ಹಾಲಿನ ದರ ಏರಿಕೆ: ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ ನಂದಿನಿ

ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆಯ ಬಳಿಕ ಇದೀಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ ತಲುಪಿದೆ. ಸರ್ಕಾರ ನಂದಿನ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಳ ಮಾಡಲು ಅನುಮೋದನೆ ನೀಡಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ದರ ಏರಿಕೆಯಿಂದ ದಿನನಿತ್ಯ ಹಾಲು ಬಳಕೆ ಮಾಡುವ ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಬಿಜಾರು ಮೂಡಲಿದೆ. ಹಾಲು ಉತ್ಪಾದಕರಿಗೆ ಲಾಭವಾಗುವ ನಿರ್ಧಾರವೆಂದು ಸರ್ಕಾರ ಹೇಳಿದರೂ, ದರ ಏರಿಕೆಯಿಂದ ಸಾಮಾನ್ಯ ಜನರ ತೋಳಿಗೆ ಇನ್ನಷ್ಟು ಭಾರ ಹೆಚ್ಚಾಗಿದೆ.
