ಅಮೆಜಾನ್‌ನಲ್ಲಿ ಬೃಹತ್ ಲೇಆಫ್ ಯೋಜನೆ: 14,000 ಪ್ರಬಂಧಕ ಹುದ್ದೆಗಳಿಗೆ ಕತ್ತರಿ!

ಬೆಂಗಳೂರು : ತಂತ್ರಜ್ಞಾನ ಹೆಚ್ಚಾದಂತೆಲ್ಲ ಮಾನವನ ಜೀವನ ಅಳಿವಿನಂಚಿಗೆ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳೂ ಸಿಗುತ್ತಿವೆ. ಅಂದಹಾಗೆ ಇತ್ತೀಚಿಗೆ ಲೇಆಫ್..ಅಂದರೆ ಕೆಲಸದಿಂದ ವಜಾಗೊಳಿಸುವಿಕೆ ಎಂಬ ಸುದ್ದಿ ಭಾರಿ ಟ್ರೆಂಡ್‌ನಲ್ಲಿದೆ.
ಆಗಲೇ ಹೇಳಿದಂತೆ, ತಂತ್ರಜ್ಞಾನದ ಪ್ರಭಾವವೇ ಇದಕ್ಕೆ ಕಾರಣ ಎಂದರೂ ತಪ್ಪಾಗಲ್ಲ. ಏಕೆಂದರೆ ಇದು AI ಮತ್ತು ಸ್ವಯಂಚಾಲಿತ ಯುಗ. ಈ ತಂತ್ರಜ್ಞಾನದ ಪ್ರಭಾವ ಹೆಚ್ಚಾನ ಮಾನವರು ಮಾಡುವ ಕೆಲಸಕ್ಕಿಂತ ಹೆಚ್ಚು ಉತ್ತಮವಾದ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿದೆ. ಆದರೆ ಒಂದು ಕಹಿಸತ್ಯ ಏನಂದ್ರೆ, ಈ ತಂತ್ರಜ್ಞಾನಗಳು ಸಾವಿರಾರು ಜನರ ಕೆಲಸ ಕಿತ್ತುಕೊಳ್ಳುತ್ತಿವೆ ಎಂದರೆ ತಪ್ಪಾಗಲ್ಲ.
ಹೌದು, ಇತ್ತೀಚೆಗೆ ಲೇಆಫ್ ಸುದ್ದಿಗಳು ಸಾಕಷ್ಟು ಕೇಳಿ ಬರುತ್ತಿವೆ. ಇದೀಗ ಇನ್ನೊಂದು ಶಾಕಿಂಗ್ ವಿಚಾರ ಏನೆಂದರೆ, ಈ ವರ್ಷದಲ್ಲಿ..ಅಂದರೆ, 2025ರಲ್ಲಿ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾಗಿರುವ ಅಮೆಜಾನ್ ಬೃಹತ್ ಮಟ್ಟದ ಉದ್ಯೋಗ ಕಡಿತದ ಮಾರ್ಗದಲ್ಲಿ ಸಾಗುತ್ತಿದೆ ಎನ್ನಲಾಗಿದೆ. ಅಂದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಅಮೆಜಾನ್ ಸಂಸ್ಥೆ 2025ರ ಮೊದಲಾರ್ಧದೊಳಗೆ ಸುಮಾರು 14,000 ಪ್ರಬಂಧಕ ಹುದ್ದೆಗಳನ್ನು ರದ್ದುಪಡಿಸಲು ಯೋಜನೆ ರೂಪಿಸಿದೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಇನ್ನು ಈ ಒಂದು ಕ್ರಮದೊಂದಿಗೆ ಕಂಪನಿಯ ಗ್ಲೋಬಲ್ ವ್ಯವಸ್ಥಾಪನಾ ಸಿಬ್ಬಂದಿ ಸಂಖ್ಯೆಯು, 1,05,770 ರಿಂದ 91,936 ಕ್ಕೆ ಇಳಿಯಲಿದೆ. ಇದು ಸುಮಾರು 13% ಕಡಿತವಾಗಲಿದೆ ಎನ್ನಬಹುದು.
ವಜಾಗೊಳಿಸುವಿಕೆ ಹಿಂದಿನ ಉದ್ದೇಶ..?
ಇನ್ನು ಈ ಉದ್ಯೋಗ ಕಡಿತದ ಹಿಂದೆ ದೊಡ್ಡ ಉದ್ದೇಶವಿದೆ. ಅದೇನೆಂದರೆ ಅಮೆಜಾನ್ ಸಂಸ್ಥೆಯ ವೆಚ್ಚ ಕಡಿತ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದ ಭಾಗವಾಗಿದೆ. ಕಂಪನಿಯ ಉದ್ದೇಶ, ಈ ತಿದ್ದುಪಡಿಯಿಂದ ವಾರ್ಷಿಕವಾಗಿ ₹210 ಕೋಟಿಯಿಂದ ₹360 ಕೋಟಿವರೆಗೆ ಉಳಿಸಿ ಮಾಡುವುದು. ಕಂಪನಿಯ ಪ್ರಕಾರ, ಇದು ದೀರ್ಘಕಾಲದ ವ್ಯವಹಾರ ದೃಷ್ಠಿಯಲ್ಲಿ ಅಗತ್ಯವಿರುವ ತೀರ್ಮಾನವಾಗಿದೆ.
ಇನ್ನು ಈ ವಜಾಗೊಳಿಸುವಿಕೆಯು ಅಮೆಜಾನ್ ವೆಬ್ ಸೀರಿಸ್, ರೀಟೆಲ್ ಆಪರೇಷನ್ಸ್, ಮಾನವ ಸಂಪನ್ಮೂಲ ವಿಭಾಗಗಳನ್ನು ಪ್ರಮುಖವಾಗಿ ಹತ್ತಿರವಾಗಿ ಸ್ಪರ್ಶಿಸಲಿರುವುದು ಸ್ಪಷ್ಟವಾಗಿದೆ. ಕಂಪನಿ ಈ ಮೂಲಕ ಸಂಘಟನೆಯ ಪುನರ್‌ರಚನೆಗೆ ಮುಂದಾಗಿದೆ.
ಅಮೆಜಾನ್ ತನ್ನ ಆಂತರಿಕ ವ್ಯವಸ್ಥೆಯಲ್ಲಿ ಮುಜುಗರ ತರುವ ಅನಗತ್ಯ ಆಡಳಿತಾತ್ಮಕ ಪದ್ಧತಿಗಳನ್ನು ಗುರುತಿಸಲು ಅಧಿಕಾರ ಮೇರೆಯ ಮೆಲುಕು ಸಹಾಯವಾಣಿ ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನೌಕರರು ತಮ್ಮದೇ ಆದ ಅನುಭವಗಳ ಆಧಾರದಲ್ಲಿ ಸಂಸ್ಥೆಯೊಳಗಿನ ವಿಫಲ ಪದ್ಧತಿಗಳನ್ನು ವರದಿ ಮಾಡಬಹುದು. ಇದೇ ಸಮಯದಲ್ಲಿ, ಪ್ರಬಂಧಕರು ನೌಕರರ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚನೆ ಪಡೆದಿದ್ದಾರೆ. ಹಿರಿಯ ಹುದ್ದೆಗಳ ನೇಮಕಾತಿ ಸ್ಥಗಿತಗೊಳಿಸಿ, ವೇತನ ಮಾದರಿಗಳನ್ನು ಮರುಪರಿಶೀಲನೆ ಮಾಡಲಾಗುತ್ತಿದೆ. ಇವೆಲ್ಲವೂ ಕಾರ್ಯಕ್ಷಮತೆ ಹೆಚ್ಚಿಸಿ, ಲಾಭದಾಯಕತೆ ಬೆಳೆಸುವ ಉದ್ದೇಶವನ್ನು ಹೊಂದಿವೆ.
ಸಂಸ್ಥೆ ಮುಖ್ಯಸ್ಥರಿಂದ ಹೊಸ ಕಾರ್ಯವಿಧಾನ:
ಅಮೆಜಾನ್ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕರಾದ ಆಂಡಿ ಜಾಸ್ಸಿ ಈ ಎಲ್ಲ ತೀರ್ಮಾನಗಳ ಹಿಂದೆ ನಿಂತಿದ್ದಾರೆ. ಅವರ ನೂತನ ಯೋಜನೆಯು ನಿರ್ಧಾರ ಕೈಗೊಳ್ಳುವಿಕೆಯಲ್ಲಿ ತ್ವರಿತತೆಯನ್ನು ತಂದುಕೊಡಲು ಮತ್ತು ಸಿಬ್ಬಂದಿಯ ವ್ಯರ್ಥ ಬಳಕೆಯನ್ನು ತಗ್ಗಿಸಲು ಸಹಾಯ ಮಾಡಲಿದೆ. ಅವರು ಮುಂದಿನ ವರ್ಷಗಳಲ್ಲಿ ಪ್ರತಿ ಪ್ರಬಂಧಕರಿಗೆ ವರದಿ ಮಾಡುವ ನೌಕರರ ಪ್ರಮಾಣವನ್ನು ಕನಿಷ್ಠ 15 ಶೇಕಡಾ ಹೆಚ್ಚಿಸಲು ಉದ್ದೇಶಿಸಿದ್ದಾರೆ.
ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ:
2024ರ ಕಂಪನಿ ವರದಿಯ ಪ್ರಕಾರ, ಅಮೆಜಾನ್ ಸಂಸ್ಥೆಯಲ್ಲಿ 15.5 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಳೆಯ ದಾಖಲೆಗಳ ಪ್ರಕಾರ ಇದು 15.3 ಲಕ್ಷರಿಂದ ಹೆಚ್ಚಾಗಿದೆ. ಆದರೆ, ಪ್ರಬಂಧಕ ಹುದ್ದೆಗಳಲ್ಲಿ ನಡೆಯುತ್ತಿರುವ ಕಡಿತವು ಸಂಸ್ಥೆಯ ಆಂತರಿಕ ವ್ಯವಸ್ಥೆಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೆಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಅಮೆಜಾನ್ ಸಂಸ್ಥೆ ತಾನು ಬೆಳೆಯುತ್ತಿರುವ ಹೊಸ ತಂತ್ರಜ್ಞಾನ, ಬದಲಾದ ವ್ಯಾಪಾರ ವಾತಾವರಣ ಮತ್ತು ಆಂತರಿಕ ವ್ಯವಸ್ಥೆಯ ಸುಧಾರಣೆಯ ನಡುವೆ ತೊಂದರೆ ಉಂಟುಮಾಡುವ ಎಲ್ಲಾ ಅಂಶಗಳನ್ನು ಕಡಿತಗೊಳಿಸುತ್ತಿದೆ. ಇದರಿಂದ ನೌಕರರ ಮೇಲೆ ತಕ್ಷಣದ ಪ್ರಭಾವ ಬೀರಬಹುದಾದರೂ, ದೀರ್ಘಾವಧಿಯಲ್ಲಿ ಕಂಪನಿಗೆ ಇದರಿಂದ ಲಾಭವನ್ನೇ ತರುವ ಸಾಧ್ಯತೆ ಇದೆ.
ಇದು ಅಮೆಜಾನ್ ಸಂಸ್ಥೆಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದ ವ್ಯವಸ್ಥಾತ್ಮಕ ಬದಲಾವಣೆಗಳಲ್ಲೊಂದು. ಮುಂದಿನ ದಿನಗಳಲ್ಲಿ ಇದರ ಪರಿಣಾಮವು ನೌಕರರ ಜೀವನಶೈಲಿ, ಉದ್ಯೋಗ ಮಾರುಕಟ್ಟೆ ಮತ್ತು ಕಂಪನಿಯ ವಿಶ್ವದೃಷ್ಟಿಯ ಮೇಲೆ ಹೇಗೆ ಬಿಂಬಿತವಾಗುತ್ತದೆ ಎಂಬುದನ್ನು ಗಮನದಿಂದ ನೋಡಬೇಕಿದೆ.