ಎಂಬಿಎ ವಿದ್ಯಾರ್ಥಿನಿ ನೇಣು ಬಿಗಿದು ಸಾವು: ವರದಕ್ಷಿಣೆ ಕಿರುಕುಳ, ವೈರಲ್ ಆದ ಕೊನೆಯ ವಾಟ್ಸಾಪ್ ಚಾಟ್!

ಬೆಂಗಳೂರು: ಆಕೆ ಎಂಬಿಎ ಓದುತ್ತಾ ಇದ್ದಳು. ಆ ಸಮಯದಲ್ಲಿ Instagram ನಲ್ಲಿ ಪರಿಚಯವಾದ ಹುಡುಗನ ಜೊತೆಗೆ ಪ್ರೀತಿ ಪ್ರೇಮ ಅಂತ ಬಿದ್ದ ಆ ಸುಂದರ ಹುಡುಗಿ ಇಂದು ದುರಂತ ಅಂತ್ಯ ಕಂಡಿದ್ದಾಳೆ. 24 ವರ್ಷದ ಸ್ಪಂದನಾ ಮೃತ ದುರ್ದೈವಿ. ನೂರಾರು ಕನಸುಗಳನ್ನ ಕಂಡು, ಪ್ರೀತಿಸಿದಾತನ ಜೊತೆಗೆ ಲೈಫ್ ಸೂಪರ್ ಆಗಿನೆ ಇರುತ್ತೆ ಅಂದುಕೊಂಡಿದ್ದ ಸ್ಪಂದನಾ ಬದುಕು ಇದೀಗ ಅದೇ ಗಂಡನ ಮನೆಯವರಿಗೆ ದುರಂತ ಅಂತ್ಯ ಕಂಡಿದೆ.

ಸ್ಪಂದನಾ ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡ್ತಾ ಇದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಎಂಬಾತನ ಪರಿಚಯವು ಆಯ್ತು. ಅಲ್ಲಿಂದ ಲವ್ವಲ್ಲಿ ಬಿದ್ದ ಅಭಿಷೇಕ್ ಮತ್ತು ಸ್ಪಂದನಾ ಮನೆಯವರ ವಿರೋಧದ ನಡುವೆಯೂ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಗಂಡನ ಮನೆಯಲ್ಲಿ ಸ್ಪಂದನಾಗೆ ವರದಕ್ಷಿಣೆ ಕಿರುಕುಳ ಶುರುವಾಗಿತ್ತಂತೆ. ಇದರಿಂದ ನೊಂದಿದ್ದ ಸ್ಪಂದನಾ ಹೆಣವಾಗಿ ಪತ್ತೆಯಾಗಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದಕ್ಕೂ ಮುನ್ನ ತಂಗಿಯ ಜೊತೆಗೆ ಕೊನೆಯ ಮಾತುಗಳನ್ನ ಆಡಿದ್ದಾರೆ. ಆ ವಾಟ್ಸಾಪ್ ಚಾಟ್ ಈಗ ವೈರಲ್ ಆಗಿದೆ. ಆ ವಾಟ್ಸಾಪ್ ನಲ್ಲಿ ನನ್ನ ಸಾವಿಗೆ ಅಭಿ ಹಾಗೂ ಆಫೀಸಲ್ಲಿರುವ ಸಿಬ್ಬಂದಿಗಳೆಲ್ಲಾ ಕಾರಣ ಎಂದು ಟೆಕ್ಸ್ಟ್ ಮಾಡಿದ್ದಾರೆ. ಸದ್ಯ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ತನಿಖೆಯ ನಂತರ ಆಫೀಸ್ ಸಹ ಉದ್ಯೋಗಿಗಳು ಈ ಸಾವಿಗೆ ಹೇಗೆ ಕಾರಣ ಎಂಬ ಸತ್ಯವೂ ಹಿರ ಬರಲಿದೆ. ಸದ್ಯ ಅಭಿಷೇಕ್ ಹಾಗೂ ಅವರ ತಾಯಿ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
