ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ: ಮೂರು ತಿಂಗಳ ಬಳಿಕ ಲಾರಿ ಚಾಲಕ ಬಂಧನ

ಬೆಳಗಾವಿ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳು ಬಳಿಕ ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಅಪಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸುವಲ್ಲಿ ಬೆಳಗಾವಿಯಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧ ಆಯಾಮಗಳಲ್ಲಿ ಶೋಧ ನಡೆಸಿ ಕೊನೆಗೆ ಆರೋಪಿಯನ್ನ ತಡಕಾಡಿದ ಪೊಲೀಸರಿಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರನಲ್ಲಿ ಬಂಧಿಸಿದ್ದಾರೆ. ಈ ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್ ಆಧರಿಸಿ ಬಂಧನ ಮಾಡಲಾಗಿದೆ. ಆದ್ರೆ, ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಅಪಘಾತ ಎಸಗಿದ ಆರೋಪದಲ್ಲಿ ಲಾರಿ ಚಾಲಕನ ಬಂಧನ ಆಗಿದೆ.
ಬಂಧಿತ ಆರೋಪಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂದು ಗೊತ್ತಾಗಿದೆ. ಇನ್ನು 3 ತಿಂಗಳ ಕಾಲ ಪೊಲೀಸರ ನಡೆಸಿದ ತನಿಖೆ ರೋಚಕ. ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್ ಆಧರಿಸಿ ಬಂಧನ ಮಾಡಲಾಗಿದೆ. ಅಪಘಾತ ಮಾಡಿದ್ದ ವಾಹನದ ಬಣ್ಣವನ್ನು ಎಫ್ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಆ ವರದಿಯಲ್ಲೂ ಅಪಘಾತ ನಡೆಸಿದ್ದು ಖಚಿತವಾಗಿದೆ. ಜನವರಿ 14ರಂದು ಬೆಳಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಟಚ್ ಮಾಡಿ ಲಾರಿ ಸಮೇತ ಚಾಲಕ ಪರಾರಿ ಆಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರಿನ ಅಂಬಡಗಟ್ಟಿ ಬಳಿ ಈ ಅಪಘಾತ ನಡೆದಿತ್ತು. ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯ ಸಹ ಆಗಿತ್ತು.
ಬಳಿಕ ಕಿತ್ತೂರು ಠಾಣೆಯಲ್ಲಿ ಸಚಿವೆಯ ಕಾರು ಚಾಲಕ ಶಿವಪ್ರಸಾದ್, ದೂರು ದಾಖಲಿಸಿದ್ದ. ಈ ದೂರಿನ ಅನ್ವಯ ಪ್ರಕರಣದ ವಿಚಾರಣೆ ನಡೆಸಿದ್ದ ಕಿತ್ತೂರು ಠಾಣೆ ಪೊಲೀಸರು, ಹಿರೇಬಾಗೇವಾಡಿ ಟೋಲ್ ಬಳಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಒಟ್ಟು 69 ಲಾರಿ ಚಾಲಕರನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಅಂತಿಮವಾಗಿ ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಲಾರಿ ಹಾಗೂ ಚಾಲಕನನ್ನು ಕಿತ್ತೂರು ಪೊಲೀಸರು ಮೂರು ತಿಂಗಳು ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಆರೋಪಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.