ನಾಪತ್ತೆಯಾಗಿದ್ದ ಮಹಿಳೆ ಗೂಗಲ್ ದಿಂದ ಪತ್ತೆ! ಕುಟುಂಬಕ್ಕೆ ಮರು ಸೇರ್ಪಡೆಗೆ ಆಶ್ರಮದ ಯಶಸ್ವಿ ಪ್ರಯತ್ನ

ಮಹಾರಾಷ್ಟ್ರ: ಈಗಂತೂ ಎಲ್ಲಾ ಮಾಹಿತಿಯೂ ಕ್ಷಣಮಾತ್ರದಲ್ಲೇ ಬೆರಳ ತುದಿಯಲ್ಲಿ ಲಭ್ಯವಿದೆ. ಇದಕ್ಕೆ ಕಾರಣ ಗೂಗಲ್. ಹೌದು ಇಂತಹ ವಿಷಯದ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಇಲ್ಲ ಎನ್ನುವಂತಿಲ್ಲ. ಇದೀಗ ಇದೇ ಗೂಗಲ್ ಸಹಾಯದಿಂದ ಸುಮಾರು ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆ ಮತ್ತೆ ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ.

ಫೂಲ್ಲೇವಿ ಸಂತ ಲಾಲ್ ಎಂಬ 50 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಹಾಪುರದ ತನ್ನ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದರು. ಆ ಬಳಿಕ ಈಕೆಯ ಹುಡುಕಾಟಕ್ಕೆ ಸಂಬಂಧಿಕರು ಸಾಕಷ್ಟು ಪ್ರಯತ್ನ ಪಟ್ಟಿದ್ದರು.
ಈ ಮಧ್ಯೆ ನಿರ್ಗತಿಕ ಸ್ಥಿತಿಯಲ್ಲಿದ್ದ ಈ ಮಹಿಳೆಯನ್ನು ಪಾಲ್ವರ್ ಜಿಲ್ಲೆಯ ನಲ್ಲಸೋಪಾರದಲ್ಲಿ ಗಮನಿಸಿದ ಪೊಲೀಸರು ಆಶ್ರಮ ಒಂದಕ್ಕೆ ಸೇರಿಸಲಾಗಿತ್ತು. ಈಕೆಯನ್ನು ಮತ್ತೆ ಸಂಬಂಧಿಕರೊಂದಿಗೆ ಸೇರುವಂತೆ ಮಾಡಲು ಆಕೆಯ ಹಿನ್ನಲೆ ಹುಡುಕುವುದು ಕಷ್ಟಕರವಾಗಿತ್ತು.
ಹೀಗಾಗಿ ಗೂಗಲ್ ಮೊರೆ ಹೋದ ಆಶ್ರಮದ ಸ್ವಯಂಸೇವಕ ಸಿಬ್ಬಂದಿ ಗೂಗಲ್ ಸರ್ಚ್ ಮೂಲಕ ಮಹಿಳೆಯ ಗ್ರಾಮ ಮತ್ತು ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪ್ಯತ್ನಿಸಿದ್ದಾರೆ. ಮೊದಲಿಗೆ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡುದ ಬಳಿಕವೂ ಯಾರೂ ಮಹಿಳೆಯನ್ನು ಕರೆದುಕೊಂಡು ಹೋಗಲು ಆಶ್ರಮಕ್ಕೆ ಬಂದಿರಲಿಲ್ಲ.
ಆದರೆ ಪದೇ ಪದೇ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ ನಂತರ, ಸುಮಾರು ಐದು ತಿಂಗಳ ತರುವಾಯ ಅಂದ್ರೆ ಮೇ 18 ರಂದು ಸಂಬಂಧಿಕರು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ.ಹೀಗಾಗಿ ಆಶ್ರಮದ ಸಿಬ್ಬಂದಿ ಗೂಗಲ್ ಗೆ ಥ್ಯಾಂಕ್ಸ್ ಹೇಳಿದ್ದಾರೆ.
