ʼಕಲೆಯ ಪ್ರಚಾರಕ್ಕೆ ಕಾಳುಧಾನ್ಯ ವ್ಯಾಪಾರʼ – ರಂಗಭೂಮಿಗೋಸ್ಕರ ಮಳೆಯಲ್ಲೇ ವ್ಯಾಪಾರ ತೆರೆದ ಯುವಕ ತಂಡ

ಮಂಗಳೂರು: ವ್ಯಾಪಾರದ ಪ್ರಚಾರಕ್ಕಾಗಿ ಹೊಸ ಹೊಸ ಯೋಜನೆ ಮಾಡೋದು ಸಾಮಾನ್ಯ , ಆದರೆ ಈ ಯುವಕರ ತಂಡ ನಾಟಕದ ಪ್ರಚಾರಕ್ಕಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ.

ಮಂಗಳೂರಿನ ಕಲಾಭಿ ಎನ್ನುವ ರಂಗ ಕಲಾವಿದರ ತಂಡ ಮಳೆಗಾಲದ ಬಿಡುವಿನ ವೇಳೆ ತಮ್ಮ ನಾಟಕಕ್ಕೆ ಜನರನ್ನು ಸೆಳೆಯುವುದಕ್ಕಾಗಿ ಅಂಕುರ ಎನ್ನುವ ಹೊಸ ವ್ಯಾಪಾರವನ್ನು ಆರಂಭಿಸಿ ತಮ್ಮ ನಾಟಕದ ಪ್ರಚಾರವನ್ನು ಮಾಡುತಿದ್ದರೆ.
ಕದ್ರಿಪಾರ್ಕ್ ಬಳಿ ಸ್ಟಾಲ್ ಇಟ್ಟಿರುವ ಕಲಾಭಿ ತಂಡ ಪೌಷ್ಟಿಕ ಕಾಳುಧಾನ್ಯ ದ ಜೊತೆ ABC ಜ್ಯೂಸು ಮಾರಾಟ ಮಾಡುತ್ತಿದ್ದು , ಆರೋಗ್ಯದ ಅರಿವು ಮೂಡಿಸುತ್ತಿದ್ದಾರೆ . ಈ ಯುವಕರ ನಾಟಕದ ಪ್ರಚಾರಕ್ಕೆ ವ್ಯಾಪಾರದ ಹೊಸ ಪ್ರಯತ್ನಕ್ಕೆ ಮಂಗಳೂರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
