Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳ ಗ್ರಹದ ಬೃಹತ್ ಉಲ್ಕಾಶಿಲೆ ಮತ್ತು ಡೈನೋಸಾರ್ ಅಸ್ಥಿಪಂಜರ ಸೋಥೆಬಿ ಹರಾಜಿಗೆ!

Spread the love

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಸೋಥೆಬಿ ಹರಾಜು ಪ್ರಕ್ರಿಯೆದಲ್ಲಿ ಮಂಗಳ ಗ್ರಹದ ಉಲ್ಕಾಶಿಲೆಯನ್ನು ಹರಾಜಿಗೆ ಇಡಲಾಗಿದೆ. ಜು.16ರಂದು ಹರಾಜು ಪ್ರಕ್ರಿಯೆ ನಡೆಯಲಿದೆ

ಸುಮಾರು 25 ಕೆ.ಜಿ. ತೂಕದ ಈ ಶಿಲೆಯು ಭೂಮಿಯ ಮೇಲೆ ಪತ್ತೆಯಾಗಿರುವ ಅತಿದೊಡ್ಡ ಮಂಗಳನ ಶಿಲೆ ಎಂದು ತಜ್ಞರು ಹೇಳಿದ್ದಾರೆ.

ಈ ಶಿಲೆಯು 34.38 ಕೋಟಿ ರೂ.ಗಳಿಗೆ ಹರಾಜಾಗುವ ನಿರೀಕ್ಷೆಯಿದೆ.

ಇದಲ್ಲದೇ ಜ್ಯುರಾಸಿಕ್‌ ಕಾಲಘಟ್ಟದ ಸೆರಾಟೊಸಾರಸ್‌ ಎಂಬ ಡೈನೋಸಾರ್‌ನ ಮರಿಯ ಅಸ್ಥಿಪಂಜರವನ್ನೂ ಹರಾಜು ಹಾಕಲಾಗುತ್ತಿದೆ. ಇದು 6 ಅಡಿ ಎತ್ತರ ಹಾಗೂ 11 ಅಡಿ ಉದ್ದವಿದೆ. ಇದರ ಬೆಲೆಯೂ ಸುಮಾರು 34 ಕೋಟಿ ರೂ. ನಿಂದ 51 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಶಿಲೆಯ ವೈಶಿಷ್ಟ್ಯತೆ
-ಈ ಹಿಂದೆ ಪತ್ತೆಯಾದ ಎಲ್ಲ ಮಂಗಳನ ಶಿಲೆಗಳಿಗಿಂತ ಶೇ.70ರಷ್ಟು ದೊಡ್ಡಾದಾದ ಶಿಲೆ
-ಎನ್‌ಡಬ್ಲ್ಯೂಎ 16788 ಹೆಸರಿನ ಶಿಲೆ, 2023ರಲ್ಲಿ ನೈಜರ್‌ನ ಸಹರಾ ಮರುಭೂಮಿಯಲ್ಲಿ ಪತ್ತೆ
– ಮಂಗಳ ಗ್ರಹಕ್ಕೆ ಕ್ಷುದ್ರಗ್ರಹ ಡಿಕ್ಕಿಯಾಗಿ ಭೂಮಿಗೆ ಉಲ್ಕಾ ಶಿಲೆ ಬಿದ್ದಿದೆ ಎಂದು ತಜ್ಞರ ಅಭಿಪ್ರಾಯ
-ಈ ಹಿಂದೆ ರೋಮ್‌ನಲ್ಲಿನ ಇಟಾಲಿಯನ್‌ ಸ್ಪೇಸ್‌ ಏಜೆನ್ಸಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಶಿಲೆ


Spread the love
Share:

administrator

Leave a Reply

Your email address will not be published. Required fields are marked *