Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭೂಮಿಗೆ ಅಪ್ಪಳಿಸಲಿದೆ ಭಾರೀ ಸೌರ ಚಂಡಮಾರುತ – ವಿಜ್ಞಾನಿಗಳ ಎಚ್ಚರಿಕೆ

Spread the love

ನವದೆಹಲಿ:ಸೂರ್ಯನಿಂದ ಹೊರಹೊಮ್ಮುವ ಶಾಖದ ಅಲೆಗಳು 2029ರಲ್ಲಿ ದೊಡ್ಡ ವಿಪತ್ತು ಸಂಭವಿಸಲು ಕಾರಣವಾಗುತ್ತೆ ಎಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಆದ್ರೆ ಅದರ ಟ್ರೈಲರ್ 2025ರಲ್ಲೇ ಜನರ ಕಣ್ಮುಂದೆ ಬರಲಿದೆ ಎಂದು ಹೇಳಲಾಗುತ್ತಿದೆ. ಭೂಮಿಗೆ (Earth) ಭಾರೀ ಸೌರ ಚಂಡಮಾರುತ (Solar Strom) ಅಪ್ಪಳಿಸಿದ್ರೆ, ಮೊಬೈಲ್ ಫೋನ್‌ ಗಳು, ಕಂಪ್ಯೂಟರ್‌ ಗಳು, ಇಂಟರ್ನೆಟ್ ಸೇವೆಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಲಿವೆ ಎಂದು ಹೇಳಲಾಗುತ್ತಿದೆ.

ಸೂರ್ಯನ ಮೇಲ್ಮೈ ಅತಿ ಹೆಚ್ಚು ಚಟುವಟಿಕೆಯ ಪ್ರದೇಶ ಕಾಣಿಸಿಕೊಂಡಿದೆ. ಇದು 2025ರಲ್ಲಿ ದಾಖಲಾದ ಅತಿ ದೊಡ್ಡ X2.7-ವರ್ಗದ ಸೌರ ಜ್ವಾಲೆಯನ್ನು ಹೊರಸೂಸಿದೆ. ಈ ತೀವ್ರ ಸೌರ ಚಟುವಟಿಕೆಯಿಂದಾಗಿ ರೇಡಿಯೋ ಸಂಪರ್ಕ ಕಡಿತ, ಜಿಪಿಎಸ್ ಅಡಚಣೆ ಮತ್ತು ಪ್ರಪಂಚದ ಕೆಲವು ಭಾಗಗಳಲ್ಲಿ ಅದ್ಭುತವಾದ ಅರೋರಾಗಳು ಕಾಣಿಸಿಕೊಳ್ಳಬಹುದು. ‌

ಸೌರ ಜ್ವಾಲೆ ಸಮಸ್ಯೆ ತಂದಿಡುತ್ತೆ ಎಚ್ಚರ!

ಸೌರ ಜ್ವಾಲೆಗಳು ಸೂರ್ಯನ ಮೇಲ್ಮೈಯಿಂದ ಬರುವ ತೀವ್ರವಾದ ವಿಕಿರಣದ ಸ್ಫೋಟಗಳು. ಇವು ಸಾಮಾನ್ಯವಾಗಿ ಸೂರ್ಯನ ಮೇಲಿನ ಕಲೆಗಳ ಚಟುವಟಿಕೆಗೆ ಸಂಬಂಧಿಸಿವೆ. ಇತ್ತೀಚಿನ X2.7-ವರ್ಗದ ಜ್ವಾಲೆಯು ಅತಿ ಹೆಚ್ಚು ತೀವ್ರತೆಯನ್ನು ಹೊಂದಿದೆ. ಇದು ಭೂಮಿಯ ವಾತಾವರಣದ ಮೇಲೆ ಪರಿಣಾಮ ಬೀರಬಲ್ಲದು ಎನ್ನಲಾಗುತ್ತಿದೆ.

ಇಂತಹ ಜ್ವಾಲೆಗಳು ಹೆಚ್ಚಿನ ಆವರ್ತನದ ರೇಡಿಯೋ ಸಂಪರ್ಕ, ವಿಮಾನಯಾನ ವ್ಯವಸ್ಥೆಗಳು ಮತ್ತು ನ್ಯಾವಿಗೇಷನ್ ನೆಟ್‌ವರ್ಕ್‌ಗಳಿಗೆ ಅಡ್ಡಿಪಡಿಸಬಹುದು. ವಿಶೇಷವಾಗಿ ಸೌರ ಜ್ವಾಲೆ ಅಪ್ಪಳಿಸುವ ಗ್ರಹದ ಬದಿಯಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ.

ಕೊನೆಯದಾಗಿ ಬೀಸಿದ್ದ ಸೌರ ಜ್ವಾಲೆಯು ಮಧ್ಯಪ್ರಾಚ್ಯದಲ್ಲಿ ಸುಮಾರು 10 ನಿಮಿಷಗಳ ಕಾಲ ರೇಡಿಯೋ ಸಂಪರ್ಕವನ್ನು ಕಡಿತಗೊಳಿಸಿತು. ನಾಸಾ ಕೂಡ ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳು ವಿದ್ಯುತ್ ಜಾಲಗಳು, ಉಪಗ್ರಹಗಳು ಮತ್ತು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಸೌರ ಜ್ವಾಲೆ ಉಂಟಾಗೋದು ಹೇಗೆ?

ಸೂರ್ಯನ ಮೇಲ್ಪದರದಲ್ಲಿ ಸ್ಫೋಟ ಉಂಟಾಗಿ ಅದು ಶಕ್ತಿಯನ್ನು ಹೊರಸೂಸುತ್ತದೆ. ಅದನ್ನು ಸನ್ ಫ್ಲೇರ್ ಎಂದು ಕರೆಯುತ್ತಾರೆ. ಈ ಸ್ಫೋಟವು ದೊಡ್ಡ ಪ್ರಮಾಣದ ಅಯಸ್ಕಾಂತೀಯ ಶಕ್ತಿಯನ್ನು ಕೂಡ ಹೊರಹಾಕುತ್ತದೆ. ಇದರಿಂದ ಸೂರ್ಯನ ಹೊರ ಪದರವು ತೆರೆದುಕೊಳ್ಳುತ್ತದೆ. ಇದರಿಂದ ಅತಿ ಸೂಕ್ಷ್ಮ ನ್ಯೂಕ್ಲಿಯರ್ ಕಣಗಳು ಬಿಡುಗಡೆ ಆಗುತ್ತದೆ. ಇದು ಭೂಮಂಡಲದಲ್ಲಿ ಹರಡಿಕೊಳ್ಳುತ್ತದೆ. ಅದನ್ನೇ ಸೋಲಾರ್ ಸ್ಟಾರ್ಮ್ ಎನ್ನುತ್ತಾರೆ.

ಸೋಲಾರ್ ಸ್ಟಾರ್ಮ್​ನಲ್ಲಿ ಹಲವು ವಿಧಗಳಿವೆ. ಅತ್ಯಂತ ಸಾಮಾನ್ಯವಾಗಿ ಕಂಡುಬರುವುದು ಸೋಲಾರ್ ಫ್ಲೇರ್. ಈ ಸೋಲಾರ್ ಫ್ಲೇರ್ ಬಳಿಕ ಕೊರೊನಲ್ ಮಾಸ್ ಇಜೆಕ್ಷನ್ ಆಗುತ್ತದೆ. ಈ ವೇಳೆ, ಸೂರ್ಯನ ಮೇಲಿನ ಪದರದಲ್ಲಿ ಐಯೋನೈಸ್ಡ್ ಕಣಗಳ ಸ್ಫೋಟವಾಗುತ್ತದೆ. ಈ ಹಿಂದೆ 1989 ರಲ್ಲಿ ದೊಡ್ಡ ಸೋಲಾರ್ ಸ್ಟಾರ್ಮ್ ಉಂಟಾಗಿತ್ತು. ಅದೇ ರೀತಿಯ ಸ್ಟಾರ್ಮ್ 2029ರಲ್ಲಿ ಆಗಲಿದೆ ಬಗ್ಗೆ ಅಂದಾಜಿಸಲಾಗಿದೆ.

ಇತಿಹಾಸದಲ್ಲಿ ದಾಖಲಾದ ಸೌರ ಜ್ವಾಲೆ ಯಾವುದು?
ಸುಮಾರು 14,300 ವರ್ಷಗಳ ಹಿಂದೆ ಭೂಮಿಗೆ ಭೀಕರ ಸೌರ ಚಂಡಮಾರುತ ಅಪ್ಪಳಿಸಿತ್ತು. ಅದೇ ಮಾನವ ಇತಿಹಾಸದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಶಕ್ತಿಶಾಲಿ ಸೌರ ಜ್ವಾಲೆ ಎಂದು ತಜ್ಞರು ಹೇಳುತ್ತಾರೆ.

ಫಿನ್‌ಲ್ಯಾಂಡ್‌ನ ಔಲು ವಿಶ್ವವಿದ್ಯಾಲಯದ ತಂಡವೊಂದು ನಡೆಸಿದ ಹೊಸ ಅಧ್ಯಯನವು, 2003ರ ಹ್ಯಾಲೋವೀನ್ ಸೌರ ಚಂಡಮಾರುತಕ್ಕಿಂತ 500 ಪಟ್ಟು ಹೆಚ್ಚು ಶಕ್ತಿಶಾಲಿ ಸೌರ ಚಂಡಮಾರುತವು ಸುಮಾರು 14,300 ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿತ್ತು ಎಂದು ಸ್ಪಷ್ಟಪಡಿಸಿತ್ತಂತೆ.


Spread the love
Share:

administrator

Leave a Reply

Your email address will not be published. Required fields are marked *