Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪರ್ಶಿಯನ್ ಕೊಲ್ಲಿಯಲ್ಲಿ ಮರ್ಚೆಂಟ್ ನೇವಿ ಕ್ಯಾಪ್ಟನ್ ರಾಕೇಶ್ ರಂಜನ್ ಸಿಂಗ್ ಹೃದಯಾಘಾತದಿಂದ ಸಾ*ವು

Spread the love

ರಾಂಚಿ: ಹಾರ್ಮುಝ್ ಜಲಸಂಧಿಯನ್ನು ಇರಾನ್ ಮುಚ್ಚಿದ ಹಿನ್ನೆಲೆಯಲ್ಲಿ 20 ದಿನಗಳಿಂದಪರ್ಶಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಾಪಾರಿ ಹಡಗಿನ ಕ್ಯಾಪ್ಟನ್ ರಾಕೇಶ್ ರಂಜನ್ ಸಿಂಗ್ ಮಾ.18ರಂದು ತೀವ್ರ ಹೃದಯಾಘಾತಕ್ಕೆ ಈಡಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಪ್ರಕಟಿಸಿದ್ದಾರೆ.
ಪನಾಮಾ ಧ್ವಜದಡಿ ಸಂಚರಿಸುತ್ತಿದ್ದ ‘ಎಎಸ್‌ಪಿ ಅವಾನಾ’ವನ್ನು ಜಲಸಂಧಿ ದಾಟಿಸುವ ಹೊಣೆಹೊತ್ತಿದ್ದ 47 ವರ್ಷ ವಯಸ್ಸಿನ ಸಿಂಗ್, ತೀವ್ರ ಎದೆನೋವಿನಿಂದ ಎದೆ ಹಿಡಿದುಕೊಂಡು ಕ್ಯಾಪ್ಟನ್ ಡಕ್‌ನ ಕುರ್ಚಿಯಲ್ಲಿ ಕುಸಿದು ಬಿದ್ದರು. ಹಡಗಿನಲ್ಲಿದ್ದ ವೈದ್ಯರು ತಕ್ಷಣವೇ ತಪಾಸಣೆ ನಡೆಸಿ ತಕ್ಷಣ ಆಸ್ಪತ್ರೆಗೆ ಸಾಗಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಇಸ್ರೇಲ್-ಅಮೆರಿಕ-ಇರಾನ್ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ವೈದ್ಯಕೀಯ ನೆರವು ಸಾಧ್ಯವಾಗಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

ಉದ್ಯೋಗದಾತ ಸಂಸ್ಥೆ ಎಲೆಗೆಂಟ್ ಮರೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ತಕ್ಷಣವೇ ಕುಟುಂಬಕ್ಕೆ ಮಾಹಿತಿ ನೀಡಿದ್ದು, ವೈದ್ಯಕೀಯ ಆರೈಕೆಗಾಗಿ ಅವರನ್ನು ಹಡಗಿನಿಂದ ಕರೆ ತರುವ ಪ್ರಯತ್ನ ಮಾಡಿದ್ದಾಗಿ ಹೇಳಲಾಗಿದೆ. ಆದರೆ ಸಂಘರ್ಷದ ವಾತಾವರಣ ಇದ್ದ ಕಾರಣ ಹಲವು ಗಂಟೆಗಳ ಕಾಲ ವಿಳಂಬವಾಯಿತು. ಅಂತಿಮವಾಗಿ ಯುಎಇ ಪೋರ್ಟ್ ರಶೀದ್‌ನಲ್ಲಿ ಆಸ್ಪತ್ರೆಗೆ ಸೇರಿಸಲಾದರೂ ಆಗಮನದ ವೇಳೆಗೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು ಎಂದು ನೌಕಾ ಅಧಿಕಾರಿ ಕ್ಯಾಪ್ಟನ್ ಸಂಜೀವ್ ಕುಮಾರ್ ವಿವರಿಸಿದರು.
ಫೆ.28ರಂದು ಈ ಹಡಗು ಸೌದಿ ಅರೇಬಿಯಾದಿಂದ ಕಚ್ಚಾತೈಲ ತುಂಬಿಕೊಂಡು ಹೊರಟಿತ್ತು. ಆದರೆ ಪೋರ್ಟ್ ರಶೀದ್‌ನಲ್ಲಿ ಸಂಚಾರ ನಿರ್ಬಂಧವಿದ್ದ ಹಿನ್ನೆಲೆಯಲ್ಲಿ ಹಾರ್ಮುಝ್ ಜಲಸಂಧಿಯ ಪ್ರವೇಶದ್ವಾರದಿಂದ 100 ನಾಟಿಕಲ್ ಮೈಲು ದೂರದಲ್ಲಿ ಅತಂತ್ರವಾಗಿ ನಿಂತಿತು. ಕಂಪನಿಯ ಮುಂದಿನ ಸೂಚನೆಗಾಗಿ ಕಾಯಲಾಗುತ್ತಿತ್ತು.


Spread the love
Share:

administrator

Leave a Reply

Your email address will not be published. Required fields are marked *