಪಯೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕೆಳಗಿನ ಕ್ರಮವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಲು ತಿಳಿಸಲಾಗಿದೆ.
ಟೀಚರ್ ಗೆ ಬೆದರಿಕೆ..!
ಇನ್ನು, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 16 ವರ್ಷದ ಪ್ರಥಮ ಪಿಯು ವಿದ್ಯಾರ್ಥಿ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಘಟನೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ಪಾಠದ ವೇಳೆ ತರಗತಿಗೆ ಮೊಬೈಲ್ ತರದಂತೆ ಪ್ರಾಂಶುಪಾಲರು ಹೇಳಿದ್ದಾರೆ ಆದರೆ ನಿಯಮವನ್ನ ಉಲ್ಲಂಘಿಸಿ ವಿದ್ಯಾರ್ಥಿ ಬೋಧನಾ ಸಮಯದಲ್ಲಿ ಮೊಬೈಲನ್ನು ಬಳಸುತ್ತಿದ್ದದ್ದನ್ನು ನೋಡಿದ ಶಿಕ್ಷಕರು ಕೂಡಲೇ ಮೊಬೈಲ್ ವಶಪಡಿಸಿಕೊಂಡು ಪ್ರಾಂಶುಪಾಲರಿಗೆ ನೀಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಸೀದಾ ಪ್ರಾಂಶುಪಾಲರ ಕಚೇರಿಗೆ ಹೋಗಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾನೆ. ಕೊಡಲು ಒಪ್ಪದ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಶಿಕ್ಷಕರು ಪಿಟಿಎ ತ್ರಿತಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!
ಇನ್ನು, ಕರ್ನಾಟಕದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ. ಇನ್ಮುಂದೆ ಹಾಲು ಪುಡಿ ಕೊಡುವುದನ್ನು ಸರ್ಕಾರ ನಿಲ್ಲಿಸಲು ಚಿಂತನೆ ನಡೆಸಿದ್ದು, ಇದರ ಬದಲಿಗೆ ಸುವಾಸನೆ ಭರಿತ ಹಾಲು ನೀಡಲು ಬೆಂಗಳೂರು ಹಾಲು ಒಕ್ಕೂಟ ಪ್ಲಾನ್ ಮಾಡಿದೆ.
ಇಷ್ಟು ವರ್ಷಗಳ ಕಾಲ ಸರ್ಕಾರಿ ಶಾಲೆಗಳಿಗೆ ಹಾಲಿನ ಪುಡಿಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು. ಅವುಗಳನ್ನು ಆಯಾ ಶಾಲೆಯಲ್ಲಿ ಹಾಲಾಗಿ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ ಕೆಲ ಕಡೆ ಇವುಗಳಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು.
ಇದೀಗ ಸರ್ಕಾರಿ ಶಾಲೆಗಳಿಗೆ ಪುಡಿ ಹಾಲಿನ ಬದಲಿಗೆ ಹಾಲನ್ನೇ ನೀಡಲು ಪ್ಲಾನ್ ಮಾಡಿದ್ದು, ಅದರಂತೆ ಮೊದಲು ಪ್ರಾಯೋಗಿಕವಾಗಿ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯ ಬೆಂಗಳೂರು ದಕ್ಷಿಣ (ರಾಮನಗರ), ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಿತರಿಸಲು ನಿರ್ಧರಿಸಿದೆ.
ಆರಂಭದಲ್ಲಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು.. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ರಾಜ್ಯವ್ಯಾಪಿ ಈ ಯೋಜನೆಯನ್ನು ವಿಸ್ತರಿಸುವ ಚಿಂತನೆಯನ್ನು ಸರ್ಕಾರ ಮಾಡಿದೆ.
ಅನೇಕ ಕಡೆ ಹಾಲಿನ ಪುಡಿಗಳು ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂಬ ಗಂಭೀರ ಆರೋಪವಿದೆ. ಅಷ್ಟೇ ಅಲ್ಲದೆ ಕೆಲವೆಡೆ ಹಾಲಿನ ಪುಡಿಗಳನ್ನು ಕದ್ದು ಹೋಟೆಲ್ ಗಳಿಗೆ, ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಲೆ ಇದೆ.
